ಕರ್ಕೊಂಡು ಬನ್ನಿ...ಹೊತ್ಕೊಂಡು ಹೋಗಿ... ಹಹ್ಹಾ

ನರ್ಸ್ ಗಳು ವಿವಿಧ ಸಲಹೆ ನೀಡುತ್ತಾರೆ. ಆದರೆ ಒಂದು ನರ್ಸ್ ನೀಡಿದ ಪಂಚ್ ಡೈಲಾಗ್ ಸಲಹೆಯಿಂದ ಆಕೆಯ ಕೆಲಸಕ್ಕೆ ಸಂಚಕಾರ ಬರುತ್ತದೆ. ಆಕೆ ಸಲಹೆ ನೀಡಿದ ಪಂಚ್ ಡೈಲಾಗ್ ಸಲಹೆ ಏನು ಗೊತ್ತೇ?
"ಕರ್ಕೊಂಡು ಬನ್ನಿ... ಹೊತ್ಕೊಂಡು ಹೋಗೀ.. "
***
ಬೆಟ್ಟದ ತುದಿಯಿಂದ ಗುಂಡ ಒಂದು ಹುಡುಗಿಯನ್ನು ತಳ್ಳಿ ಸಾಯಿಸುತ್ತಾನೆ.
ಜಡ್ಜ್ : ಯಾಕೋ ಆ ಹುಡುಗಿಯನ್ನು ಸಾಯಿಸಿದೆ?
ಗುಂಡ: ನಾನು ಅವಳ ಹೆಸರನ್ನು ಕೇಳಿದೆ ಸಾರ್, ಅವಳು ಪುಷ್ಪಾಂತ (ಪುಷ್ ಪಾ) ಹೇಳಿದಳು. ಅದಕ್ಕೆ ತಳ್ಳಿದೆ.
ಜಡ್ಜ್: ಅಯ್ಯೋ ಪಾಪಿ..
***
ಪಾರ್ಕ್ ನಲ್ಲಿ ಇಬ್ಬರು ಗೆಳತಿಯರು ಚರ್ಚಿಸುತ್ತಿದರು
ಒಬ್ಬಾಕೆ: ಅಲ್ಲಿ ಕೂತಿದ್ದಾನೆ ನೋಡು, ಅವನು ಬಹಳ ಶ್ರೀಮಂತ.
ಇನ್ನೊಬ್ಬಾಕೆ: ಅದೇಗೆ ಹೇಳ್ತೀಯಾ.. ನಿನಗೆ ಹೇಗೆ ಗೊತ್ತು?
ಒಬ್ಬಾಕೆ: ಅವನ ಕಡೆಯಿಂದ ಈರುಳ್ಳಿ ವಾಸನೆ ಬರುತ್ತಿದೆ..
***
ಗುಂಡ: ಸಂತೋಷದ ಸುದ್ದಿ, 2012 ಕ್ಕೆ ಪ್ರಳಯ ಆಗೋಲ್ಲಾ.
ತಿಮ್ಮ: ಅದೇಗೆ, ಏನು ಸಾಕ್ಷಿ?
ಗುಂಡ: ನಾನು ಮೊನ್ನೆ ತಗೊಂಡ ಟೊಮ್ಯಾಟೋ ಸಾಸ್ ಸಾಕ್ಷಿ, ಅದರಲ್ಲಿ ಎಕ್ಷ್ಪೈರಿ ಡೇಟ್ 2013 ಅಂತಾ ಇದೆ.
***
ಹುಡುಗ, ಹುಡುಗಿ ಪಾರ್ಕ್ ನಲ್ಲಿ ಕೂತಿದ್ದರು. ಮೆತ್ತಗೆ ಹುಡುಗ ಹುಡುಗಿಯ ಮೈ ಟಚ್ ಮಾಡುತ್ತಾನೆ
ಹುಡುಗಿ: ನನ್ನ ಮೈ ಮುಟ್ಟ ಬೇಡ, ಅದೆಲ್ಲಾ ಏನಿದ್ದರೂ ಮದುವೆಯಾದ ಮೇಲೆ
ಹುಡುಗ: ಓಕೆ, ಹಾಗಾದ್ರೆ ನಿನ್ನ ಮದುವೆ ಆದ ಮೇಲೆ ಕರೀ..
***
ಪ್ರಸಿದ್ಧ ಲೇಖಕ ಮೆಚ್ಚಿ ಮದುವೆಯಾದ ಮಡದಿಗೆ ಸೋಡಾಚೀಟಿ ಕೊಟ್ಟು ಡೈವೋರ್ಸ್ ಪಡೆದು ಬಿಟ್ಟ. ಅವನ ಬೆನ್ನು ಬಿದ್ದ ಪತ್ರಕರ್ತರು ಕೇಳಿದ ಪ್ರಶ್ನೆಗೆ "ಸಾರ್, ವಿಚ್ಛೇದನ ಪಡೆಯಲು ಮೂಲ ಕಾರಣ ಏನು?" ಲೇಖಕ ಅವನು ಕೊಟ್ಟ ಕಡೆಯ ಉತ್ತರ ಹೀಗಿತ್ತು" ಮದುವೆ". [ಕನ್ನಡ ನಗೆಹನಿ]












Click it and Unblock the Notifications