SSC GD ನೇಮಕಾತಿ 2022: 24000 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ನವೆಂಬರ್ 7: ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) 2022ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟಿಸಿದೆ. ಒಟ್ಟು 24000 ವಿವಿಧ ಹುದ್ದೆಗಳಿದ್ದು, ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ನವೆಂಬರ್ 30ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Staff Selection Commission
ಹುದ್ದೆ ಹೆಸರು: Sub Inspector (GD), Central Para Military Forces (CAPFs), SSF, Assam Rifles and Sepoy (Sepoy)
ಒಟ್ಟು ಹುದ್ದೆ: 24369
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 30, 2022
ಹುದ್ದೆ ಹೆಸರು - ಒಟ್ಟು ಹುದ್ದೆ
ಬಿಎಸ್ಎಫ್: 10497 ಹುದ್ದೆಗಳು
ಸಿಐಎಸ್ಎಫ್: 100 ಹುದ್ದೆಗಳು
ಸಿಆರ್‌ಪಿಎಫ್: 8911 ಹುದ್ದೆಗಳು
ಎಸ್‌ಎಸ್‌ಬಿ: 1284 ಹುದ್ದೆಗಳು
ಐಟಿಬಿಪಿ: 1613 ಹುದ್ದೆಗಳು
ಎಆರ್: 1697 ಹುದ್ದೆಗಳು
ಎಸ್‌ಎಸ್‌ಎಫ್: 103 ಹುದ್ದೆಗಳು
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ಪಾಸ್.

ವಯೋಮಿತಿ: 20 ರಿಂದ 25 ವರ್ಷ.
ನೇಮಕಾತಿ: ಎಸ್ಎಸ್ ಸಿ ಸಿಪಿಒ ಎಸ್ ಐ ಹುದ್ದೆಗಳಿಗೆ ಸಿಬಿಟಿ, ದೈಹಿಕ ಪರೀಕ್ಷೆ(ಪಿಎಸ್ ಟಿ, ಪಿಇ ಟಿ) ಸಂಪೂರ್ಣ ವೈದ್ಯಕೀಯ ಪರೀಕ್ಷೆ (ಡಿಎಂಇ), ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಪರೀಕ್ಷೆಗಳು ನಿಗದಿಯಾಗಿವೆ.
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿಯೋಧ/ ಮಹಿಳೆ: ಯಾವುದೇ ಶುಲ್ಕ.
ಇತರೆ: 100ರು
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಎಸ್ ಬಿಐ ಚಲನ್ ಮೂಲಕ ಪಾವತಿಸಬಹುದು.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಅಕ್ಟೋಬರ್ 27, 2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30/11/2022
ಪರೀಕ್ಷಾ ದಿನಾಂಕ: ಜನವರಿ 2023.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿ ಕ್ಲಿಕ್ ಮಾಡಿ











Click it and Unblock the Notifications