NIMHANS Recruitment 2023: ಬೆಂಗಳೂರಿನಲ್ಲೆ ₹50,000 ಉದ್ಯೋಗ, ಕೂಡಲೇ ಅರ್ಜಿ ಹಾಕಿ, ವಿವರ
ಬೆಂಗಳೂರು, ಅಕ್ಟೋಬರ್ 09: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯು (NIMHANS) ಆಗಿದ್ದಾಗ್ಗೆ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಸುತ್ತಲೇ ಇರುತ್ತದೆ. ಈ ಬಾರಿಯು ಸಹ ಕೈತುಂಬ ಸಂಬಳದ ಹುದ್ದೆಗೆ ಪದವಿಧರರನ್ನು ಆಹ್ವಾನಿಸಿದೆ.
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಒಂದು ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆ ಖಾಲಿ ಇದೆ. ಇದಕ್ಕೆ ಅರ್ಹ ಆಸಕ್ತ ಅಭ್ಯರ್ಥಿಗಳು ಇದೇ ತಿಂಗಳ ಅಕ್ಟೋಬರ್ 18ರೊಳಗೆ ಅರ್ಜಿ ಸಲ್ಲಿಸಬೇಕು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಮೊದಲ ಈ ಕೆಳಗಿನ ಮಾಹಿತಿಗಳನ್ನು ತಿಳಿಯಿರಿ

ನಿಮ್ಹಾನ್ಸ್ ನೇಮಕಾತಿಯ ವಿವರಗಳು
ಖಾಲಿ ಹುದ್ದೆ ಹೆಸರು: ಪ್ರಾಜೆಕ್ಟ್ ಕೋಆರ್ಡಿನೇಟರ್
ಖಾಲಿ ಹುದ್ದೆ ಸಂಖ್ಯೆ: 01
ಮಾಸಿಕ ವೇತನ: 50,000 ರೂಪಾಯಿ
ಪೋಸ್ಟಿಂಗ್ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಅಕ್ಟೋಬರ್ 18
ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಸಾರ್ವಜನಿಕ ಆರೋಗ್ಯ/ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ
ಹುದ್ದೆ ಪಡೆಯಲು ಇಚ್ಚಿಸುವ ಆಸಕ್ತ ಅಭ್ಯರ್ಥಿಗಳ ವಯಸ್ಸು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ಹೇಳಿದೆ.
ಆಯ್ಕೆ ಹೇಗೆ ನಡೆಯಲಿದೆ
ಅರ್ಜಿ ಸಲ್ಲಿಸಿದವರಿಗೆ ಸಂಸ್ಥೆಯು ಮೊದಲು ಲಿಖಿತ ಪರೀಕ್ಷೆ ನಡೆಸುತ್ತದೆ. ನಂತರ ಅಲ್ಲಿ ಆಯ್ಕೆ ಆಗುವವರಿಗೆ ನೇರ ಸಂದರ್ಶನ ನಡೆಸಲಿದೆ. ಈ ಪ್ರಕ್ರಿಯೆಯಲ್ಲಿ ಪೂರ್ಣಗೊಳ್ಳುವವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಿದೆ.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳ ಸಹಿತ ಇ-ಮೇಲ್ ಐಡಿ [email protected] ಗೆ ಇದೆ ತಿಂಗಳ ಅಕ್ಟೋಬರ್ 18ರೊಳಗೆ ಕಳುಹಿಸಬೇಕು ಎಂದು ಬೆಂಗಳೂರ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ತನ್ನ ಅಧಿಸೂಚನೆ ಸೂಚಿಸಿದೆ.












Click it and Unblock the Notifications