Prasar Bharati Recruitment: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಭರ್ಜರಿ ನೇಮಕಾತಿ, ಆಕರ್ಷಕ ವೇತನ
ಬೆಂಗಳೂರು, ನವೆಂಬರ್ 24: ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಸಿಕ್ಕಿದೆ. "ಪ್ರಸಾರ ಭಾರತಿ' ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಈ ಸಂಬಂಧ 2025ನೇ ಸಾಲಿನ ಉದ್ಯೋಗ ನೇಮಕಾತಿಯ ಅಧಿಸೂಚನೆ ಹೊರಡಿಸಲಾಗಿದೆ.
ಪ್ರಸಾರ ಭಾರತಿಯಲ್ಲಿ ಖಾಲಿ ಇರುವ 29 ಕಾಪಿ ಎಡಿಟರ್ಸ್ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದವರು ಕೂಡಲೇ ಆನ್‌ಲೈನ್ ಮೂಲಕ (https://prasarbharati.gov.in/) ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಪೂರ್ಣ ವಿವರ, ಮಾಸಿಕ ವೇತನ, ಆಯ್ಕೆ ಹೇಗೆ ಎಂಬೆಲ್ಲ ವಿವರ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಪ್ರಸಾರ ಭಾರತಿ
ಉದ್ಯೋಗ: ಕಾಪಿ ಎಡಿಟರ್
ಒಟ್ಟು ಹುದ್ದೆಗಳು: 29
ಪೋಸ್ಟಿಂಗ್: ಅಖಿಲ ಭಾರತ
ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 03
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಆನ್‌ಲೈನ್ ಲಿಂಕ್: https://prasarbharati.gov.in/
ಶೈಕ್ಷಣಿಕ ಅರ್ಹತೆ
ಪದಿವ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳು ಕೂಡಲೇ ಸೂಕ್ತ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಬೇಕು.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವಯಸ್ಸಾಗಿರಬೇಕು. ಈ ವಯಸ್ಸು ನವೆಂಬರ್ 18ಕ್ಕೆ ಹೊಂದಿಕೆಯಾಗುವಂತೆ 35 ಮೀರಿರಬಾರದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಹೇಗೆ ಮತ್ತು ಮಾಸಿಕ ವೇತನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಸಾರ ಭಾರತಿಯು ಲಿಖಿತ ಪರೀಕ್ಷೆ ನಡೆಸುತ್ತದೆ. ಬಳಿಕ ಸಂದರ್ಶನ ಮೂಲಕ ಅಯ್ಕೆ ಮಾಡಲಿದೆ. ಆಯ್ಕೆ ಆದವರು ಅಖಿಲ ಭಾರತ ಮಟ್ಟದಲ್ಲಿ ಅಂದರೆ ದೇಶದ ಎಲ್ಲಿಯಾದರೂ ಕೆಲಸ ಮಾಡಲು ಸಿದ್ಧರಿರಬೇಕು. ಅವರಿಗೆ ಮಾಸಿಕವಾಗಿ 35,000 ರೂಪಾಯಿ ವೇತನ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಮೇಲೆ ನೀಡಲಾಗಿರುವ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ ಅಲ್ಲಿರುವ ಪ್ರಸಾರ ಭಾರತಿ ವಿಭಾಗ ಆಯ್ಕೆ ಮಾಡಿಕೊಂಡು, ಪೊಮ್ಮೆ ಕಾಪಿ ಎಡಿಟರ್ ಹುದ್ದೆ ಅಧಿಸೂಚನೆ ಓದಿಕೊಳ್ಳಬೇಕ. ಬಳಿಕ ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆದು, ಅಗತ್ಯ ಎಲ್ಲ ವಿವರ ಭರ್ತಿ ಮಾಡಿ ಸಲ್ಲಿಸಬೇಕು. ಭವಿಷ್ಯದ ಮಾಹಿತಿಗಾಗಿ ಅರ್ಜಿ ಪ್ರತಿ ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು.












Click it and Unblock the Notifications