NIMHANS Jobs 2023: ಸೋಮವಾರ ಬೆಂಗಳೂರಿನಲ್ಲಿ ವಾಕ್ ಇನ್ ಸಂದರ್ಶನ, ಮಾಹಿತಿ
ಬೆಂಗಳೂರು, ನವೆಂಬರ್ 19: ರಾಷ್ಟ್ರೀಯ ಮಾನಸಿಕ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (NIMHANS) ತನ್ನಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಸೋಮವಾರ ನವೆಂಬರ್ 20ರಂದು ನೇರ ಸಂದರ್ಶನ ಹಮ್ಮಿಕೊಂಡಿದೆ. ಈ ನಿಮಿತ್ತ ಈಗಾಗಲೇ ಅರ್ಜಿ ಹಾಕಿದ ಅರ್ಹ ಅಭ್ಯರ್ಥಿಗಳು ಬೆಳಗ್ಗೆ ಬೆಂಗಳೂರಿನ ನಿಮ್ಹಾನ್ಸ್ ಕಚೇರಿಗೆ ಭೇಟಿ ನೀಡಬಹುದು.
ನಿಮ್ಹಾನ್ಸ್ ನಲ್ಲಿ ಒಟ್ಟು 34 ನ್ಯೂರೋಲಾಜಿಸ್ಟ್ ಹುದ್ದೆಗಳು ಖಾಲಿ ಇವೆ. ಈಗಾಗಲೇ ಈ ಹುದ್ದೆಗಳ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿದವರ ಆಯ್ಕೆ ನಾಳೆ ನವೆಂಬರ್ 20 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತರು ಭಾಗವಹಿಸುವಂತೆ ಕೋರಲಾಗಿದೆ.

ನೇಮಕಾತಿ ಪೂರ್ಣ ವಿವರ
ನಿಮ್ಹಾನ್ಸ್ ಸಂಸ್ಥೆಯಲ್ಲಿ ಒಟ್ಟು 34 ನ್ಯೂರೋಲಜಿಸ್ಟ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಎಂಬಿಬಿಎಸ್, ಎಂಡಿ, ಡಿಎಂ, ಡಿಎನ್‌ಬಿ ಪದವಿ ಪೂರ್ಣಗೊಳಿಸಿದವರಿಂದ ಸಂಸ್ಥೆ ಅರ್ಜಿ ಆಹ್ವಾನಿಸಿತ್ತು. ಈ ನೇಮಕಾತಿ ಪ್ರಕ್ರಿಯೆ ಮುಂದುವರಿದಿದೆ.ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುವುದು ಎಂದು ತಿಳಿಸಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್, ಎಂಡಿ, ಡಿಎಂ, ಡಿಎನ್‌ಬಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. ಇಲ್ಲಿನ ಮಾಹಿತಿ ತಿಳಿದುಕೊಂಡು ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.
ವಯೋಮಿತಿ ವಯಸ್ಸು ನೋಡುವುದಾದರೆ ನಿಮ್ಹಾನ್ಸ್ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಗರಿಷ್ಠ 60 ವರ್ಷ ಮೀರಿರಬಾರದು ಎಂದು ತಿಳಿಸಿದೆ. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಿದೆ.
ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಆದವರಿಗೆ ಮಾಸಿಕ ₹ 75,000-1,50,000 ನೀಡಲಾಗುವುದು.
ಸಂದರ್ಶನ ನಡೆಯುವ ಸ್ಥಳ
ಉಪನ್ಯಾಸ ಸಭಾಂಗಣ ಐ, ಎಂವಿ ಗೋವಿಂದಸ್ವಾಮಿ ಕಟ್ಟಡ, 2ನೇ ಮಹಡಿ, ಸಾಂಕ್ರಾಮಿಕ ರೋಗ ವಿಭಾಗ
ನಿಮ್ಹಾನ್ಸ್, ಬೆಂಗಳೂರು-560029 ಇಲ್ಲಿ ಸೋಮವಾರ ಬೆಳಗ್ಗೆ ಅಭ್ಯರ್ಥಿಗಳು ಬೆಳಗ್ಗೆ 10 ಗಂಟೆಯೊಳಗೆ ತೆರಳಬೇಕು ಎಂದು ತಿಳಿಸಿದೆ.












Click it and Unblock the Notifications