ಅಯ್ಯೋ ನಿಮ್ಮ ಶ್ರೀಮಂತಿಕೆಗಿಷ್ಟು ಬೆಂಕಿ ಹಾಕ!

Jokes for the day
ಹೊಸದಾಗಿ ಮದುವೆಯಾದ ದಂಪತಿಗಳು ಹನಿಮೂನಿಗೆಂದು ಸ್ವಿಟ್ಜರ್ಲ್ಯಾಂಡ್ ಗೆ ಹೋಗುತ್ತಾರೆ. ಗಂಡ ಮಹಾ ಶ್ರೀಮಂತ. ಶ್ರೀಮಂತಿಕೆಯ ಮೇಲೆ ಭಾರೀ ಅಭಿಮಾನ ಕೂಡ. ಹಾಗೆಯೇ ಶ್ರೀಮಂತಿಕೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲು ಪ್ರಾರಂಭಿಸುತ್ತಾನೆ.
ಗಂಡ : ಡಾರ್ಲಿಂಗ್, ನಾನು ಇಷ್ಟು ಶ್ರೀಮಂತನಾಗಿರದೆ ಇದ್ದರೆ, ನಾವಿಬ್ಬರು ಹನಿಮೂನಿಗೆಂದು ಇಲ್ಲಿಗೆ ಬರಲಾಗುತ್ತಲೇ ಇರಲಿಲ್ಲ.
ಹೆಂಡತಿ : ಅಯ್ಯೋ ನಿಮ್ಮ ಶ್ರೀಮಂತಿಕೆಗಿಷ್ಟು ಬೆಂಕಿ ಹಾಕ. ನೀವು ಇಷ್ಟೊಂದು ಶ್ರೀಮಂತರಾಗಿರದಿದ್ದರೆ, ಮದುವೆಯನ್ನೂ ಆಗುತ್ತಿರಲಿಲ್ಲ!

***
ಹೆಂಡತಿ : ಏನೂಂದ್ರೆ, ನಿನ್ನೆ ಕೊಂಡಿರುವ ಹೊಸ ಕಾರಲ್ಲಿ ಏನೋ ಪ್ರಾಬ್ಲಂ ಇದೆ. ಕಾರ್ಬೊರೇಟರ್ ನಲ್ಲಿ ನೀರಿದೆ.
ಗಂಡ : ಕಾರ್ಬೋರೇಟರಲ್ಲಿ ನೀರಾ? ಸುಮ್ ಸುಮ್ನೆ ಏನೇನೋ ಹೇಳ್ಬೇಡಾ.
ಹೆಂಡತಿ : ಇಲ್ಲಾಂದ್ರೆ, ನಾನು ಹೇಳೋದು ಸರಿ.
ಗಂಡ : ಲೇ ಪೆದ್ದಿ, ಕಾರ್ಬೋರೇಟಲ್ಲಿ ನೀರಿರೋಕೆ ಹೇಗೆ ಸಾಧ್ಯ? ಬಾ ಇಲ್ಲಿ ಕಾರ್ಬೋರೇಟರಂದ್ರೆ ಏನಂತ ತೋರಿಸ್ತೀನಿ. ಅರೆ ಕಾರೆಲ್ಲಿ?
ಹೆಂಡತಿ : ಸ್ವಿಮ್ಮಿಂಗ್ ಪೂಲಲ್ಲಿ!

***
ಗುಂಡನ ಮಗ ಗುಂಡನ ಬಳಿ ಬೈಕ್ ಬೇಕೆಂದು ಡಿಮಾಂಡ್ ಮಾಡುತ್ತಾನೆ...
ಗುಂಡ : ಲೇ.. ಎರಡು ಕಾಲು ನಿನಗೆ ದೇವ್ರು ಏನಕ್ಕೋ ಕೊಟ್ಟಿದ್ದು?
ಮಗ : ಅದೇ ಅಪ್ಪ.. ಒಂದು ಕಾಲಲ್ಲಿ ಗೇರ್ ಬದಲಿಸಲು, ಇನ್ನೊಂದು ಕಾಲಿನಲ್ಲಿ ಬ್ರೇಕ್ ಹಾಕಲು..

***
ಕುಡುಕ : ಏ..ಏ.. ಇವತ್ತು ಏನೇ ಆಗಲಿ.. ಎಲ್ಲಿ ತನಕ ಕುಡಿಯೋದಂದ್ರೆ ಮುಂದೆ ಇರೋ ಮೂರು ಮರಗಳು ಆರು ಮರವಾಗಿ ಕಾಣಿಸಬೇಕು..
ಬಾರ್ ಮಾಲೀಕ : ಲೇ..ಲೇ.. ಅಲ್ಲಿ ಇರುದು ಒಂದೇ ಮರ ಕಣ್ಲಾ..

***
ಗುಂಡ : ನಾನು ದೇವರ ಬಳಿ ಒಬ್ಬ ಉತ್ತಮ ಸ್ನೇಹಿತನನ್ನು ಕೊಡುವಂತೆ ಕೇಳಿದೆ.. ದೇವರು ಕೊಟ್ಟ... ಆವತ್ತಿನಿಂದ ದೇವರ ಮೇಲೆ ನಂಬಿಕೇನೆ ಹೊರಟೋಯಿತು..
ತಿಮ್ಮ : ಯಾಕಪ್ಪಾ..
ಗುಂಡ : ನಾನು ಕೇಳಿದ್ದು ವಿವೇಕಾನಂದ ತರಹ ಇರೋ ಸ್ನೇಹಿತನನ್ನ.. ಆದರೆ ದೇವ್ರು ಕೊಟ್ಟಿದ್ದು ನಿತ್ಯಾನಂದನನ್ನ..

***
ಟೀಚರ್ : ಗುಂಡ ಅವರೇ.. ನಿಮ್ಮ ಮಗನ ಹಾಜರಾತಿ ಕಮ್ಮಿಯಿದೆ..
ಗುಂಡ : ಅದಕ್ಕೆ...?
ಟೀಚರ್ : ಅದಕ್ಕೆ ಅವನಿಗೆ ಪರೀಕ್ಷೆಗೆ ಕೂತ್ಕೊಳ್ಳಲು ಬಿಡುವುದಿಲ್ಲ.
ಗುಂಡ : ಹೌದಾ. ಒಳ್ಳೇದಾಯಿತು ಬಿಡಿ.. ಬಡ್ಡೀಮಗ ನಿಂತ್ಕೊಂಡೆ ಪರೀಕ್ಷೆ ಬರೀಲಿ.

***
ಮೈದಾನದಲ್ಲಿ ಟೀಮ್ ಇಂಡಿಯಾ ಮತ್ತು ಹರಿಣಗಳ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯುತ್ತಿರುತ್ತದೆ..
ಒಂದು ಸುಂದರವಾದ ಹುಡುಗಿ ತುಟಿ ಮೇಲೆ ಭಾರತದ ಧ್ವಜವನ್ನು ಪೈಂಟ್ ಮಾಡಿಕೊಂಡು ತಂಡವನ್ನು ಪ್ರೋತ್ಸಾಹಿಸುತ್ತಿರುತ್ತಾಳೆ..
ಓಡಿ ಬಂದ ಯುವಕನೊಬ್ಬ ಅವಳ ತುಟಿಯನ್ನು ಚುಂಬಿಸುತ್ತಾ.... ಹೇಳುತ್ತಾನೆ...
ಐ ಲವ್ ಮೈ ಇಂಡಿಯಾ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+