Railway Jobs: ರೈಲ್ವೆ ಇಲಾಖೆಯಲ್ಲಿ ಭರ್ಜರಿ 2,800 ಹುದ್ದೆಗಳ ನೇಮಕಾತಿ, ಪ್ರಮುಖ ದಿನಾಂಕಗಳು
ಬೆಂಗಳೂರು, ಆಗಸ್ಟ್ 23: ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರಿಗೆ ಇಲ್ಲೊಂದು ಸವರ್ಣ ಅವಕಾಶ ಲಭಿಸಿದೆ. ಈ ಬಾರಿ ಪಶ್ಚಿಮ ರೈಲ್ವೆ ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಅಧಿಸೂಚನೆ ಹೊರಡಿಸಿದೆ. ಇದೇ ಆಗಸ್ಟ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಕೂಡಲೇ ಆಸಕ್ತರು ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕಿದೆ.
ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ಅಪ್ರೆಂಟಿಸ್‌ಶಿಪ್ ಅಡಿ ಬರೋಬ್ಬರಿ 2,800 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಬಂಧ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30 ರಿಂದ ಸೆಪ್ಟೆಂಬರ್ 29ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನೇಮಕಾತಿ ಪೂರ್ಣ ಮಾಹಿತಿ, ಮಾಸಿಕ ವೇತನ ಇತರ ವಿವರ ಇಲ್ಲಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಪಶ್ಚಿಮ ರೈಲ್ವೆ
ಹುದ್ದೆ ಪ್ರಕಾರ: ಅಪ್ರೆಂಟಿಸ್ ಹುದ್ದೆ
ಒಟ್ಟು ಹುದ್ದೆಗಳು: 2,800
ಅರ್ಜಿ ಸಲ್ಲಿಕೆ ದಿನಾಂಕ: ಆ.30 - ಸೆ.29
ಗರಿಷ್ಠ ವಯಸ್ಸು: 24
ಹುದ್ದೆಗಳ ಜಾತಿವಾರು ವಿವರ
* ಪರಿಶಿಷ್ಟ ಪಂಗಡ (ಎಸ್‌ಟಿ): 215 ಹುದ್ದೆಗಳು
* ಇತರೆ ಹಿಂದುಳಿದ ವರ್ಗಗಳು (ಒಬಿಸಿ): 778 ಹುದ್ದೆಗಳು
* ಆರ್ಥಿಕವಾಗಿ ದುರ್ಬಲ ವಿಭಾಗ (EWS) : 289 ಹುದ್ದೆಗಳು
* ಸಾಮಾನ್ಯ ವರ್ಗ: 1150 ಹುದ್ದೆಗಳು
* ಪರಿಶಿಷ್ಟ ಜಾತಿ (SC): 433 ಹುದ್ದೆಗಳು
ಗರಿಷ್ಠ ವಯಸ್ಸಿನ ಮಿತಿ?
ಸದರಿ ನೇಮಕಾತಿ ಹುದ್ದೆಗಳ ಭರ್ತಿಗೆ ಆಸಕ್ತ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಹಾಗೂ ಗರಿಷ್ಠ ವಯಸ್ಸು 24 ವರ್ಷ. ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಶೇಷ ಚೇತನರಿಗೆ ಅಭ್ಯರ್ಥಿಗಳು 10 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ.
ವಿದ್ಯಾರ್ಹತೆ ಏನಿರಬೇಕು?
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿಕನಿಷ್ಠ ಶೇಕಡಾ 50 ಅಂಕ ಸಹಿತ ಎಸ್‌ಎಸ್‌ಎಲ್‌ಸಿ ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಈ ಅಪ್ರೆಂಟಿಸ್ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇಲ್ಲ. ಅಭ್ಯರ್ಥಿಗಳ SSLC ಹಾಗೂ 12ನೇ ತರಗತಿ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಅದರ ಆಧಾರದಲ್ಲಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಿ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳ ಶುಲ್ಕ ನೋಡುವುದಾದರೆ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 100 ರೂಪಾಯಿ, ಸಂಸ್ಕರಣಾ ಶುಲ್ಕ 41 ರೂ. ಪಾವತಿಸಬೇಕಾಗುತ್ತದೆ. ಎಸ್‌ಸಿ/ಎಸ್‌ಟಿ ಅವರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.












Click it and Unblock the Notifications