SBI Recruitment 2025: ಎಸ್‌ಬಿಐ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ
SBI Recruitment 2025: ಬ್ಯಾಂಕ್‌ಗಳಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಹಾಗಾದ್ರೆ ಎಷ್ಟು ಹದ್ದೆಗಳಿಗೆ ಅರ್ಜಿ ಆಹ್ವಾನಿದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿಯಲ್ಲಿ ಒಟ್ಟು 541 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುವುದು. ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಆಗಿದ್ದು, ಕೊನೇ ದಿನಾಂಕ ಜುಲೈ 14 ಆಗಿದೆ. ಆಸಕ್ತರು sbi.co.inಗೆ ಭೇಟಿ ನೀಡಿ ಮೂಲಕ ಅಥವಾ ನೇರವಾಗಿ ನೋಂದಣಿ ಪೋರ್ಟಲ್ ibpsonline.ibps.in/sbipomay25ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಹುದ್ದೆಗಳ ವಿವರ
* 500 ಹುದ್ದೆಗಳು ನಿಯಮಿತ ವರ್ಗದ ಹುದ್ದೆಗಳು
* 41 ಹುದ್ದೆಗಳು ಬ್ಯಾಕ್‌ಲಾಗ್ ಹುದ್ದೆಗಳಾಗಿವೆ.
* ಒಟ್ಟು 541 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ, ವಯೋಮಿತಿ ವಿವರ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪದವಿ ಪಡೆದಿರಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅಭ್ಯರ್ಥಿಯ ವಯಸ್ಸು 21ರಿಂದ 30 ವರ್ಷಗಳ ಒಳಗೆ ಇರಬೇಕು. ಮೀಸಲಾತಿಯಲ್ಲಿ ಸಡಿಲಿಕೆ ಇದ್ದು, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗಗಳ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವರ್ಗಗಳವಾರು ಅರ್ಜಿ ಶುಲ್ಕದ ವಿವರ
* ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ ವರ್ಗದವರಿಗೆ 750 ರೂಪಾಯಿ
* ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
* ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನಗಳು
* ನೋಂದಣಿ ಪೋರ್ಟಲ್ ibpsonline.ibps.in/sbipomay25/ಗೆ ಭೇಟಿ ನೀಡಿ
* ಹೊಸ ನೋಂದಣಿಗಾಗಿ ಎಂಬುದರ ಮೇಲೆ ಕ್ಲಿಕ್ ಮಾಡಿ
* ಕೇಳಲಾದ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನೋಂದಾಯಿಸಿ
* ನಂತರ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ
* ಅಭ್ಯರ್ಥಿಯ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
* ಶುಲ್ಕ ಪಾವತಿಸಿದ ಬಳಿಕ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
* ಕೊನೆಯದಾಗಿ ಅಭ್ಯರ್ಥಿಗಳು ಫಾರ್ಮ್‌ನ ಪ್ರಿಂಟ್ ಕಾಪಿ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಮರೆಯಬಾರದು.












Click it and Unblock the Notifications