Year End 2024: ಕರ್ನಾಟಕದಲ್ಲಿ ಈ ವರ್ಷ ಭರ್ತಿಯಾದ ಸರ್ಕಾರಿ ಹುದ್ದೆಗಳೆಷ್ಟು?

ಬೆಂಗಳೂರು, ಡಿಸೆಂಬರ್ 26: ಕರ್ನಾಟಕ ರಾಜ್ಯ ಸರ್ಕಾರ ಇತ್ತೀಚೆಗೆ ಹೊಸ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಒಂದು ನೀರ್ಣಯ ಕೈಗೊಂಡಿದೆ. ಕೆಲವು ಅಧಿಸೂಚನೆ ಸಹ ಹೊರಡಿಸಿದೆ. ಹೊಸ ವರ್ಷ ಎದುರು ನೋಡುತ್ತಿರುವ ನಾಡಿನ ಉದ್ಯೋಗಾಕಾಂಕ್ಷಿಗಳಿಗೆ ಪ್ರಸಕ್ತ ವರ್ಷ 2024ರಲ್ಲಿ ರಾಜ್ಯ ಸರ್ಕಾರ ಎಷ್ಟು ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿತು. ಭರ್ತಿ ಹುದ್ದೆಗಳ ಮಾಹಿತಿ, ಅಂಕಿ ಸಂಖ್ಯೆ ಇಲ್ಲಿದೆ.

ಕರ್ನಾಟಕದ ಆಡಳಿತದಲ್ಲಿ ಎಲ್ಲ ಮೂರನೇ ಒಂದು ಭಾಗದಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ನಾಡಿನ ಜನರಿಗೆ ನಾಗರಿಕ ಸೇವೆ ನೀಡುವುದರಲ್ಲಿ ವಿಳಂಬವಾಗುತ್ತಿದೆ. ಹೀಗಾಗದಂತೆ ತಡೆಯಲು ಆಡಳಿತಯಂತ್ರಕ್ಕೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಈ ವರ್ಷ 20,466 ಖಾಲಿ ಹುದ್ದೆಗಳಿಗೆ ಅರ್ಹರನ್ನು ಭರ್ತಿ ಮಾಡಿಕೊಂಡಿದೆ ಎಂದು ಅಂಕಿ ಅಂಶಗಳು ಮಾಹಿತಿ ನೀಡಿದೆ ಎಂದು 'ಡಿಎಚ್' ವರದಿ ಮಾಡಿದೆ.

Year End 2024 Karnataka has Filled 20466 Government Posts Here full details

ರಾಜ್ಯ ಸರ್ಕಾರಿದಂದ ಈಗಾಗಲೇ 7.72 ಲಕ್ಷ ಸರ್ಕಾರಿ ಉದ್ಯೋಗಗಳು ಮಂಜೂರು ಮಾಡಲಾಗಿದೆ. ಅದರಲ್ಲಿ 2.76 ಲಕ್ಷ ಉದ್ಯೋಗಗಳು ಭರ್ತಿ ಆಗದೇ ಹಾಗೆಯೇ ಖಾಲಿ ಉಳಿದಿವೆ. ಕಳೆದ ವರ್ಷ 2.55 ಲಕ್ಷ ಹುದ್ದೆಗಳು ಖಾಲಿ ಇದ್ದವು. ಇದೆಲ್ಲ ಗಮನಿಸಿರುವ ಸರ್ಕಾರ ಸದ್ಯ 20000ಕ್ಕೂ ಅಧಿಕ ಉದ್ಯೋಗಗಳನ್ನು ಭರ್ತಿ ಮಾಡಿಕೊಂಡಿದೆ.

ಕಳೆದ ವರ್ಷ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಮುಂದಿನ ಒಂದು ವರ್ಷದೊಳಗೆ ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಘೊಷಿಸಿದೆ. ಸದ್ಯ ಒಂದೂವರೆ ವರ್ಷವಾದರೂ ಬರೀ 20,466 ಹುದ್ದೆಗಳನ್ನು ತುಂಬಿಕೊಳ್ಳಲಾಗಿದೆ.

ಕೊಟ್ಟ ಭರವಸೆಯಷ್ಟು ನೇಮಕಾತಿ ನಡೆದಿಲ್ಲ

ಸದ್ಯ ರಾಜ್ಯ ಹಣಕಾಸು ಇಲಾಖೆ ಸಮ್ಮುಖದಲ್ಲಿ 'ಕೇಸ್-ಟು-ಕೇಸ್' ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಭಾರೀ ವೆಚ್ಚ ಹೊಂದಿಸಬೇಕಾದ ಅನಿವಾರ್ಯ ಕಾರಣದಿಂದ ಕೊಟ್ಟ ಭರವಸೆಯನ್ನು ಕಳೆದ ಇಷ್ಟು ದಿನಗಳಲ್ಲಿ ಪೂರೈಸಲು ಆಗಿಲ್ಲ ಎನ್ನಬಹುದು.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಡಿ ಅರ್ಹರಿಗೆ ಮನೆ ನಿರ್ಮಿಸುವುದು ಅಗತ್ಯವಾಗಿದೆ. ಅದಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದರೆ, ಅಲ್ಲಿ ಇಬ್ಬರು ನೌಕರರು ಮಾತ್ರವೇ ಇದ್ದಾರೆ. ಕಡತ, ಅರ್ಜಿ ವಿಲೇವಾರಿ ಮಾಡಲು ಹೆಚ್ಚುನ ಸಿಬ್ಬಂದಿಯೇ ಇಲ್ಲ. ಇವುಗಳ ವಿಲೇವಾರಿಗಾಗಿ ಭಷ್ಟಾಚಾರವು ನಡೆಯುತ್ತದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಜಿಲ್ಲೆಯೊಂದರ ಉದಾಹರಣೆ ನೀಡಿದರು.

ಸರ್ಕಾರ ಉದ್ಯೋಗ ಸೃಜನೆಯ ಸಂಸ್ಥೆ ಅಲ್ಲ

ವಿಪಕ್ಷ ನಾಯಕರ ಕೆಲವು ಆರೋಪಗಳಿಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ, ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರು, ನಮ್ಮ ಸರ್ಕಾರ ಉದ್ಯೋಗ ಸೃಷ್ಟಿಸುವ, ಇಲ್ಲವೇ ಉದ್ಯೋಗ ನೀಡುವ ಸಂಸ್ಥೆಯಲ್ಲ ಎಂದು ತಿರುಗೇಟು ನೀಡಿದ್ದರು.

ಕೇವಲ ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯ ಸಂಸದ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೂ ಒಂದೇ ವರ್ಷದಲ್ಲಿ ಒಂದು ಲಕ್ಷ ಉದ್ಯೋಗ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅದು ಸಹ ಆಗಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+