ಎಸ್.ಬಿ.ಐನಿಂದ 9,000 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜನವರಿ 20: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಶುಕ್ರವಾರ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕ್ಲರ್ಕ್ ದರ್ಜೆಯ ಒಟ್ಟು 9,000 ಜೂನಿಯರ್ ಅಸೋಸಿಯೇಟ್ ಹುದ್ದೆ (ಗ್ರಾಹಕ ಸೇವೆ ಮತ್ತು ಸೇಲ್ಸ್) ಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಆಸಕ್ತರು ಇಂದಿನಿಂದಲೇ (ಜನವರಿ 20) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರಲಿದೆ.

ಹುದ್ದೆಗಳಲ್ಲಿ ಮೀಸಲಾತಿಗಳೂ ಇವೆ. ಶೇಕಡಾ 4ರಷ್ಟು ಹುದ್ದೆಗಳನ್ನು ವಿಶೇಷ ಚೇತನರಿಗೆ ಕಾಯ್ದಿರಿಸಲಾಗಿದ್ದು, ನೇರ ನೇಮಕಾತಿಗೂ ಅವಕಾಶವಿದೆ.

ಖಾಲಿ ಹುದ್ದೆ ಮತ್ತು ಅರ್ಹತೆ

ಖಾಲಿ ಹುದ್ದೆ ಮತ್ತು ಅರ್ಹತೆ

ಒಟ್ಟು 9,000 ಜೂನಿಯರ್ ಅಸೋಸಿಯೇಟ್ ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಅಥವಾ ಅದಕ್ಕೆ ಸರಿಸಮಾನಾದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈಗಾಗಲೇ ಎಸ್.ಬಿ.ಐ ನಲ್ಲಿ ಕ್ಲರ್ಕ್ ಆಗಿ ಅಥವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ವಯೋಮಿತಿ, ಆಯ್ಕೆ ಪ್ರಕ್ರಿಯೆ

ವಯೋಮಿತಿ, ಆಯ್ಕೆ ಪ್ರಕ್ರಿಯೆ

ಗರಿಷ್ಠ 28 ವರ್ಷವನ್ನು ಮೀರಿರಬಾರದು. ಇನ್ನು ಸರಕಾರ ನಿಯಮಗಳ ಪ್ರಕಾರ ಕೆಲವು ವಿಶೇಷ ವ್ಯಕ್ತಿಗಳಿಗೆ 20 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಆನ್ಲೈನ್ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ನಡೆಯಲಿದೆ. ನಂತರ ಭಾಷಾ ಪರೀಕ್ಷೆ ನಡೆಯಲಿದೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಭಾಷಾ ಪರೀಕ್ಷೆ ನಡೆಯಲಿದೆ.

 ಪೂರ್ವಭಾವಿ ಪರೀಕ್ಷೆ ವಿವರ

ಪೂರ್ವಭಾವಿ ಪರೀಕ್ಷೆ ವಿವರ

ಪೂರ್ವಭಾವಿ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮೂರು ವಿಭಾಗದ ಪ್ರಶ್ನೆಗಳನ್ನು ಇರಲಿದ್ದು ಒಂದು ಗಂಟೆ ಸಮಯಾವಕಾಶದಲ್ಲಿ ಉತ್ತರಿಸಬೇಕಾಗುತ್ತದೆ.

* ಇಂಗ್ಲೀಷ್ ಭಾಷೆ (30 ಪ್ರಶ್ನೆಗಳು): 30 ಅಂಕ

* ನ್ಯೂಮೆರಿಕಲ್ ಅಬಿಲಿಟಿ (ಸಂಖ್ಯಾತ್ಮಕ ಸಾಮರ್ಥ್ಯ - 35 ಪ್ರಶ್ನೆಗಳು): 35 ಅಂಕ

* ರೀಸನಿಂಗ್ ಅಬಿಲಿಟಿ (ತಾರ್ಕಿಕ ಸಾಮರ್ಥ್ಯ - 35 ಪ್ರಶ್ನೆಗಳು): 35 ಅಂಕ

 ಮುಖ್ಯ ಪರೀಕ್ಷೆ ವಿವರಗಳು

ಮುಖ್ಯ ಪರೀಕ್ಷೆ ವಿವರಗಳು

* ಪರೀಕ್ಷೆಯ ಅವಧಿ 2 ಗಂಟೆ 40 ನಿಮಿಷಗಳು

* ಸಾಮಾನ್ಯ ಮತ್ತು ಆರ್ಥಿಕ ಜ್ಞಾನ (50 ಪ್ರಶ್ನೆಗಳು): 50 ಅಂಕ

* ಸಾಮಾನ್ಯ ಇಂಗ್ಲೀಷ್ (40 ಪ್ರಶ್ನೆಗಳು): 40 ಅಂಕ

* ಕ್ಯಾಂಟಿಟೇಟಿವ್ ಆಪ್ಟಿಟ್ಯೂಡ್ (50 ಪ್ರಶ್ನೆಗಳು): 50 ಅಂಕ

* ರೀಸನಿಂಗ್ ಅಬಿಲಿಟಿ ಮತ್ತು ಕಂಪ್ಯೂಟ್ ಅಪ್ಟಿಟ್ಯೂಡ್ (50 ಪ್ರಶ್ನೆಗಳು): 50 ಅಂಕ

ತಪ್ಪು ಉತ್ತರಗಳಿಗೆ 1/4 ಋಣಾತ್ಮಕ ಅಂಕಗಳು ಇರಲಿವೆ.

 ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಎಸ್.ಬಿ.ಐನ ಅಧಿಕೃತ ವೆಬ್ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ನಂತರ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಎಲ್ಲಾ ಪ್ರಕ್ರಿಯೆಗಳನ್ನು ಆನ್ಲೈನ್ ನಲ್ಲೇ ನಡೆಸಬೇಕಾಗಿದೆ.

 ಅಂತಿಮ ದಿನಾಂಕ

ಅಂತಿಮ ದಿನಾಂಕ

* ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 10

* ಪೂರ್ವಭಾವಿ ಪರೀಕ್ಷೆ: ಮಾರ್ಚ್/ ಏಪ್ರಿಲ್

* ಮುಖ್ಯ ಪರೀಕ್ಷೆ: ಮೇ 12 (ತಾತ್ಕಾಲಿಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+