ಕೇಕ್ ಇಲ್ಲೇ ತಿಂತೀರಾ ಅಥವಾ ಪ್ಯಾಕ್ ಮಾಡಲಾ?

ಲವೀನಾಳನ್ನು ಮದುವೆಯಾಗುವ ಹುಮ್ಮಸ್ಸಿನಲ್ಲಿರುವ ಯತೀಶ ಒಂದು ಸುಪ್ರಸಿದ್ಧ ಬೇಕರಿಗೆ ಬರುತ್ತಾನೆ. ತನ್ನನ್ನು ಲಗ್ನವಾಗಲಿರುವ ಲವೀನಾಳನ್ನು ಮೆಚ್ಚಿಸಬೇಕೆಂಬ ಉತ್ಸಾಹ ಆತನಲ್ಲಿ ಮನೆ ಮಾಡಿತ್ತು.

ಯತೀಶ : ನೋಡಿ ಸಾರ್, ನಾನು ಮದುವೆಯಾಗಲಿರುವ ಹೆಂಡತಿಯ ನಾಯಿಗಾಗಿ ಉತ್ಕೃಷ್ಟವಾದ ಕೇಕ್ ಬೇಕಾಗಿತ್ತು.

ಅಂಗಡಿಯವ : ಕೇಕ್ ಇಲ್ಲೇ ತಿಂತೀರಾ ಅಥವಾ ಪ್ಯಾಕ್ ಮಾಡಲಾ?

***

ಮಹಿಳೆಯೊಬ್ಬಳು ಹೆಸರಾಂತ ಆಸ್ಪತ್ರೆಯ ಮೇಲೆ ಕೇಸ್ ದಾಖಲಿಸಿರುತ್ತಾಳೆ. ಕಾರಣವೇನೆಂದರೆ, ತನ್ನ ಗಂಡನ ಕಣ್ಣಿನ ಆಪರೇಶನ್ ಆದ ಮೇಲೆ ಆತ ಆಕೆಯ ಮೇಲೆ ಆಸಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನಂತೆ. ಆತ ಆಕೆಯನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆಯಂತೆ.

ಇದಕ್ಕೆ ಆಸ್ಪತ್ರೆ ಕೋರ್ಟಿಗೆ ಕೊಟ್ಟ ಉತ್ತರ : ಆಕೆಯ ಗಂಡ ಕ್ಯಾಟರ್ಯಾಕ್ಟ್ ಸರ್ಜರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಅವರ ಕಣ್ಣೀಗ ಸರಿಯಾಗಿ ಕಾಣಿಸುತ್ತಿದೆ. ಗಂಡ ಹೆಂಡತಿಯನ್ನು ನಿರ್ಲಕ್ಷಿಸುತ್ತಿದ್ದರೆ ನಮ್ಮದೇನು ತಪ್ಪು?

ಉತ್ತರ ಕೇಳಿ ಕೋರ್ಟ್ ಕೇಸನ್ನು ವಜಾ ಮಾಡಿತು!

Jokes for the day in Kannada

ಯತೀಶ್ : ಲವೀನಾ ಡಾರ್ಲಿಂಗ್, ಒಂದಿಷ್ಟು ಇನ್ಶೂರನ್ಸ್ ಹಣ ಬಂದಿದೆ, ಬಾ ವಿದೇಶ ಸುತ್ತಾಡಿಕೊಂಡು ಬರೋಣ.

ಲವೀನಾ : ವಾವ್ ಸೂಪರ್. ಯಾವ ದೇಶಕ್ಕೆ ಹೋಗೋಣ?

ಯತೀಶ್ : ದುಬೈ

ಲವೀನಾ : ದುಬೈನಾ? ನನಗೇನು ತಲೆ ಕೆಟ್ಟಿದೆಯಾ? ನನ್ನನ್ನೇನು ಶ್ರೀದೇವಿ ಅಂದ್ಕೊಂಡ್ರಾ?

***

ಪೊಲೀಸ್ : ಯಾಕಯ್ಯಾ, ಕ್ರೆಡಿಟ್ ಕಾರ್ಡ್ ಕಳುವಾಗಿದ್ದರ ಬಗ್ಗೆ ಬೇಗನೆ ಏಕೆ ದೂರು ನೀಡಲಿಲ್ಲ.

ಆತ : ಸಾರ್, ಆತ ನನ್ನ ಹೆಂಡತಿಗಿಂತ ಕಡಿಮೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದ.

ಪೊಲೀಸ್ : ಮತ್ತೆ ಈಗ್ಯಾಕೆ ದೂರು ನೀಡಲು ಬಂದಿದ್ದಿಯಾ?

ಆತ : ಸಾರ್, ಇದೀಗ ಆತನ ಹೆಂಡತಿ ಆ ಕ್ರೆಡಿಟ್ ಕಾರ್ಡ್ ಬಳಸಲು ಆರಂಭಿಸಿದ್ದಾಳೆ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+