ಇವರು ಇಂದಿನ 'ಆದರ್ಶ' ರಾಜಕಾರಣಿಗಳು!

ಗುಂಡ : ದೇಶ ಬೇಕು ದ್ವೇಷ ಬೇಡ ಅನ್ನೋ ಸ್ವಾಮಿ ವಿವೇಕಾನಂದ ಒಂದುಕಡೆ, ಹೆಣ್ಣು ಬೇಡ ಮಣ್ಣು ಬೇಕು ಅನ್ನುವ ಗಣಿಧಣಿಗಳು, ಹುಡುಗಿ ಬೇಕು ಮದುವೆ ಬೇಡ ಅನ್ನುವ ಸ್ವಾಮೀಜಿ, ಗೆಳೆಯ ಬೇಡ ಗೆಳೆಯನ ಹೆಂಡತಿ ಬೇಕು ಅನ್ನುವ ಸೊರಬದ ಶಾಸಕ, ಮದುವೆ ಬೇಡ ಮಗು ಬೇಕೆನ್ನುವ ಮಾಜಿ ಪ್ರಧಾನಿಗಳ ಮಗ, ಹೆಂಡತಿ ಬೇಡ ನರ್ಸ್ ಬೇಕೆನ್ನುವ ಹೊನ್ನಾಳಿ ಶಾಸಕ, ಕಟ್ ಕೊಂಡೊವ್ಳು ಸಾಯಲಿ, ಇಟ್ ಕೊಂಡೊವ್ಳು ಮಂತ್ರಿ ಆಗಲಿ ಎನ್ನುವ ಮಾಜಿ ಮುಖ್ಯಮಂತ್ರಿ..
***
ಗಣೇಶ ಹಬ್ಬದ ಖರೀದಿಗೆ ಗುಂಡ ಆಟೋದಲ್ಲಿ ಮಾರ್ಕೆಟ್ ಕಡೆ ಹೋರಾಟ..
ಆಟೋ ಡ್ರೈವರ್ : ಒಹ್.. ದಯವಿಟ್ಟು ಕ್ಷಮಿಸಿ ಸಾರ್.. ಮೀಟರ್ ಹಾಕೋದೇ ಮರೆತು ಬಿಟ್ಟೆ..
ಗುಂಡ : ನೀನೂ ನನ್ನನ್ನು ಕ್ಷಮಿಸಪ್ಪಾ.
ಆಟೋ ಡ್ರೈವರ್ : ಯಾಕ್ ಸಾರ್?
ಗುಂಡ : ನಾನು ಪರ್ಸ್ ತರೋದೆ ಮರೆತು ಬಿಟ್ಟೆ!
***
ಭಿಕ್ಷುಕ : ಅಮ್ಮಾ ತಾಯಿ.. ಏನಾದರೂ ಭಿಕ್ಷೆ ಕೊಡಮ್ಮಾ..
ಗುಂಡ : ನಂ ಹೆಂಡತಿ ಇಲ್ಲಾ. ಮುಂದೆ ಹೋಗಯ್ಯ..
ಭಿಕ್ಷುಕ : ಥೂ ನಿನ್ನ.. ನಾನೇನು ನಿನ್ನ ಹೆಂಡತಿನಾ ಕೇಳ್ದೆ!
***
ಗುಂಡ : ನಾನು ಯುರೋಪ್ ಗೆ ಹೋಗೋಣಾಂತ ಯೋಚಿಸುತ್ತಿದ್ದೇನೆ.
ತಿಮ್ಮ : ಹೌದಾ, ತುಂಬಾ ಹಣ ಬೇಕಾಗುತ್ತೆ ಆಲ್ವಾ?
ಗುಂಡ : ಇಲ್ಲ.. ಯೋಚನೆ ಮಾಡೋಕೆ ಹಣ ಯಾಕೋ?












Click it and Unblock the Notifications