ಇದು ಅಶರೀರವಾಣಿ, ಈಗ ಸುಳ್ಳುವಾರ್ತೆಗಳು..

ನಮಸ್ಕಾರ. ಇದು ಅಶರೀರವಾಣಿ, ಈಗ ಸುಳ್ಳು ವಾರ್ತೆಗಳು. ಓದುತ್ತಿರುವವರು ಸತ್ಯ ಹರಿಶ್ಚಂದ್ರನ ಮೊಮ್ಮಗ. ವಾರ್ತೆಗಳ ವಿವರ ಇಂತಿದೆ.

  • ವಿಧಾನಸೌಧದ 7ನೇ ಮಹಡಿಯು ಬೆಳಗ್ಗೆ 12ಗಂಟೆಗೆ ಕುಸಿದು ಬಿದ್ದಿದ್ದು, ಯಾರಿಗೂ ಗಾಯ ಆಗಿಲ್ಲ. ಕಾರಣ ಕಚೇರಿಗೆ ನೌಕರರು ಇನ್ನೂ ಬಂದಿರಲಿಲ್ಲ.
  • ಅಪರಿಚಿತ ರಾಜ್ಯದ ಸುಡುಗಾಡು ಜಿಲ್ಲೆಯ ಹೆಸರಿಲ್ಲದ ತಾಲೂಕಿನ ನಾಪತ್ತೆ ಗ್ರಾಮದಲ್ಲಿ ಒಂದು ಆನೆಯು, ತಾನು ಪ್ರೀತಿಸಿದ ಇರುವೆ ತನ್ನನ್ನು ಮದುವೆಯಾಗಲಿಲ್ಲವೆಂಬ ಕಾರಣಕ್ಕಾಗಿ ನೊಂದು ದಾರದಿಂದ ಕೊರಳು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.
  • ಕ್ರೀಡಾವಾರ್ತೆ : ಭಾರತ ತಂಡ ಪಾಕಿಸ್ತಾನದ ಎಲ್ಲಾ ವಿಕೆಟ್ ಗಳನ್ನು ಒಂದೇ ಓವರ್ ನಲ್ಲಿ ಕಬಳಿಸಿ, ಗಿನ್ನಿಸ್ ದಾಖಲೆ ಮಾಡಿದೆ... ಇದೀಗ ಬಂದ ದಿಢೀರ್ ದಡಾರ್ ವಾರ್ತೆ : ಇನ್ನು ಕೆಲವೇ ಕ್ಷಣಗಳಲ್ಲಿ ಭೂಕಂಪವಾಗಲಿದ್ದು, ಯಾರೂ ಬದುಕುವ ಸಾಧ್ಯತೆ ಇಲ್ಲ. ಇಲ್ಲಿಗೆ ಸುಳ್ಳು ವಾರ್ತಾ ಪ್ರಸಾರ ಮುಕ್ತಾಯವಾಯಿತು. ಮತ್ತೆ ಮುಂದಿನ ಸುಳ್ಳು ವಾರ್ತೆ ಭೂಕಂಪದ ನಂತರ.

(ಜೋಕು ಕತ್ತರಿಸಿದವರು ; ಉಷಾರಾಣಿ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+