ದಾವಣಗೆರೆ; ಕೆಲಸ ಖಾಲಿ ಇದೆ; ಡಿ. 30ರಂದು ನೇರ ಸಂದರ್ಶನ

ದಾವಣಗೆರೆ, ಡಿಸೆಂಬರ್ 23; ದಾವಣಗೆರೆ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡಲು ಯೋಗ ತರಬೇತಿದಾರರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಆಸಕ್ತರು ಡಿಸೆಂಬರ್ 30ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕೇಂದ್ರ ಪುರುಸ್ಕೃತ ಯೋಜನೆಯ ರಾಷ್ಟ್ರೀಯ ಆಯುಷ್ ಅಭಿಯಾನದ ಆಯುಷ್ಮಾನ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲಾದ 3 ಸರ್ಕಾರಿ ಆಯುರ್ವೇದ ಕ್ಷೇಮ ಕೇಂದ್ರಗಳಿಗೆ ತಾತ್ಕಾಲಿಕವಾಗಿ ಮಂಜೂರಾಗಿರುವ ಯೋಗ ತರಬೇತಿದಾರರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಯೋಗ ತರಬೇತಿದಾರರ 1 & 2 ಹುದ್ದೆಗೆ ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಡಿಸೆಂಬರ್ 30ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣ, ದಾವಣಗೆರೆ ಇಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

Walk In Interview In Davanagere For Yoga Trainer Post

ಹುದ್ದೆಗಳ ವಿವರ ಇಂತಿದೆ; ಆಯುರ್ವೇದ ಕ್ಷೇಮ ಕೇಂದ್ರ, ಕಾಡಜ್ಜಿ 2 ಹುದ್ದೆಗಳು, ಆಯುರ್ವೇದ ಕ್ಷೇಮ ಕೇಂದ್ರ, ಕನಗೊಂಡನಹಳ್ಳಿ 2 ಹುದ್ದೆಗಳು. ಆಯುರ್ವೇದ ಕ್ಷೇಮ ಕೇಂದ್ರ, ಹೊಸಕಡ್ಲೆಬಾಳು 2 ಹುದ್ದೆಗಳು.

ಅಭ್ಯರ್ಥಿಗಳು ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿ, ಪಂಚಾಯತ್ ರಾಜ್ ಕಾರ್ಯಪಾಲಕ ಇಂಜಿನಿಯರಿಂಗ್ ವಿಭಾಗೀಯ ಕಚೇರಿಯ ಆವರಣ, ಪಿ.ಬಿ.ರಸ್ತೆ, ದಾವಣಗೆರೆ ಇವರನ್ನು ಸಂಪರ್ಕಿಸಬಹುದು.

ತರಬೇತಿಗೆ ಅರ್ಜಿ ಆಹ್ವಾನ; ದಾವಣಗೆರೆ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದಿರುವ ಬಾಲಕಿಯರಿಗೆ ಸ್ವರಕ್ಷಣೆ ಕುರಿತಂತೆ ತರಬೇತಿ ನೀಡಲು, ಅರ್ಹ ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ನುರಿತ ಬ್ಲಾಕ್‍ಬೆಲ್ಟ್ ಮಹಿಳಾ ತರಬೇತಿ ಶಿಕ್ಷಕರನ್ನು ಹೊಂದಿರುವ ಸಂಸ್ಥೆಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ವಾರದಲ್ಲಿ ಎರಡು ದಿನಗಳಂತೆ ಮತ್ತು ದಿನಕ್ಕೆ 60 ನಿಮಿಷಗಳ ಸಮಯದಂತೆ ಒಟ್ಟು 6 ತಿಂಗಳಿಗೆ 48 ಭೋಧನಾ ಅವಧಿಗಳಲ್ಲಿ ತರಬೇತಿ ನೀಡಬೇಕು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ, ದಾವಣಗೆರೆ ರವರ ನೇತೃತ್ವದ ಸಮಿತಿಯ ಮೂಲಕ ಜಿಲ್ಲಾ ಮಟ್ಟದಲ್ಲಿ ಗುರುತಿಸಲ್ಪಟ್ಟ ತರಬೇತಿದಾರರನ್ನು ಆಯ್ಕೆ ಮಾಡಲಾಗುವುದು. ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರು (ಗ್ರೇಡ್ 1 & 2) ಸಮಾಜ ಕಲ್ಯಾಣ ಇಲಾಖೆ ಇವರು ಅನುಷ್ಠಾನಾಧಿಕಾರಿ ಆಗಿರುತ್ತಾರೆ.

ಪ್ರತಿ ಒಬ್ಬ ತರಬೇತುದಾರರಿಗೆ ಪ್ರತಿ ಭೋಧನಾ ಅವಧಿ ಸಂಭಾವನೆ ರೂ. 500 ಹಾಗೂ ತರಬೇತಿದಾರರ ಪ್ರಯಾಣ ವೆಚ್ಚ ಹಾಗೂ ಇತರೆ ವೆಚ್ಚಕ್ಕಾಗಿ ರೂ.100 ರಂತೆ ಪಾವತಿಸಲಾಗುವುದು. ತರಬೇತಿ ಕಾರ್ಯಕ್ರಮದ ಕುರಿತು ದೂರುಗಳು ಬಾರದಂತೆ ಎಚ್ಚರವಹಿಸಿ, ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ತರಬೇತಿ ನೀಡಬೇಕು.

ಡಿ. 21 ರಿಂದ 27 ರವರೆಗೆ ಆಫ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಕಚೇರಿ ಸಮಯದಲ್ಲಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಇಲ್ಲಿ ಮುದ್ದಾಂ ಸಲ್ಲಿಸಬಹುದಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿಯಿಂದ ಮಾಹಿತಿ ಪಡೆಯಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ; ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಐಟಿಐ ವಿವಿಧ ವೃತ್ತಿಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟೀಸ್ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಫಿಟ್ಟರ್, ಟರ್ನರ್, ಮಶಿನಿಷ್ಟ್, ಎಲೆಕ್ಟ್ರೀಶಿಯನ್, ವೆಲ್ಡರ್, ಕೋಪಾ, ಫೌಂಡರಿ ಮ್ಯಾನ್, ಶೀಟ್ ಮೆಟಲ್ ವರ್ಕರ್ ಕೋರ್ಸಗಳಲ್ಲಿ ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದೆ.

ಅಪ್ರೆಂಟೀಸ್ ತರಬೇತಿ ಪಡೆಯಲು ಇಚ್ಫಿಸುವವರು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಕಲಬುರಗಿ ಇಲ್ಲಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಹಾಗೂ ಐ.ಟಿ.ಐ. ಪಾಸಾದ ಅಂಕಪಟ್ಟಿ, ಆಧಾರ ಕಾರ್ಡ್, ಮೀಸಲಾತಿ ಬಯಸಿದ್ದಲ್ಲಿ ಪ್ರಮಾಣ ಪತ್ರವನ್ನು ಲಗತ್ತಿಸಿ ಡಿಸೆಂಬರ್ 29ರೊಳಗೆ ಸಲ್ಲಿಸಬೇಕು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-274846.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+