ಅದೃಷ್ಟ ಹೆಚ್ಚಾಗಬೇಕಾದರೆ ಮನಿ ಪ್ಲಾಂಟ್‌ ಅಲ್ಲ ಈ ಗಿಡವನ್ನೊಮ್ಮೆ ನೆಟ್ಟು ನೋಡಿ! ಹಣದ ಸಮಸ್ಯೆ ಮಾಯ

ಅನೇಕ ಮನೆಯಲ್ಲಿ ಎದುರಿಸುವ ದೊಡ್ಡ ಸಮಸ್ಯೆಗಳಲ್ಲಿ ಆರ್ಥಿಕ ತೊಂದರೆಯೂ ಒಂದು. ಕೆಲವರು ಎಷ್ಟೇ ದುಡಿದರೂ ಕೈನಲ್ಲಿ ಹಣ ನಿಲ್ಲುವುದೇ ಇಲ್ಲ. ದುಡಿದ ಹಣ ಕೈ ಸೇರುತ್ತಿದ್ದ ಹಾಗೆಯೇ ಖರ್ಚಿನ ಹಾದಿಯೂ ರೆಡಿಯಾಗಿರುತ್ತದೆ. ಹಗಲು ರಾತ್ರಿ ದುಡಿದರೂ ತಿಂಗಳ ಕೊನೆಗೆ ಹಣ ಉಳಿಯುವುದೇ ಇಲ್ಲ ಎನ್ನುವಾಗ ಕಿರಿ ಕಿರಿ ಉಂಟಾಗುವುದು ಸಹಜ. ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಾಸ್ತು ದೋಷಗಳು ಆರ್ಥಿಕ ನಷ್ಟವನ್ನುಂಟುಮಾಡಬಹುದು. ಆದರೆ, ವಾಸ್ತು ದೋಷ ಯಾವುದೇ ಇರಲಿ ಅದಕ್ಕೆ ಪರಿಹಾರವೂ ಇರುತ್ತದೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಕೆಲವು ವಸ್ತುಗಳನ್ನು ಇರಿಸುವ ಮೂಲಕ ವಾಸ್ತು ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಹೇಳಲಾಗುತ್ತದೆ.

ಮನಿಪ್ಲಾಂಟ್‌ಗಿಂತಲೂ ಹೆಚ್ಚು ಪರಿಣಾಮಕಾರಿ

ವಾಸ್ತು ಶಾಸ್ತ್ರದಲ್ಲಿ ಸಸ್ಯಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಹಣದ ಸಮಸ್ಯೆ ನಿವಾರಣೆಗೆ ಮನಿ ಪ್ಲಾಂಟ್‌ ನೆಡುವಂತೆ ಎಲ್ಲರೂ ಹೇಳುತ್ತಾರೆ. ಆದರೆ ಇದೊಂದು ಗಿಡ ಮನಿ ಪ್ಲಾಂಟ್‌ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆಯಂತೆ. ಹೌದು ನಾವಿಲ್ಲಿ ಹೇಳುತ್ತಿರುವುದು ಕ್ರಾಸ್ಸುಲಾ ಸಸ್ಯದ ಬಗ್ಗೆ. ಈ ಸಸ್ಯವನ್ನು ಜೇಡ್ ಸಸ್, ಕಾಯಿನ್‌ ಪ್ಲಾಂಟ್‌ ಅಂತ ಕೂಡಾ ಕರೆಯುತ್ತಾರೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಇದು ಅದೃಷ್ಟ, ಸಮೃದ್ಧಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ ಎನ್ನುವುದು ನಂಬಿಕೆ. ಇದನ್ನು ಸಾಮಾನ್ಯ ಭಾಷೆಯಲ್ಲಿ ಹಣದ ಮರ ಎಂದೂ ಕರೆಯುವುದಿದೆ.

Crassula Plant

ಈ ಸಸ್ಯವನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇರಿಸುವುದರಿಂದ ಸಕಾರಾತ್ಮಕ ಶಕ್ತಿ ಮತ್ತು ಆರ್ಥಿಕ ಬಲ ಬರುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿಯೇ ಜನರು ಇದನ್ನು ತಮ್ಮ ಮನೆಯ ಅಲಂಕಾರಿಕ ಸಸ್ಯಗಳ ಜೊತೆ ಸೇರಿಸಿಕೊಳ್ಳುತ್ತಾರೆ.

ಸಮೃದ್ಧಿ ಮತ್ತು ಅಭಿವೃದ್ಧಿಯ ಸಂಕೇತ

ಕ್ರಾಸ್ಸುಲಾ ಸಸ್ಯದ ಪ್ರಮುಖ ಲಕ್ಷಣವೆಂದರೆ ಅದು ಸಂಪತ್ತು ಮತ್ತು ಅದೃಷ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಸಸ್ಯವನ್ನು ನೆಟ್ಟ ಮನೆಯಲ್ಲಿ ಯಾವತ್ತೂ ಹಣದ ಸಮಸ್ಯೆ ಎದುರಾಗುವುದೇ ಇಲ್ಲವಂತೆ. ಹೊಸ ಆರ್ಥಿಕ ಅವಕಾಶಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಇದರ ದುಂಡಗಿನ, ದಟ್ಟವಾದ ಎಲೆಗಳನ್ನು ಸಮೃದ್ಧಿ ಮತ್ತು ಅಭಿವೃದ್ಧಿಯ ಸಂಕೇತ. ಆದ್ದರಿಂದ, ಇದನ್ನು ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಸ್ಯ ಕೂಡಾ ಹೌದು.

ಈ ದಿಕ್ಕಿನಲ್ಲಿ ಇರಿಸಿದರೆ ಲಾಭ

ಮನೆಯಲ್ಲಿ ಕ್ರಾಸ್ಸುಲಾ ಅಥವಾ ಜೇಡ್‌ ಗಿಡವನ್ನು ಯಾವ ದಿಕ್ಕಿನಲ್ಲಿ ಇರಿಸುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಮನೆಯ ಮುಖ್ಯ ದ್ವಾರದ ಬಳಿ ಅಥವಾ ಉತ್ತರ ದಿಕ್ಕಿನಲ್ಲಿ ಈ ಸಸ್ಯವನ್ನು ಇರಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆಯಂತೆ. ಇನ್ನು ಉತ್ತರ ದಿಕ್ಕು ಎಂದರೆ ಅದು ಕುಬೇರನ ಮೂಲೆ. ಈ ದಿಕ್ಕಿನಲ್ಲಿ ಜೇಡ್‌ ಗಿಡವನ್ನು ನೆಟ್ಟರೆ ಒಂದಲ್ಲ ಒಂದು ಮೂಲದಿಂದ ಹಣ ಬರುತ್ತಲೇ ಇರುತ್ತದೆಯಂತೆ. ಅನೇಕ ಜನರು ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿಯಾಗಲಿ ಎನ್ನುವ ಉದ್ದೇಶದಿಂದ ತಮ್ಮ ಕಚೇರಿ, ಅಂಗಡಿ ಅಥವಾ ಕ್ಯಾಶ್‌ ಕೌಂಟರ್‌ ಬಳಿ ಈ ಗಿಡವನ್ನು ಸಣ್ಣ ಪಾಟ್‌ನಲ್ಲಿ ಹಾಕಿ ಇರಿಸಲಾಗುತ್ತದೆ.

ಈ ಸಸ್ಯದ ಬಗೆಗಿನ ಇನ್ನೊಂದು ಮುಖ್ಯ ವಿಷಯ ಎಂದರೆ ಇದನ್ನು ಬೆಳೆಸುವುದು ತುಂಬಾ ಸುಲಭ. ಕಡಿಮೆ ನೀರು ಮತ್ತು ಬೆಳಕು ಇದ್ದರೆ ಸಾಕು ಈ ಗಿಡ ಚೆನ್ನಾಗಿ ಬೆಳೆಯುತ್ತದೆ. ಈ ಸಸ್ಯವು ಸುತ್ತಮುತ್ತಲಿನ ಪ್ರದೇಶಗಳನ್ನು ಶುದ್ಧೀಕರಿಸುತ್ತದೆ ಮತ್ತು ತಾಜಾತನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ವಾತಾವರಣವನ್ನು ಸೃಷ್ಟಿಸುತ್ತದೆ ಎಂದೂ ಹೇಳಲಾಗುತ್ತದೆ.

ಅಷ್ಟಾಗಿ ಕಾಳಜಿಯ ಅಗತ್ಯವೂ ಇಲ್ಲ

ತೋಟಗಾರಿಕೆ ತಜ್ಞರು ಹೇಳುವಂತೆ ಕ್ರಾಸ್ಸುಲಾ ಸಸ್ಯವನ್ನು ನೇರ ಸೂರ್ಯನ ಬೆಳಕಿನಿಂದ ದೂರವಾಗಿ ನೆರಳಿನ ಸ್ಥಳದಲ್ಲಿ ಇಡುವುದು ಉತ್ತಮ. ಇದಕ್ಕೆ ಆಗಾಗ ನೀರು ಹಾಕುವ ಅಗತ್ಯವಿಲ್ಲ. ಮಣ್ಣು ಒಣಗಿದಾಗ ಮಾತ್ರ ಸ್ವಲ್ಪ ನೀರು ಹಾಕಿದರೆ ಸಾಕಾಗುತ್ತದೆ. ಈ ಸಸ್ಯವು ಮಣ್ಣಿನಲ್ಲಿ ದೀರ್ಘಕಾಲದವರೆಗೆ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಇದು ಸುಲಭವಾಗಿ ಕೊಳೆಯುವುದಿಲ್ಲ, ಇದು ಕಡಿಮೆ ನಿರ್ವಹಣೆ ಅಗತ್ಯವಿರುವ ಸಸ್ಯವಾಗಿದ್ದು, ಮನೆ, ಕಚೇರಿಯ ಒಳಗೆ ಇರಿಸಿ ಬೆಳೆಸಲು ಸೂಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+