ಮದುವೆ ಆಗಲಿಕ್ಕೆ ಯಾವ ತಿಂಗಳು ಅತ್ಯುತ್ತಮ?
ವಾರದ ಆರಂಭ. ಕಚೇರಿ ಆಲಸ್ಯ. ನಿಧಾನಕ್ಕೆ ಆಫೀಸ್ ಕೆಲಸಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ. ಈ ಹಂತದಲ್ಲಿ, ಮನಸಿಗೆ ಉಲ್ಲಾಸ ತರಿಸುವಂತಹ ಒಂದಿಷ್ಟು ನಗೆ ಟಾನಿಕ್ ನಿಮಗಾಗಿ, n'joy ಮಾಡಿ...
ಹುಡುಗ: ಮದುವೆ ಆಗಲಿಕ್ಕೆ ಯಾವ ತಿಂಗಳು ಅತ್ಯುತ್ತಮ?
ಅನುಭವಿ: ಅಕ್ಟೋಬಾರ್
ಹುಡುಗ: ಸಿಲ್ಲಿಯಾಗಿ ಹೇಳಬೇಡಿ. ಅಂತಹ ತಿಂಗಳೇ ಇಲ್ಲ.
ಅನುಭವಿ: ನಾನೂ ಅದನ್ನೇ ಮಗಾ ಹೇಳಿದ್ದು, ಅಂತಹ ತಿಂಗಳೇ ಇಲ್ಲ!
''''''''''''''''''''''''''''''''''''
ಹುಡುಗಿ ಮನೆಯವರು: ನಮಗೆ ತಿಂದು-ಕುಡಿಯುವಂತಹ ಮತ್ತು ಯಾವುದೇ ಕಟ್ಟ ಕೆಲಸ ಮಾಡದೇ ಇರುವಂತಹ ಹುಡುಗ ಬೇಕು.
ಮದುವೆ ದಲ್ಲಾಳಿ: ಅಂತಹ ವರ ಯಾವುದಾದರೂ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿನಲ್ಲಿ ಸಿಗುತ್ತಾನೆ. ಹೋಗಿ ವಿಚಾರಿಸಿಕೊಳ್ಳಿ.
''''''''''''''''''''''''''''''''''''
ನೀನ್ಯಾಕೆ ನನ್ನ ಫೋನ್ ರಿಸೀವ್ ಮಾಡಲಿಲ್ಲ?
ರಿಂಗ್ ಟೋನ್ ಕೇಳುತ್ತಾ ಡ್ಯಾನ್ಸ್ ಮಾಡುತ್ತಿದ್ದೆ.
''''''''''''''''''''''''''''''''''''
ಒಂದು ಕಾರನ್ನು ಹರಾಜಿಗೆ ಕೂಗುತ್ತಿದ್ದರು. 1 ಲಕ್ಷ, 2 ಲಕ್ಷ, 3 ಲಕ್ಷ...
ಗಾಬರಿಗೆ ಬಿದ್ದ ನಾರಾಯಣ ಅಂಥದ್ದೇನಿದೆ ಈ ಕಾರಿನಲ್ಲಿ ಎಂದು ಅಮಾಯಕವಾಗಿ ಪ್ರಶ್ನಿಸಿದ.
ಇದು 5 ಬಾರಿ ಆಕ್ಟಿಡೆಂಟ್ ಮಾಡಿದೆ. ಒಂದೊಂದು ಆಕ್ಸಿಡೆಂಟ್ ಆದಾಗಲೂ ಕೇವಲ ಹೆಂಡತಿ ಮಾತ್ರ ಸತ್ತಿದ್ದಳು.
ನಾರಾಯಣ ಮರುಮಾತನಾಡದೆ 8 ಲಕ್ಷ ರೂ.ಗೆ ಈ ಕಾರು ನನಗಿರಲಿ ಎಂದ.
''''''''''''''''''''''''''''''''''''












Click it and Unblock the Notifications