Batani Paratha Recipe: ಬಟಾಣಿ ಪರೋಟ ಮನೆಯಲ್ಲೇ ತಯಾರಿಸಿ ಪಟಪಟ!
ರಾತ್ರಿ ಊಟಕ್ಕೆ ಪರೋಟ ಮಾಡುವ ಮನಸ್ಸಾಗಿದಿಯಾ? ಆಲೂ ಪರೋಟ ಮಾಡಿ ಮಾಡಿ ಬೇಜಾರ್ ಆಗಿದಿಯಾ? ಹಾಗಾದರೆ ನಿಮ್ಮ ಮನೆಯಲ್ಲಿ ಬಟಾಣಿ ಪರೋಟವನ್ನು ಮಾಡಿ. ಮನೆಯಲ್ಲಿ ಎಲ್ಲರೂ ಕೂಡ ಇಷ್ಟಪಟ್ಟು ತಿಂತಾರೆ ಜೊತೆಗೆ ನೀವು ಕುಟುಂಬ ಸದಸ್ಯರ ಮೆಚ್ಚುಗೆ ಕೂಡ ಪಡೆಯುವುದರಲ್ಲಿ ಅನುಮಾನವೇ ಇಲ್ಲ.
ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಹಸಿ ಬಟಾಣಿ ಇರುತ್ತದೆ. ಅದನ್ನು ಬಳಸಿಕೊಂಡು ರುಚಿಯಾಗಿ ಪರೋಟ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ. ಸದ್ಯ ನಾವು ನಿಮಗೆ ಆ ವಿಧಾನವನ್ನು ಹೇಳಿ ಕೊಡುತ್ತೇವೆ. ಹಾಗಾದರೆ ತಡ ಮಾಡುವುದು ಬೇಡ ಬಟಾಣಿ ಪರೋಟ ಮಾಡುವ ವಿಧಾನವನ್ನು ತಿಳಿಯೋಣ.

ಬಟಾಣಿ ಪರೋಟಾ ತಯಾರಿಸಲು ಬೇಕಾಗುವ ಪದಾರ್ಥಗಳು:
* ಬಟಾಣಿ ಒಂದು ಕಪ್
* ಹಸಿ ಶುಂಠಿ ಒಂದು ಇಂಚು
* ಹಸಿ ಮೆಣಸಿನಕಾಯಿ ಒಂದು
* ಗೋಧಿ ಹಿಟ್ಟು ಎರಡು ಕಪ್
* ಖಾರದ ಪುಡಿ ಅರ್ಧ ಚಮಚ
* ದನಿಯಾ ಪುಡಿ ಒಂದು ಟೇಬಲ್ ಸ್ಪೂನ್
* ಉಪ್ಪು
* ಅರಿಶಿಣ ಪುಡಿ ಸ್ವಲ್ಪ
* ಗರಂ ಮಸಾಲ ಪುಡಿ ಅರ್ಧ ಟೇಬಲ್ ಸ್ಪೂನ್
* ಜೀರಿಗೆ ಒಂದು ಟೇಬಲ್ ಸ್ಪೂನ್
* ಎಣ್ಣೆ ಎರಡು ಚಮಚ

ಬಟಾಣಿ ಪರೋಟ ತಯಾರಿಸುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿ ಜಾರ್‌ಗೆ ಹಸಿ ಬಟಾಣಿ, ಹಸಿ ಶುಂಠಿ ಒಂದು ಇಂಚು, ಹಸಿ ಮೆಣಸಿನಕಾಯಿ ಒಂದು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
*ಬಳಿಕ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ತೆಗೆದುಕೊಳ್ಳಿ, ಅದಕ್ಕೆ ಮಿಕ್ಸಿ ಮಾಡಿಕೊಂಡ ಬಟಾಣಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ
* ಬಳಿಕ ಇದಕ್ಕೆ ಖಾರದ ಪುಡಿ, ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ ಪುಡಿ, ಗರಂ ಮಸಾಲ ಹಾಕಿ, ಜೀರಿಗೆ ಒಂದು ಟೇಬಲ್ ಸ್ಪೂನ್ ತೆಗೆದುಕೊಂಡು ಚೆನ್ನಾಗಿ ಕೈಯಲ್ಲಿ ಉಜ್ಜಿ ಹಾಕಿ.
* ಎಣ್ಣೆ ಎರಡು ಚಮಚ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ನಾದಿ ಕಲಿಸಿಕೊಳ್ಳಬೇಕು.

* ನಂತರ ಎರಡು ಚಮಚ ಎಣ್ಣೆ ಹಾಕಿ ಇಪ್ಪತ್ತು ನಿಮಿಷ ಮುಚ್ಚಿಡಿ.
* ಬಳಿಕ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಲಟ್ಟಿಸಿಕೊಳ್ಳಿ. ಚಪಾತಿಯಷ್ಟು ಅಗಲವಾಗಿ ಹಾಗೂ ಅದರಷ್ಟೇ ತೆಳುವಾಗಿ ಲಟ್ಟಿಸಿಕೊಳ್ಳಿ.
* ನಂತರ ತವೆ ಮೇಲಾಕಿ ಸಪಾತಿಯಂತೆ ಬೇಯಿಸಿಕೊಳ್ಳಿ. ಇದು ಬೆಳಗಿನ ಉಪಾಹಾರಕ್ಕೆ ತುಂಬಾ ಚೆನ್ನಾಗಿರುತ್ತದೆ. ಇದನ್ನು ನೀವು ಚಟ್ನಿ ಜೊತೆಗೆ ತಿನ್ನಬಹುದು, ಬರಿದಾಗಿಯೂ ಇದನ್ನು ಸೇವಿಸಬಹುದು.












Click it and Unblock the Notifications