ಶುಗರ್ ಇರೋರು ಅನ್ನವನ್ನೇ ತಿನ್ನಬಾರಾದಾ? ತಜ್ಞರ ಅಭಿಪ್ರಾಯವೇನು?

ಅಯ್ಯೋ ನಂಗೆ ಶುಗರ್ ಇದೆಯಪ್ಪಾ, ನಾನು ಅನ್ನವನ್ನೇ ತಿನ್ನೋಲ್ಲ ಅನ್ನೋದನ್ನು ಕೇಳಿದ್ದೇವೆ. ರಾಗಿ, ಚಪಾತಿಯನ್ನೇ ತಿಂದು ಬದುಕವವರಿದ್ದಾರೆ. ಆದರೆ, ವಂಶಪಾರಂಪರ್ಯವಾಗಿ ಅನ್ನವನ್ನು ತಿಂದು ಬದುಕಿದವರು ಸಡನ್ ಆಗಿ ಅನ್ನ ಬಿಡಬಹುದಾ? ಅಷ್ಟಕ್ಕೂ ಶುಗರ್ ಪೇಷೆಂಟ್ಸ್ ಎಷ್ಟು ಅನ್ನ ತಿನ್ನಬಹುದು?

rice sugar

ಇಲ್ಲಿದೆ ಮಾಹಿತಿ

ಪಾರಂಪರಿಕವಾಗಿ ಭಾರತೀಯರ ಆಹಾರ ಪದ್ಧತಿಯಲ್ಲಿ ಅನ್ನವು ಅನೇಕ ತಲೆಮಾರುಗಳಿಂದ ಪ್ರಧಾನ ಆಹಾರ. ಆದರೆ ಇತ್ತೀಚಿಗೆ ನಿಯಮಿತ ಆಹಾರದಲ್ಲಿ ಅನ್ನದ ಸೇವನೆ ಹಾಗೂ ಮಧುಮೇಹ ಸಂಭವಿಸುವ ಸಾಧ್ಯತೆಯ ಕುರಿತು ಹಲವಾರು ಚರ್ಚೆಗಳಾಗುತ್ತಿವೆ. ತುಸು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (Glycaemic Index) ಹೊಂದಿರುವ ಕಾರಣದಿಂದ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಹಾಗೂ ಮಧುಮೇಹ ಅಥವಾ ಪ್ರೀ-ಡಯಾಬಿಟಿಸ್ ಇರುವವರು ಅನ್ನವನ್ನು ಎಚ್ಚರಿಕೆಯಿಂದ ಬಳಸುವುದು ಸಾಮಾನ್ಯ. ಆದರೆ ಅನ್ನ ನಿಜವಾಗಿಯೂ ಅಪಾಯವೇ? ಅನೇಕ ವೈದ್ಯರು ಮತ್ತು ಆಹಾರತಜ್ಞರ ಅಭಿಪ್ರಾಯದಲ್ಲಿ, ಈ ಪ್ರಶ್ನೆಗೆ ಉತ್ತರ ಅಷ್ಟು ಸರಳವಾಗಿಲ್ಲ.

ಮಧುಮೇಹಕ್ಕೆ ಯಾವುದೇ ಒಂದು ಆಹಾರ ಪದಾರ್ಥವೇ ಕಾರಣ ಎಂದು ವೈದ್ಯರಿಗೂ ಪರಿಗಣಿಸಲು ಸಾಧ್ಯವಿಲ್ಲ. ಅನ್ನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಾತ್ಕಾಲಿಕವಾಗಿ ಹೆಚ್ಚಿಸಬಹುದಾದರೂ, ಅದು ದೇಹಕ್ಕೆ ಅಗತ್ಯವಾದ ಕಾರ್ಬೊಹೈಡ್ರೇಟ್‌ಗಳ ಅತ್ಯುತ್ತಮ ಮೂಲ ಎಂಬುದನ್ನು ಮರೆಯಬಾರದು. ಆದ್ದರಿಂದ ಮಧುಮೇಹವನ್ನು ತಡೆಯಲು ಅಥವಾ ನಿಯಂತ್ರಿಸಲು ಅನ್ನವನ್ನು ಸಂಪೂರ್ಣವಾಗಿ ತ್ಯಜಿಸುವುದು ಸೂಕ್ತ ಪರಿಹಾರವಲ್ಲ. ಮಧುಮೇಹ ಉಗಮಕ್ಕೆ ಹಲವು ಅಂಶಗಳು ಕಾರಣವಾಗಬಲ್ಲದು. ಅತಿಯಾದ ತೂಕ, ದೈಹಿಕ ಚಟುವಟಿಕೆಯ ಕೊರತೆ, ಸಮರ್ಪಕ ನಿದ್ರೆಯ ಅಭಾವ, ಒತ್ತಡ, ಅನುವಂಶಿಕತೆ ಹಾಗೂ ಒಟ್ಟಾರೆ ಅನಾರೋಗ್ಯಕರ ಆಹಾರ ಪದ್ಧತಿ, ಆಧುನಿಕ ಜೀವನಶೈಲಿಯ ಪ್ರಮುಖ ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ.

'ಜ್ಞಾನ್ ಬೈ ಗಣೇಶ್ - ಮೇಕಿಂಗ್ ಇಂಡಿಯಾ ವಿನ್ ಓವರ್ ಡಯಾಬಿಟಿಸ್' ಎಂಬುದು ಸನ್ ಫಾರ್ಮಾ ಸಂಸ್ಥೆಯ ಜಾಗೃತಿ ಅಭಿಯಾನ. ಇದು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದ್ದು, ತಜ್ಞರ ಮಾಹಿತಿಯ ಮೂಲಕ ಭಾರತೀಯರಿಗೆ ಮಧುಮೇಹವನ್ನು ಚನ್ನಾಗಿ ಅರ್ಥಮಾಡಿಕೊಳ್ಳಲು, ತಡೆಗಟ್ಟಲು ಹಾಗೂ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗುವ ಉದ್ದೇಶ ಹೊಂದಿದೆ.

ಬಿಳಿ ಅಕ್ಕಿ ಬದಲು ಕಂದು ಅಥವಾ ಕೆಂಪಕ್ಕಿ ಬಳಸಿ: ಹೆಚ್ಚು ಪಾಲಿಶ್ ಮಾಡಿದ ಬಿಳಿ ಅಕ್ಕಿಗಿಂತ, ಕಂದು ಅಥವಾ ಕೆಂಪಕ್ಕಿಯಲ್ಲಿ ನಾರಿನಾಂಶ ಸಮೃದ್ಧವಾದ ಹೊಟ್ಟು (bran) ಉಳಿದಿರುತ್ತದೆ. ಇದು ರಕ್ತದಲ್ಲಿ ಗ್ಲೂಕೋಸ್ ಹೀರಿಕೊಳ್ಳುವುದನ್ನು ಸಹಜವಾಗಿ ನಿಧಾನಗೊಳಿಸುತ್ತದೆ.

Rice and Diabetes

ಡಯಾಬಿಟಿಸ್ ಪ್ಲೇಟ್ ವಿಧಾನ ಅನುಸರಿಸಿ:

ನಿಮ್ಮೂಟದಲ್ಲಿ ಅಕ್ಕಿ ಪ್ರಮಾಣ ಹೆಚ್ಚಾಗದಂತೆ ತಟ್ಟೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ. ತಟ್ಟೆಯ 1/2 ಭಾಗವು ಪಿಷ್ಟರಹಿತ ತರಕಾರಿಗಳಿರಲಿ (ಉದಾಹರಣೆಗೆ ಪಾಲಕ್ ಸೊಪ್ಪು, ಸಲಾಡ್), 1/4 ಭಾಗವನ್ನು ಪ್ರೋಟೀನ್‌ಯುಕ್ತ ಆಹಾರಗಳಿರಲಿ (ಉದಾಹರಣೆಗೆ ಬೇಳೆ, ಪನ್ನೀರ್ ಅಥವಾ ಕೋಳಿ ಮಾಂಸ), ಇನ್ನುಳಿದ 1/4 ಭಾಗವನ್ನು ಮಾತ್ರ ಅನ್ನವಿರಲಿ.

ಅನ್ನವನ್ನು ಕೊನೆಯಲ್ಲಿ ತಿನ್ನಿ:

ಮೊದಲು ತರಕಾರಿಗಳು ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇವಿಸಿ, ನಂತರ ಊಟದ ಕೊನೆಯಲ್ಲಿ ಅನ್ನವನ್ನು ಸೇವಿಸಿ. ಈ ಕ್ರಮದಿಂದ ಗ್ಲೂಕೋಸ್ ರಕ್ತಕ್ಕೆ ನಿಧಾನವಾಗಿ ಸೇರುತ್ತದೆ ಮತ್ತು ರಕ್ತದ ಸಕ್ಕರೆ ಮಟ್ಟ ಏಕಾಏಕಿ ಹೆಚ್ಚಾಗುವುದನ್ನು ತಡೆಯಬಲ್ಲದು.

Dr Sanjana Rai K, MBBS, MD (General Medicine), DM Endocrinology, Diabetes & Metabolism), Assistant Professor, Father Muller Medical College, Mangalore

ಹಾಗಾದ್ರೆ ಎಷ್ಟು ಅನ್ನ ತಿನ್ನಬಹುದು?

ಹೀಗಾಗಿ ಮುಖ್ಯ ಪ್ರಶ್ನೆ 'ಅನ್ನವನ್ನು ಆಹಾರದಲ್ಲಿ ಸೇರಿಸಬೇಕೋ ಬೇಡವೋ?' ಎಂಬುದಲ್ಲ; ಅದನ್ನು ಯಾವ ರೀತಿಯಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುವುದು ಮುಖ್ಯ ಪ್ರಶ್ನೆ. ಕಡಿಮೆ ನಾರಿನಾಂಶವುಳ್ಳ ಆಹಾರ ಹಾಗೂ ಜಡ-ಜೀವನಶೈಲಿಯೊಂದಿಗೆ ಅತಿಯಾದ ಪ್ರಮಾಣದಲ್ಲಿ ಅನ್ನ ಸೇವಿಸಿದಾಗ ಮಾತ್ರ ಅದು ಸಮಸ್ಯೆಯಾಗಬಹುದು. ತರಕಾರಿ, ಪ್ರೋಟೀನ್‌ಯುಕ್ತ ಆಹಾರ ಅಥವಾ ದೈಹಿಕ ವ್ಯಾಯಾಮವಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಅನ್ನ ಸೇವಿಸುವುದರಿಂದ ತೂಕ ಹೆಚ್ಚಳ ಮತ್ತು ಇನ್ಸುಲಿನ್ ಪ್ರತಿರೋಧ (Insulin Resistance) ಉಂಟಾಗುವ ಸಾಧ್ಯತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+