48 ಹುದ್ದೆಗಳಿಗೆ ಅರ್ಜಿ ಕರೆದ ಎಸ್‌ಬಿಐ, ಪದವೀಧರರು ಅರ್ಜಿ ಹಾಕಿ

Recommended Video

      ಎಸ್ ಬಿ ಐ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | Oneindia kannada

      ಬೆಂಗಳೂರು, ಸೆಪ್ಟೆಂಬರ್ 07 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 48 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಸೆಪ್ಟೆಂಬರ್ 24, 2018 ಕೊನೆಯ ದಿನವಾಗಿದೆ.

      ಎಸ್‌ಬಿಐ ಡೆಪ್ಯೂಟಿ ಮ್ಯಾನೇಜರ್ ಸೆಕ್ಯೂರಿಟಿ 27, ಫೈರ್ ಆಫೀಸರ್ 21 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

      ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಅರ್ಜಿಗಳನ್ನು ಸಲ್ಲಿಸುವವರು ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾನಿಯದಿಂದ ಪದವಿ ಪಡೆದಿರಬೇಕು.

      SBI recruitment 2018 : Apply for Dy Manager and Fire Officer post

      ಫೈರ್ ಅಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಇ (ಫೈರ್) ವಿಷಯದಲ್ಲಿ ಎನ್‌ಎಫ್‌ಎಸ್‌ಸಿ ನಾಗ್ಪುರದಿಂದ ಉತ್ತೀರ್ಣರಾಗಿರಬೇಕು. ಬಿ.ಟೆಕ್ ಪದವಿಯನ್ನು (ಸೇಫ್ಟಿ ಮತ್ತು ಫೈರ್ ಇಂಜಿನಿಯರಿಂಗ್‌) ನಲ್ಲಿ ಎಐಸಿಟಿಇ ಮಾನ್ಯತೆ ಪಡೆದ ವಿವಿಯಿಂದ ಪಡೆದಿರಬೇಕು.

      ವಯೋಮಿತಿ : ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಕನಿಷ್ಠ 28 ವರ್ಷ ಗರಿಷ್ಠ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಫೈರ್ ಆಫೀಸರ್ ಹುದ್ದೆಗೆ ಕನಿಷ್ಠ 35 ವರ್ಷ ಗರಿಷ್ಠ 62 ವರ್ಷಗಳು. (31 ಆಗಸ್ಟ್ 2018ಕ್ಕೆ ಅನ್ವಯವಾಗುವಂತೆ)

      ವೇತನ ಶ್ರೇಣಿ : 31705-45950 ರೂ. ಪ್ರತಿ ತಿಂಗಳು.

      ಅರ್ಜಿ ಸಲ್ಲಿಸಲು ವಿಳಾಸ ಕ್ಲಿಕ್ ಮಾಡಿ

      ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+