ನಾನು ಸೇದ್ತಾ ಇದ್ದದ್ದು ಬೀಡಿ! ಸುಮ್ನೇ ಸುಳ್ಳು ಹೇಳಬೇಡಿ!
ಎಸ್ಐ : ಏನಯ್ಯಾ, ನಾನಿಲ್ದೆ ಇರುವಾಗ ನನ್ನ ಕುರ್ಚೀಲಿ ಕೂತು ಸಿಗರೇಟ್ ಸೇದ್ತಿಯಂತೆ, ಹೌದಾ?
ಪೇದೆ : ಯಾರು ಸಾರ್ ಹೇಳಿದ್ದು? ನಾನು ಸೇದ್ತಾ ಇದ್ದದ್ದು ಬೀಡಿ. ಸುಮ್ನೇ ಸುಳ್ಳು ಹೇಳಬಾರದು!
***
ಜೈಲರ್ : ಟೈಲರಿಂಗ್ ನ ಯಾವ ವಿಭಾಗದಲ್ಲಿ ನಿನಗೆ ಒಳ್ಳೆ ಅನುಭವವಿದೆಯೋ ಆ ಕೆಲ್ಸ ಮಾಡು.
ಅಪರಾಧಿ : ನನಗೆ ಜೇಬು ಕತ್ತರಿಸೋದ್ರಲ್ಲಿ ತುಂಬಾ ಅನುಭವ ಇದೆ. ಇಲ್ಲೂ ಅದನ್ನೇ ಮಾಡ್ತೀನಿ ಸ್ವಾಮಿ.
(ಜೋಕು ಕತ್ತರಿಸಿದವರು; ನಂಜುಂಡಾಚಾರ್ ಹಾಗಲ್ವಾಡಿ)
***
ಮುನಿಯ : ಲೋ ಕರಿಯ, ರಾತ್ರಿ ಒಂದು ಗಂಟೆಗೆ ಪದೇಪದೇ ಫೋನ್ ಮಾಡಿ ಯಾಕೋ ನನ್ನ ನಿದ್ದೆ ಕೆಡಿಸ್ತೀಯ..?
ಕರಿಯ : ಬೇಸರ ಬೇಡ ಮುನಿಯಾ. ಸೋಮು ಹೀಗೆ ಮಾತಾಡ್ತಾ ಈ ಹೊತ್ತಿಗೆ ಮುನಿಯ ಮಲಗಿರ್ತಾನೆ ಎಂದ. ನಾನು ಎಚ್ಚರವಾಗಿರ್ತಾನೆ ಎಂದು ಬೆಟ್ ಕಟ್ಟಿದೆ! ಈಗ ನಾನೇ ಗೆದ್ದೆ,ಯಾಕೆಂದ್ರೆ ನೀನು ಎಚ್ಚರವಾಗಿಯೇ ಇದ್ದೀಯಲ್ಲ. ಹೋಗಲಿ ಬಿಡು, ನೀನ್ ಮಲಕ್ಕೋ.. ಗುಡ್ ನೈಟ್!












Click it and Unblock the Notifications