ಬಸ್ಸಲ್ಲಿ ಬೇಗ ಬರೋಣ ಅಂತಾನೇ ಇದ್ದೆ ಮ್ಯಾಮ್!
ಟೀಚರ್ : ನಿಂದು ಅತಿಯಾಯಿತು. ದಿನಕ್ಕೊಂದು ಕಾರಣ ಹೇಳ್ತೀಯಾ. ಯಾಕೋ ಲೇಟ್ ಆಗಿ ಬಂದೆ ಕಾಲೇಜಿಗೆ?
ಸ್ಟುಡೆಂಟ್ : ಮ್ಯಾಮ್, ನನ್ನ ಪಲ್ಸರ್ ಬೈಕ್ ಪಂಚರ್ ಆಯಿತು ಮ್ಯಾಮ್.
ಟೀಚರ್ : ಪಂಚರ್ ಆದ್ರೆ ಏನು? ಬೈಕ್ ಸೈಡ್ ಗೆ ಇಟ್ಟುಬಿಟ್ಟು ಬಸ್ ನಲ್ಲಿ ಬರಬೇಕಾಗಿತ್ತು. ಅದು ವಿಧೇಯ ವಿದ್ಯಾರ್ಥಿಗಳ ಲಕ್ಷಣ.
ಸ್ಟುಡೆಂಟ್ : ಬಸ್ ನಲ್ಲೆ ಹೋಗೋಣ. ಕಾಲೇಜಿಗೆ ಲೇಟ್ ಆಗಿ ಹೋಗೋದು ಬೇಡಾಂತ ಎಷ್ಟು ಹೇಳಿದ್ರು ಕೇಳಿಲ್ಲ ಮ್ಯಾಮ್.
ಟೀಚರ್ : ಯಾರೋ ಅದು?
ಸ್ಟುಡೆಂಟ್ : ಅದೇ ನಿಮ್ಮ ಎರಡನೇ ಮಗಳು ಸುಶೀಲಾ ಮ್ಯಾಮ್!
***
ತಿಮ್ಮ : ನಿನಗೆ ಕ್ಯಾನ್ಸರ್ ತಾನೇ ಇರೋದು.
ಗುಂಡ : ಹೌದು.
ತಿಮ್ಮ : ಮತ್ತೆ ಯಾಕೆ ಎಲ್ಲರ ಬಳಿ ಏಡ್ಸ್ ಇದೆಂತಾ ಹೇಳ್ತೀಯಾ?
ಗುಂಡ : ಯಾಕೆಂದರೆ, ನಾನು ಸತ್ತ ಮೇಲೆ ನನ್ನ ಹೆಂಡತಿಗೆ ಯಾರೂ ಲೈನ್ ಹೊಡೀಬಾರ್ದು ನೋಡು, ಅದಕ್ಕೆ.
***
ತಿಮ್ಮ : ಸಾರ್.. ಜನಜಾಗೃತಿಗಾಗಿ ಮೋಟರ್ ಬೈಕ್ ಜಾಥಾ ಇಟ್ಕೊಂದಿದ್ದೀವಿ ಸಾರ್..
ಜನ : ಬಹಳ ಒಳ್ಳೆ ಕೆಲಸ, ಯಾವ ಉದ್ದೇಶಕ್ಕಾಗಿ ಈ ಬೈಕ್ ಜಾಥಾ.
ತಿಮ್ಮ : ಪೆಟ್ರೋಲ್ ಉಳಿಸಿ, ದೇಶ ಉಳಿಸಿ..












Click it and Unblock the Notifications