ಸಿಂಡಿಕೇಟ್ ಬ್ಯಾಂಕಿನಲ್ಲಿ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ಸಿಂಡಿಕೇಟ್ ಬ್ಯಾಂಕಿನಲ್ಲಿ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

2017-18 ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಕನ್ಸಲ್ಟೆಂಟ್ ಹುದ್ದೆಗೆ ಗುತ್ತಿಗೆ ಆಧಾರಿತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ನವೆಂಬರ್ 30, 2017 ಕೊನೆ ದಿನಾಂಕವಾಗಿದೆ.

Syndicate Bank Recruitment 2017 Notification for Advisor, Consultant

ವಿದ್ಯಾರ್ಹತೆ: ಸಿಂಡಿಕೇಟ್ ಬ್ಯಾಂಕಿನ ಎಂಎಂಜಿಎಸ್ -111/ ಎಸ್ಎಂಜಿಎಸ್ IV/ ಎಸ್ಎಂಜಿಎಸ್ V ಶ್ರೇಣಿಯ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರಿಗೆ ಆದ್ಯತೆ. ಬ್ಯಾಂಕಿನ ಇ ಲರ್ನಿಂಗ್ ವ್ಯವಸ್ಥೆ ಅಳವಡಿಕೆಗಾಗಿ ಗುತ್ತಿಗೆ ಆಧಾರಿತ ನೇಮಕಾತಿ ಇದಾಗಿದೆ.

ವಯೋಮಿತಿ: 01 ಅಕ್ಟೋಬರ್ 2017ರಂತೆ ಗರಿಷ್ಠ 62 ವರ್ಷ.

ಸಂಬಳ ನಿರೀಕ್ಷೆ : ತಿಂಗಳಿಗೆ 60 ಸಾವಿರ ರು.

ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸರಿಯಾದ ಮಾದರಿಯಲ್ಲಿ ಭರ್ತಿ ಮಾಡಿ, ಸರಿಯಾದ ದಾಖಲೆಗಳೊಂದಿಗೆ ಸಿಂಡಿಕೇಟ್ ಬ್ಯಾಂಕಿನ ಇಮೇಲ್ ಐಡಿ ಪತ್ರ ಕಳಿಸಬಹುದು. ಅರ್ಜಿ ಸಲ್ಲಿಸುವ ವಿವರ ಹಾಗೂ ಇನ್ನಿತರ ಮಾಹಿತಿಗೆ ಸಿಂಡಿಕೇಟ್ ಬ್ಯಾಂಕಿನ ವೆಬ್ ಸೈಟ್ ಗೆ ಭೇಟಿ ಕೊಡಿ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30 ನವೆಂಬರ್ 2017.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Syndicate Bank released a new recruitment notification through its official website syndicatebank.in. Syndicate Bank 2017-2018 Notification for the recruitment of Consultant Vacancies on a contract basis. Job seekers can apply on or before 30th November 2017

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ