NHAI Recruitment 2025: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದಿಂದ 84 ಹುದ್ದೆಗಳಿಗೆ ಅರ್ಜಿ ಆಹ್ವಾನ
NHAI Recruitment 2025: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಖಾಲಿ ಇರುವ 84 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದ್ರೆ ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಬಹುದು? ಕೊನೆಯ ದಿನಾಂಕ ಯಾವಾಗ? ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎನ್‌ಎಚ್‌ಎಐ ಉಪ ವ್ಯವಸ್ಥಾಪಕ, ಜೂನಿಯರ್ ಅನುವಾದ ಅಧಿಕಾರಿ ಸೇರಿದಂತೆ 84 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಎಂಂಬಿಎ ಮತ್ತು ಸಿಎಂ ಪದವೀಧರರು ಈ ಹುದ್ದೆಗಳುಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 15 ಕೊನೇ ದಿನಾಂಕ ಆಗಿದೆ. ಆಸಕ್ತರು nhai.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ ವಿವರ: ಈ ಹುದ್ದೆಗಳಲ್ಲಿ ಉಪ ವ್ಯವಸ್ಥಾಪಕ , ಜೂನಿಯರ್ ಅನುವಾದ ಅಧಿಕಾರಿ, ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ, ಲೆಕ್ಕಪತ್ರಗಾರ ಮತ್ತು ಸ್ಟೆನೋಗ್ರಾಫರ್ ಗ್ರೇಡ್-II ಸೇರಿವೆ. ಆಯಾ ಹುದ್ದೆಗೆ ತಕ್ಕಂತೆ ಅರ್ಹತೆಗಳ ಆಧಾರದ ಮೇಲೆ ಪ್ರಕ್ರಿಯೆ ನಡೆಯಲಿದೆ. ಈ ವಿವಿಧ ಹುದ್ದೆಗಳಿಗೆ ಅರ್ಜಿದಾರರನ್ನು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷೆಯನ್ನು CBT ಮೋಡ್‌ನಲ್ಲಿ ನಡೆಸಲಾಗುತ್ತದೆ. ಬಳಿಕ ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಪರೀಕ್ಷೆಯು ಒಟ್ಟು 120 ಅಂಕಗಳನ್ನು ಹೊಂದಿದ್ದು, 120 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆ ಎರಡು ಗಂಟೆ ಆಗಿರುತ್ತದೆ.
ವಿದ್ಯಾರ್ಹತೆ ವಿವರ: ಉಪ ವ್ಯವಸ್ಥಾಪಕ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿರಬೇಕು. ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ ಹುದ್ದೆಗೆ ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಲೆಕ್ಕಪತ್ರ ನಿರ್ವಹಣೆ ಹುದ್ದೆಗಳಿಗೆ ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆನ್ಸಿಯಲ್ಲಿ ಇಂಟರ್ಮೀಡಿಯೇಟ್ ಅಥವಾ ವೆಚ್ಚ ಮತ್ತು ನಿರ್ವಹಣಾ ಲೆಕ್ಕಪತ್ರ ನಿರ್ವಹಣೆಯಲ್ಲಿ ಇಂಟರ್ಮೀಡಿಯೇಟ್ ಜೊತೆಗೆ ಪದವಿ ಪಡೆದಿರಬೇಕು.
ವಯೋಮಿತಿ: ಉಪ ವ್ಯವಸ್ಥಾಪಕರು, ಗ್ರಂಥಾಲಯ ಮತ್ತು ಮಾಹಿತಿ ಸಹಾಯಕರು ಮತ್ತು ಲೆಕ್ಕಪತ್ರಗಾರರ ಹುದ್ದೆಗಳಿಗೆ ಅರ್ಜಿದಾರರು 30 ವರ್ಷಗಳನ್ನು ಮೀರಿರಬಾರದು. ಸ್ಟೆನೋಗ್ರಾಫರ್ ಹುದ್ದೆಗೆ ಕನಿಷ್ಠ ವಯೋಮಿತಿ 28 ವರ್ಷಗಳಾಗಿದ್ದು, ಈ ಬಗ್ಗೆ ಪ್ರಾಧಿಕಾರ ಹೊರಡಿಸಿದ ಅಧಿಕೃತ ಹುದ್ದೆಯ ಅಧಿಸೂಚನೆಯನ್ನ ಪರಿಶೀಲನೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಧಾನಗಳು
* NHAIನ ಅಧಿಕೃತ ವೆಬ್‌ಸೈಟ್ nhai.gov.inಗೆ ಭೇಟಿ ನೀಡಿ
* ಮುಖಪುಟದಲ್ಲಿ ನೀಡಿರುವ NHAI ಬಗ್ಗೆ ಟ್ಯಾಬ್‌ಗೆ ಹೋಗಿ
* ಬಳಿಕ ಖಾಲಿ ಹುದ್ದೆ ವಿಭಾಗದ ಮೇಲೆ ಕ್ಲಿಕ್ ಮಾಡಿ
* ಕ್ರಮ ಸಂಖ್ಯೆ:1, 30-10-2025 ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ
* ಅರ್ಜಿ ನಮೂನೆಯನ್ನು ನೋಂದಾಯಿಸಿ ಮತ್ತು ಭರ್ತಿ ಮಾಡಿ
* ಅಲ್ಲಿ ಕೇಳಲಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
* ಫಾರ್ಮ್ ಅನ್ನು ಪರಿಶೀಲನೆ ಮಾಡು ಅರ್ಜಿ ಸಲ್ಲಿಕೆ ಮಾಡಿ












Click it and Unblock the Notifications