ಯಾರಿಗೆ, ಯಾವ ವಯಸ್ಸಲ್ಲಿ ಮಧುಮೇಹ ಬರಬಹುದು? ಗೊತ್ತು ಮಾಡಿಕೊಳ್ಳೋದು ಹೇಗೆ?
ಒಳ್ಳೇ ಜೀವನಶೈಲಿ, ಹೆಲ್ದೀ ಫುಡ್, ತಪ್ಪದೋ ಯೋಗ, ಧ್ಯಾನ, ಜಿಮ್ನಲ್ಲಿ ವರ್ಕ್ಔಟ್ ಮಾಡಿದವರಿಗೂ ಡಯಾಬಿಟೀಸ್ ಬರೋ ಚಾನ್ಸ್ ಇದ್ಯಾ? ಹೌದು ಎನ್ನುತ್ತೆ ಅಧ್ಯಯನ. ಆತನ ಲೈಫ್ಸ್ಟೈಲ್ ಎಲ್ಲರಿಗೂ ಮಾದರಿ ಎನ್ನುವಂತಿತ್ತು. ಕಳೆದ ಮೂರು ವರ್ಷಗಳಿಂದ ವೈದ್ಯರನ್ನು ಭೇಟಿಯೇ ಮಾಡಿರಲಿಲ್ಲ, ನಿಜ ಹೇಳಬೇಕೆಂದರೆ ವೈದ್ಯರನ್ನು ಭೇಟಿ ಮಾಡುವುದಕ್ಕೆ, ಆರೋಗ್ಯ ತಪಾಸಣೆ ನಡೆಸುವುದಕ್ಕೆ ಅವನಿಗೆ ಯಾವುದೇ ಅನಾರೋಗ್ಯ ಸಮಸ್ಯೆಯೂ ಕಾಡಿರಲಿಲ್ಲ. ತನ್ನ 34ನೇ ವಯಸ್ಸಿನಲ್ಲಿ, ಅರ್ಜುನ್ ಹೆಲ್ತ್ ಚೆಕ್ ಅಪ್ಗೆ ಒಳಗಾದಾಗ ತನ್ನ ಆರೋಗ್ಯ ಸ್ಥಿತಿಯ ಬಗೆಗಿನ ಸ್ಪಷ್ಟ ಚಿತ್ರಣ ಬೆಳಕಿಗೆ ಬಂದಿದೆ. ನಿಯಮಿತ ಆರೋಗ್ಯ ತಪಾಸಣೆಯಲ್ಲಿ 7.2ರ HbA1c ಇರುವುದು ಪತ್ತೆಯಾಗಿದೆ. ಅಂದರೆ ಆರೋಗ್ಯವಂತನಾಗಿದ ಕಂಡರೂ ಆ ವ್ಯಕ್ತಿಗೆ ಮಧುಮೇಹ ಇರುವುದು ದೃಢಪಟ್ಟಿದೆ.
ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಯಾಕೆಂದರೆ ಭಾರತದಾದ್ಯಂತ, ಎಂಡೋಕ್ರೋನೋಜಿಸ್ಟ್ ಯಾವ ಸುಳಿವನ್ನೂ ನೀಡದೆ ದೇಹದಲ್ಲಾಗುವ ಮಹತ್ವದ ಬದಲಾವಣೆಯನ್ನು ಗಮನಿಸುತ್ತಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯವಂತರಂತೆ, ಯಾವುದೇ ಸಮಸ್ಯೆ ಇಲ್ಲದವರಂತೆ ಕಾಣುವ ಜನರ ರಕ್ತದಲ್ಲಿಯೂ ಸಕ್ಕರೆ ಮಟ್ಟ ಏರಿಕೆಯಾಗಿರುವ ಕೇಸ್ಗಳು ದಿನೇ ದಿನೇ ಹೆಚ್ಚುತ್ತಿವೆ. ಯುವ ವೃತ್ತಿಪರರು, ನಿಯಮಿತವಾಗಿ ವಾಕ್ ಮಾಡುವವರು, ಅಧಿಕ ತೂಕದ ಫ್ಯಾಮಿಲಿ ಹಿಸ್ಟರಿ ಇಲ್ಲದವರಲ್ಲಿಯೂ ಬ್ಲಡ್ ಶುಗರ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣಗಳು ಏನೇ ಇರಲಿ. ಒಟ್ಟಿನಲ್ಲಿ ಸಮಸ್ಯೆ ಕಾಡುತ್ತಿರುವುದಂತೂ ಹೌದು.
'ಜ್ಞಾನ್ ಬೈ ಗಣೇಶ್ - ಮೇಕಿಂಗ್ ಇಂಡಿಯಾ ವಿನ್ ಓವರ್ ಡಯಾಬಿಟಿಸ್' ಎಂಬುದು ಸನ್ ಫಾರ್ಮಾ ಸಂಸ್ಥೆಯ ಜಾಗೃತಿ ಅಭಿಯಾನ. ಇದು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದ್ದು, ತಜ್ಞರ ಮಾಹಿತಿಯ ಮೂಲಕ ಭಾರತೀಯರಿಗೆ ಮಧುಮೇಹವನ್ನು ಚನ್ನಾಗಿ ಅರ್ಥಮಾಡಿಕೊಳ್ಳಲು, ತಡೆಗಟ್ಟಲು ಹಾಗೂ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗುವ ಉದ್ದೇಶ ಹೊಂದಿದೆ.
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿದ್ದರೂ, ನೀವು ಸಂಪೂರ್ಣ ಆರೋಗ್ಯವಂತರಂತೆ ಕಾಣಿಸಿಕೊಳ್ಳಬಹುದೇ?
ಸಾಮಾನ್ಯವಾಗಿ, ರಕ್ತದಲ್ಲಿನ ಅಧಿಕ ಸಕ್ಕರೆ ಪ್ರಮಾಣವು ವರ್ಷಗಳ ಕಾಲ ಯಾವುದೇ ಲಕ್ಷಣಗಳಿಲ್ಲದೆ ಇರಬಹುದು. ಪಿಡಿಡಬ್ಲ್ಯೂ (ಪ್ಲೇಟ್ಲೆಟ್ ಡಿಸ್ಟ್ರಿಬ್ಯೂಷನ್ ವಿಡ್ತ್) ಆರೋಗ್ಯಕರವಾಗಿದ್ದು, ಸಾಮಾನ್ಯ ವ್ಯಾಪ್ತಿಯಲ್ಲಿಯೇ ಇರುತ್ತದೆ. ಇದೇ ಕಾರಣಕ್ಕೆ, ಬೇರೆ ಕಾಯಿಲೆಗಳಿಗೆ ಪರೀಕ್ಷೆ ನಡೆಸುವಾಗ ಇದು ಹೆಚ್ಚಾಗಿ ಆಕಸ್ಮಿಕವಾಗಿ ಪತ್ತೆಯಾಗುತ್ತದೆ. ಅಲ್ಲದೆ, ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಕಾರಣವಿಲ್ಲದೆ ತೂಕ ಇಳಿಕೆ ಮತ್ತು ಸುಸ್ತು ಮುಂತಾದ ಸಾಮಾನ್ಯ ಲಕ್ಷಣಗಳು ಪ್ರಿಡಯಾಬಿಟಿಸ್ ಅಥವಾ ಹೊಸದಾಗಿ ಪತ್ತೆಯಾದ ಟೈಪ್ 2 ಮಧುಮೇಹ ಹೊಂದಿರುವವರಿಗಿಂತ ಟೈಪ್ 1 ಮಧುಮೇಹ ಹೊಂದಿರುವವರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎನ್ನುತ್ತಾರೆ ಸಮಾಲೋಚಕರು.
ರಕ್ತದಲ್ಲಿ ನಿರಂತರವಾಗಿ ಗ್ಲೂಕೋಸ್ ಮಟ್ಟ ಹೆಚ್ಚಿರುವುದು ಸದ್ದಿಲ್ಲದೆ ರಕ್ತನಾಳಗಳು ಮತ್ತು ನರಗಳಿಗೆ ಹಾನಿಯುಂಟುಮಾಡುತ್ತದೆ. ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು (ಸ್ಟ್ರೋಕ್), ಮೂತ್ರಪಿಂಡ ಕಾಯಿಲೆ, ದೃಷ್ಟಿ ದೋಷ ಮತ್ತು ನ್ಯೂರೋಪತಿಯ ಅಪಾಯ ಹೆಚ್ಚಾಗುತ್ತದೆ. ಇದನ್ನು ಮೊದಲೇ ಪತ್ತೆಹಚ್ಚಲು, ಅಧಿಕ ತೂಕ, ಮಧುಮೇಹ ಮತ್ತು/ಅಥವಾ ಅಧಿಕ ರಕ್ತದೊತ್ತಡದ ಕೌಟುಂಬಿಕ ಇತಿಹಾಸ, ಜಡ ಜೀವನಶೈಲಿ, ಅಸಹಜ ಕೊಲೆಸ್ಟ್ರಾಲ್ ಮಟ್ಟ, ಎನ್ಎಎಫ್ಎಲ್ಡಿ, ಅಥವಾ ಪಾಲಿಎಂಡೋಕ್ರೈನ್ ಮೆಟಬಾಲಿಕ್ ಓವರಿಯನ್ ಸಿಂಡ್ರೋಮ್ - ಪಿಎಂಒಎಸ್ (ಹಿಂದೆ ಪಿಸಿಒಎಸ್ ಎಂದು ಕರೆಯಲಾಗುತ್ತಿತ್ತು) ಮತ್ತು ಗೆಸ್ಟೇಷನಲ್ ಡಯಾಬಿಟಿಸ್ ಮೆಲ್ಲಿಟಸ್ (ಜಿಡಿಎಂ) ಹೊಂದಿರುವ ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ನಾವು ಸಲಹೆ ನೀಡುತ್ತೇವೆ.
ಆರೋಗ್ಯವಾಗಿದ್ದೇವೆ ಎನಿಸುವುದರಿಂದಲೇ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸಾಮಾನ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗುವುದಿಲ್ಲ. ನಿಮ್ಮ ವೈದ್ಯರು ಸೂಚಿಸಿದಂತೆ ಯಾವಾಗಲೂ ಎಫ್ಬಿಎಸ್ (ಫಾಸ್ಟಿಂಗ್ ಬ್ಲಡ್ ಶುಗರ್), ಎಚ್ಬಿಎ1ಸಿ, ಅಥವಾ ಒಜಿಟಿಟಿ (ಓರಲ್ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್) ನಂತಹ ನಿಯಮಿತ ತಪಾಸಣೆಗಳನ್ನು ಮಾಡಿಸಿಕೊಳ್ಳಿ. ಏಕೆಂದರೆ ಇದು ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟದಿಂದ ಉಂಟಾಗುವ ದೀರ್ಘಕಾಲೀನ ಅಡ್ಡಪರಿಣಾಮಗಳನ್ನು ಗುರುತಿಸಲು ಮತ್ತು ತಡೆಯಲು ಸಹಾಯ ಮಾಡುತ್ತದೆ ಎಂದು ಡಾ. ತೇಜಸ್ವಿ ವಿ ಅವರು ಸಲಹೆ ನೀಡುತ್ತಾರೆ.
ಕೇವಲ ಆರೋಗ್ಯಕರವಾಗಿ ಕಾಣುವ ಜೀವನಶೈಲಿ:
ಆಧುನಿಕ ಜೀವನ ಶೈಲಿಯು ಆರೋಗ್ಯ ಅಪಾಯವನ್ನು ಸೃಷ್ಟಿಸಿದೆ. ದೀರ್ಘ ಕೆಲಸದ ಸಮಯ, ಸರಿಯಾಗಿ ನಿದ್ದೆ ಇಲ್ಲದಿರುವುದು, ದೀರ್ಘಕಾಲದ ಒತ್ತಡ, ಅನಿಯಮಿತ ಊಟದ ಸಮಯ, ಪ್ಯಾಕ್ ಮಾಡಲಾದ ಆಹಾರಗಳ ಅತಿಯಾದ ಸೇವನೆ ಮತ್ತು ಸ್ನಾಯುಗಳನ್ನು ನಿರ್ಮಿಸುವ ಚಟುವಟಿಕೆ ಮಾಡದೇ ಇರುವುದು ಮಧುಮೇಹದ ಅಪಾಯ ಹೆಚ್ಚಿಸುತ್ತದೆ. ವ್ಯಕ್ತಿಯ ತೂಕ ಸ್ಥಿರವಾಗಿದ್ದರೂ ಅವರ ಆಹಾರ ಪದ್ದತಿ ಸಮಂಜಸವಾಗಿದೆ ಎಂದು ಕಂಡುಬಂದರೂ ರಕ್ತದಲ್ಲಿನ ಸಕ್ಕರೆಯ ಏರಿಕೆಗೆ ಇದು ಕಾರಣವಾಗಬಹುದು.
ಆರೋಗ್ಯಕರ ಜೀವನಶೈಲಿ ಇದ್ದರೆ ಟೈಪ್ 2 ಮಧುಮೇಹದ ಅಪಾಯ ಕುಗ್ಗುತ್ತದೆ. ಆದರೆ, ಬರುವುದೇ ಇಲ್ಲವೆಂದು ಹೇಳುವುದು ಕಷ್ಟ. ಅನುವಂಶೀಯತೆ, ವಯಸ್ಸು, ಹಾರ್ಮೋನ್ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ಕೆಲವು ಔಷಧಗಳು, ಹಲವು ದಿನಗಳಿಂದ ಕಾಡುವ ಆರೋಗ್ಯ ಸಮಸ್ಯೆಗಳೂ ಮಧುಮೇಹಕ್ಕೆ ಕಾರಣವಾಗಬಹುದು. ಅದಕ್ಕೆ ಅತ್ಯುತ್ತಮ ಆಹಾರ, ನಿಯಮಿತ ವ್ಯಾಯಾಮ ಮಾಡುವವರಿಗೂ ಶುಗರ್ ವಕ್ಕರಿಸಬಹುದು. ಅದರಲ್ಲಿಯೂ ಕುಟುಂಬದಲ್ಲಿ ಯಾರಿಗಾದರೂ ಈ ರೋಗದ ಇತಿಹಾಸವಿದ್ದರೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೊಳಿತು. ರೋಗ ಬರುವುದರನ್ನು ತಡೆಯುವ ಮೊದಲು, ಮೊದಲೇ ರೋಗವನ್ನು ಪತ್ತೆ ಹಚ್ಚಿದರೂ ಆರೋಗ್ಯವಂತರಾಗಿರಬಹುದು. Dr Rashmi K G, Consultant Endocrinologist, Manipal Hospitals, Hebbal & Yelahanka, Bengaluru

ತಜ್ಞರ ಪ್ರಕಾರ ಜನರಲ್ಲಿ ಕೆಲವು ಆಶ್ಚರ್ಯಕರ ರೋಗನಿರ್ಣಯಗಳು ಸಂಭವಿಸುತ್ತವೆ.
'ನಾನು ಸಿಹಿ ತಿನ್ನೋಲ್ಲ, ಪ್ರತಿದಿನ ವಾಕ್ ಮಾಡುತ್ತೇನೆ, ತೂಕವೂ ಹೆಚ್ಚಿಲ್ಲ, ಪರ್ಫೆಕ್ಟ್ ಲೈಫ್ಸ್ಟೈಲ್ ಇದ್ದ ನಂಗೂ ಮಧುಮೇಹವದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ,' ಎನ್ನುವವರು ಹಲವರಿದ್ದಾರೆ. ಆದರೆ, ಮಧುಮೇಹ ಕೇವಲ ಸಕ್ಕರೆ ಸೇವನೆ ಅಥವಾ ದೇಹದ ಗಾತ್ರದಿಂದ ಬರುವ ಕಾಯಿಲೆಯಲ್ಲ. ಇದು ಇನ್ಸುಲಿನ್ ಕಾರ್ಯ, ಯಕೃತ್ತಿನ ಚಯಾಪಚಯ, ಮೇದೋಜ್ಜೀರಕ ಗ್ರಂಥಿಯ ಆರೋಗ್ಯ, ಸ್ನಾಯು ಚಟುವಟಿಕೆ, ನಿದ್ರೆ, ಹಾರ್ಮೋನುಗಳು ಮತ್ತುಅನುವಂಶೀಯತೆಯನ್ನು ಒಳಗೊಂಡ ಸಮಸ್ಯೆ.
ಈ ಲಕ್ಷಣಗಳನ್ನು ತಳ್ಳಿ ಹಾಕಬೇಡಿ:
ಈ ಶುಗರ್ ಸಮಸ್ಯೆ ಬಹಳಷ್ಟು ಮಂದಿಗೆ ಗೊತ್ತೇ ಆಗುವುದಿಲ್ಲ. ಅದಕ್ಕೆ ಕಾರಣವೆಂದರೆ, ದೇಹ ನೀಡುವ ಸೂಚನೆಗಳನ್ನ ತಳ್ಳಿ ಹಾಕಿ ಬಿಡುವುದು. ಉದಾಹರಣೆಗೆ ಬಾಯಾರಿಕೆ ಹೆಚ್ಚಾಗುವುದಕ್ಕೆ ಬೇಸಿಗೆ ಉಷ್ಣತೆ ಕಾರಣ. ಹೆಚ್ಚು ಊಟ ಮಾಡಿರುವುದಕ್ಕೆ ಸುಸ್ತಾಗುತ್ತಿದೆ, ಹೆಚ್ಚು ನೀರು ಕುಡಿದಿರುವುದರಿಂದ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದೆ ಅಂದುಕೊಂಡು ಮಧುಮೇಹದ ಲಕ್ಷಣಗಳನ್ನೇ ತಳ್ಳಿಹಾಕಲಾಗುತ್ತದೆ.
ಬೇರೆ ಲಕ್ಷಣಗಳು: ನಿಯಮಿತ ವ್ಯಾಯಾಮದ ಹೊರತಾಗಿಯೂ ಹೊಟ್ಟೆ ಕೊಬ್ಬು ಕರಗದಿರುವುದು, ಪುನಾರಾವರ್ತಿತ ಸೋಂಕು, ಕುತ್ತಿಗೆ ಅಥವಾ ತೋಳಿನ ಸುತ್ತ ಕಪ್ಪಾಗುವುದು ಅಥವಾ ತೂಕದಲ್ಲಿ ಹಠಾತ್ ಏರಿಳಿತಗಳು.ಒಟ್ಟಾರೆಯಾಗಿ ಆರೋಗ್ಯವಾಗಿ ಕಾಣುವ ವ್ಯಕ್ತಿಯೂ ಅಪರೂಪವಾಗಿ ಗ್ಲೂಕೋಸ್ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ಕೆಲವೊಮ್ಮೆ, ಯಾವುದೇ ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ನಡೆಸುವ ಅಗತ್ಯವಿರುತ್ತದೆ.
ರೋಗ ಕಂಡು ಕೊಳ್ಳಳು ಏಕೈಕ ಮಾರ್ಗ:
ದೇಹ ರೆಡ್ ಫ್ಲಾಗ್ ಬೀಸುವವರೆಗೆ ಕಾಯುವ ಬದಲು, ರೋಗಲಕ್ಷಣಗಳು ಗೋಚರಿಸುವ ಮುನ್ನವೇ ತಪಾಸಣೆಗೆ ಒಳಪಟ್ಟರೆ ಆರಂಭದಲ್ಲಿಯೇ ರೋಗವನ್ನು ಪತ್ತೆ ಹಚ್ಚಬಹುದು. 'ಖಾಲಿ ಹೊಟ್ಟೆಯಲ್ಲಿ ಮಾಡಿಸುವ ರಕ್ತದ ಪರೀಕ್ಷೆ, HbA1c ಮತ್ತು ನಿಯಮಿತ ಆರೋಗ್ಯ ತಪಾಸಣೆಯಿಂದ ಸಮಸ್ಯೆ ಉಂಟಾಗುವುದಕ್ಕೆ ಬಹಳ ಮೊದಲೇ ರೋಗವನ್ನು ಗುರುತಿಸಬಹುದು. ಒಂದು ವೇಳೆ ತಪಾಸಣೆ ಮೂಲಕ ಮಧುಮೇಹವನ್ನು ಪತ್ತೆ ಹಚ್ಚದೇ ಇದ್ದರೆ ಅಧಿಕ ರಕ್ತದ ಸಕ್ಕರೆಯು ಕಣ್ಣು, ಮೂತ್ರಪಿಂಡ, ನರ ಮತ್ತು ಹೃದಯದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಒಮ್ಮೆ ಪ್ರಾರಂಭವಾದರೆ ಮತ್ತೆ ಮೊದಲಿನಂತೆ ನಾರ್ಮಲ್ ಮಾಡುವುದು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ಯಾರ ಆರೋಗ್ಯ ಹೇಗಿದೆ ಎನ್ನುವುದನ್ನು ಮೇಲ್ನೋಟದಿಂದ ಗುರುತಿಸುವುದು ಕಷ್ಟ. ಒಬ್ಬ ವ್ಯಕ್ತಿ ಹೊರ ನೋಟಕ್ಕೆ ಆರೋಗ್ಯವಂತನಂತೆ ಕಾಣಿಸಬಹುದು . ಆದರೆ, ದೇಹದೊಳಗೆ ನಿರಂತರ ಚಯಾಪಚಯ ಒತ್ತಡವನ್ನು ಹೊಂದಿರಬಹುದು. ದೇಹ ಸದ್ದಿಲ್ಲದೆ ಮಧುಮೇಹಕ್ಕೆ ತುತ್ತಾಗಬಹುದು. ಆದರೆ ಅರಿವು, ಜೀವನಶೈಲಿ ಸಮತೋಲನ ಮತ್ತು ಸಕಾಲಿಕ ತಪಾಸಣೆ ಮೂಲಕ ಒಬ್ಬರ ನಿಜವಾದ ಆರೋಗ್ಯ ಪ್ರೊಫೈಲ್ ಅನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಮಧುಮೇಹದಂಥ ಆರೋಗ್ಯ ಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆ ವಹಿಸಿ.
ವಿಶೇಷ ಸೂಚನೆ: ಈ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಜಾಗೃತಿಗಾಗಿ ಮಾತ್ರ ನೀಡಲಾಗಿದೆ. ಇದು ವೈದ್ಯರು ಅಥವಾ ಆರೋಗ್ಯ ತಜ್ಞರ ಸಲಹೆ ಅಥವಾ ಮಾರ್ಗದರ್ಶನಕ್ಕೆ ಯಾವುದೇ ಪರ್ಯಾಯವಲ್ಲ. Sun Pharmaceuticals Laboratories Limited (SPLL) ನಿಖರ ಮತ್ತು ಸಮಯೋಚಿತ ಮಾಹಿತಿಯನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ಆದರೆ ಈ ಕುರಿತು ಯಾವುದೇ ಭರವಸೆ ನೀಡುವುದಿಲ್ಲ. ನೀವು ನಿಮ್ಮ ವೈದ್ಯರು ಅಥವಾ ಆರೋಗ್ಯ ತಜ್ಞರ ಸಲಹೆಯನ್ನು ಪಡೆದು, ಅವರು ಸೂಚಿಸಿದ್ದನ್ನು ಪಾಲಿಸಬೇಕು. Sun Pharmaceuticals Laboratories Limited (SPLL)-ಗೆ ಪೂರ್ವಾನುಮತಿ ಪಡೆಯದೇ ಈ ವಿಷಯದ ಯಾವುದೇ ಭಾಗವನ್ನು ಯಾಂತ್ರಿಕ ಅಥವಾ ಎಲೆಕ್ಟ್ರಾನಿಕ್ ಯಾವುದೇ ರೂಪದಲ್ಲಿ ಮರು ಸೃಷ್ಟಿ, ಪ್ರಸಾರ ಮಾಡಬಾರದು. ಸಂಗ್ರಹಿಸಲೂ ಬಾರದು. SPI-IN-CVD-ZT---07-20260097
(ಬರಹ: ರಂಜಿತಾ ಆರ್.ಕೆ.)


Click it and Unblock the Notifications
