Government Jobs: ಗ್ರೂಪ್ 'ಡಿ' ನೇಮಕಾತಿ, 26 ಸಾವಿರ ಪದವೀಧರರು, 6 ಸಾವಿರ ಸ್ನಾತಕೋತ್ತರ ಪದವೀಧರರ ಅರ್ಜಿ!
ನವದೆಹಲಿ, ಸೆಪ್ಟೆಂಬರ್ 05: ರಾಜ್ಯ ಸರ್ಕಾರವೊಂದು ಅಧಿಸೂಚನೆ ಹೊರಡಿಸಿರುವ 13,000 ಗ್ರೂಪ್ 'ಡಿ' ಹುದ್ದೆಗಳ ನೇಮಕಾತಿಗೆ ಸುಮಾರು 4 ಲಕ್ಷ ಅರ್ಜಿಗಳು ಬಂದಿವೆ. ಇವುಗಳಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಈ ಹುದ್ದೆಯ ವೇತನ 15,000 ರೂ.ಗಳು ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.
ಸದ್ಯದ ಮಾಹಿತಿಗಳ ಪ್ರಕಾರ ಸುಮಾರು 26 ಸಾವಿರ ಪದವೀಧರರು, 6 ಸಾವಿರಕ್ಕೂ ಅಧಿಕ ಸ್ನಾತಕೋತ್ತರ ಪದವೀಧರರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹರ್ಯಾಣ ಕುಶಲ ರೋಜ್‌ಗಾರ್ ನಿಗಮ ಗುತ್ತಿಗೆ ಆಧಾರದಲ್ಲಿ ಗ್ರೂಪ್ 'ಡಿ' ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಬಂದಿರುವ ಅರ್ಜಿಗಳ ಸಂಖ್ಯೆ ನೋಡಿ ನಿಗಮವೇ ಅಚ್ಚರಿಯನ್ನು ವ್ಯಕ್ತಪಡಿಸಿದೆ.

ಮಾಹಿತಿಗಳಂತೆ 1.18 ಲಕ್ಷ ದ್ವಿತೀಯ ಪಿಯು ವ್ಯಾಸಂಗ ಮಾಡಿದವರು. ಪದವೀಧರರು, ಸ್ನಾತಕೋತ್ತರ ಪದವೀಧರರು ಸೇರಿ ಒಟ್ಟು 4 ಲಕ್ಷಕ್ಕೂ ಅಧಿಕ ಅರ್ಜಿಗಳು 13,000 ಹುದ್ದೆಗಳಿಗೆ ಸಲ್ಲಿಕೆಯಾಗಿದೆ. ಗುತ್ತಿಗೆ ಆಧಾರದ ನೇಮಕಾತಿ ಮೂಲಕ ನೇಮಕಗೊಂಡ ಅಭ್ಯರ್ಥಿಗಳಿಗೆ 15,000 ರೂ. ವೇತನ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವಾಗ ನೇಮಕಾತಿ ಆದೇಶವನ್ನು ವಿವರವಾಗಿ, ಎಚ್ಚರಿಕೆಯಿಂದ ಓದುವಂತೆ ತಿಳಿಸಲಾಗಿತ್ತು. ಆಯ್ಕೆಯಾದ ಅಭ್ಯರ್ಥಿಗಳು ರಸ್ತೆ, ಸಾರ್ವಜಿನಿಕ ಸ್ಥಳ, ಕಟ್ಟಡಗಳ ಆವರಣದಲ್ಲಿನ ಕಸ ಗುಡಿಸುವುದು, ಕಸವನ್ನು ವಿಲೇವಾರಿ ಮಾಡುವ ಕೆಲಸ ಮಾಡಬೇಕಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಹರ್ಯಾಣ ಸಿಬ್ಬಂದಿ ನೇಮಕಾತಿ ಆಯೋಗದ ಮೂಲಕ ಈ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳ ನೇಮಕಾತಿಯನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ. ಈ ಬಾರಿ ಆಯೋಗ ಅಭ್ಯರ್ಥಿಗಳು ಇಲಾಖೆ, ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡಿತ್ತು. ಲಿಖಿತ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವ ಮುನ್ನವೇ ಈ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.

ಹರ್ಯಾಣ ಕುಶಲ ರೋಜ್‌ಗಾರ್ ನಿಗಮ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ಒದಗಿಸುವ ಹೊರ ಗುತ್ತಿಗೆ ಸಂಸ್ಥೆಯಾಗಿದೆ. 13 ಸಾವಿರ ಹುದ್ದೆಗೆ ಇಷ್ಟು ಅರ್ಜಿಗಳು ಸಲ್ಲಿಕೆಯಾಗಿರುವುದು ನಿಗಮದ ಅಧಿಕಾರಿಗಳಿಗೂ ಅಚ್ಚರಿಯನ್ನು ಮೂಡಿಸಿದೆ. ಸರ್ಕಾರದ ವಿವಿಧ ಇಲಾಖೆ, ನಿಗಮ, ಮಂಡಳಿ, ರಾಜ್ಯದ ವಿಶ್ವವಿದ್ಯಾಲಯಗಳ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುತ್ತದೆ.

Click it and Unblock the Notifications