1223 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಎಸ್‌ಸಿ
ಬೆಂಗಳೂರು, ಮಾರ್ಚ್ 06 : ಎಸ್‌ಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 2, 2018ರೊಳಗೆ ಹೆಸರು ನೋಂದಾಯಿಸಬಹುದಾಗಿದೆ.
ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ದೆಹಲಿಯಲ್ಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಿಐಎಸ್‌ಎಫ್ ನಲ್ಲಿನ ವಿವಿಧ ಹುದ್ದೆ ಸೇರಿದಂತೆ ಒಟ್ಟು 1223 ಹುದ್ದೆಗಳನ್ನು ಭರ್ತಿ ಮಾಡಲಿದೆ. ವೇತನ ಶ್ರೇಣಿ 35,400 ರಿಂದ 1,12,400 ರೂ.ಗಳು.

ಇಲಾಖಾವಾರು ಹುದ್ದೆಗಳು
* ದೆಹಲಿ ಪೊಲೀಸ್ - 150 ಹುದ್ದೆ (97 ಪುರುಷ, 53 ಮಹಿಳಾ ಸಬ್ ಇನ್ಸ್ ಪೆಕ್ಟರ್)
* ಸಿಆರ್‌ಪಿಎಫ್ - 274 ಹುದ್ದೆ (ಪುರುಷ 274)
* ಬಿಎಸ್‌ಎಫ್ - 508 ಹುದ್ದೆ (ಪುರುಷ 483, ಮಹಿಳಾ 25)
* ಐಟಿಬಿಪಿ - 85 ಹುದ್ದೆ (ಪುರುಷ 72, ಮಹಿಳಾ 13)
* ಎಸ್‌ಎಸ್‌ಬಿ - 206 ಹುದ್ದೆ (ಪುರುಷ 206)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1/8/2018ಕ್ಕೆ ಅನ್ವಯವಾಗುವಂತೆ.
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications