• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆ: ಒಂದು ಹನಿಗೆ 65 ರೂಪಾಯಿ..

By *ಬಾಲರಾಜ್ ತಂತ್ರಿ
|
Google Oneindia Kannada News
25 ವರ್ಷಗಳ ನಂತರ ಮಾಧ್ಯಮದಲ್ಲಿ ಈ ರೀತಿಯ ಬ್ರೇಕಿಂಗ್ ನ್ಯೂಸ್ ಬಂದರೆ ಹೇಗಿರುತ್ತೆ?

ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿ ಸಚಿವಾಲಯ ಆದೇಶ ಹೊರಡಿಸಿದೆ. ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಒಂದು ಹನಿ ಪೆಟ್ರೋಲ್ ಬೆಲೆ ರೂಪಾಯಿ 65 ಕ್ಕೆ ಏರಿದೆ.
***
ಅಣ್ಣಾ ಹಜಾರೆ ಮೊಮ್ಮಗರೊಬ್ಬರನ್ನು ದತ್ತು ತೆಗೆದುಕೊಂಡಿದ್ದು ಅವರಿಗೆ ಮುನ್ನಾ ಹಜಾರೆ ಎಂದು ನಾಮಕರಣ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ಮುನ್ನಾ ಹಜಾರೆ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅಣ್ಣಾ ಹೇಳಿಕೆ ನೀಡಿದ್ದಾರೆ. ಅಣ್ಣಾ ಅವರ ಈ ನಡೆಯ ಬೆನ್ನಲ್ಲೇ ಇನ್ನೊಂದು ವಾರದಲ್ಲಿ ಲೋಕಪಾಲ್ ಮಸೂದೆಯನ್ನು ಸಂಸತ್ತಿನಲ್ಲಿ ಆಂಗೀಕರಿಸಲಾಗುವುದು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿಕೆ ನೀಡಿದೆ.
***
ಹೈಕಮಾಂಡ್ ಆದೇಶವನ್ನು ಧಿಕ್ಕರಿಸಿ ಮಾಜಿ ಸಿಎಂ ಯಡಿಯೂರಪ್ಪ ರೆಸಾರ್ಟ್ ರಾಜಕೀಯ ನಡೆಸಲು ಮುಂದಾಗಿದ್ದಾರೆ. ಬಿಎಸ್ವೈ ಅವರಿಗೆ ಯಾವ ಯಾವ ಸಚಿವರ ಬೆಂಬಲವಿದೆ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.
***
ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರವವನ್ನು ಪರಿಷ್ಕರಿಸಲಾಗಿದೆ. ಮಿನಿಮಮ್ ದರ ನೂರು ರೂಪಾಯಿಗೆ ಮತ್ತು ಕಿಲೋಮೀಟರ್ ಒಂದಕ್ಕೆ 25 ರೂಪಾಯಿಗೆ ಹೆಚ್ಚಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
***
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತನ್ನ ವೃತ್ತಿ ಜೀವನದ 100ನೇ ಶತಕಗಳಿಸುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಅಲ್ಲದೆ ಮುಂದಿನ ವಿಶ್ವಕಪ್ ನಲ್ಲಿ ಆಡುವ ಬಗ್ಗೆ ಸುಳಿವು ನೀಡಿದ್ದಾರೆ.
***
ಬಡ ಮಕ್ಕಳ ಕಲ್ಯಾಣಾರ್ಥ ಸರಕಾರ ಇದೇ ಮೊದಲಬಾರಿಗೆ ಸಿನಿಮಾವೊಂದನ್ನು ನಿರ್ಮಿಸಲು ಮುಂದಾಗಿದೆ. ಆ ಬಗ್ಗೆ ಸರಕಾರದ ಅಂತಿಮ ಹೇಳಿಕೆ ಹೊರಬಿದ್ದಿದೆ. ಹೆಚ್ಚಿನ ಮಾಹಿತಿ ಈ ರೀತಿಯಿದೆ 'ವಿಕೃತ ಕಲಾವಿದರ ಸಂಘ' ಅರ್ಪಿಸುವ, ಕೃಷ್ಣ ಪಾಲೆಮಾರ್ ರಚಿಸಿ, ನಿರ್ದೇಶಿಸಿರುವ, ಲಕ್ಷ್ಮಣ್ ಸವದಿ ಮತ್ತು ಸಿ ಸಿ ಪಾಟೀಲ್ ಮುಖ್ಯಭೂಮಿಕೆಯಲ್ಲಿರುವ ಹಾಸ್ಯಮಯ ಚಿತ್ರ " ಇನ್ನೊಂದಿದೆ ನೋಡ್ತೀರಾ' ಚಿತ್ರೀಕರಣ ಇನ್ನು ಕೆಲ ದಿನಗಳಲ್ಲಿ ಆರಂಭವಾಗಲಿದೆ.

English summary
Kannada Jokes for the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X