ಕೊಡಗು ಜಿಲ್ಲೆಯಲ್ಲಿ ಡಿ. 13, 16 ಮತ್ತು 20ರಂದು ಉದ್ಯೋಗ ಮೇಳ

ಕೊಡಗು, ಡಿಸೆಂಬರ್ 12; ಕೊಡಗು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಡಿಸೆಂಬರ್ 13, 16 ಮತ್ತು 20ರಂದು ಉದ್ಯೋಗ ಮೇಳ ನಡೆಯಲಿದೆ.

ಕೊಡಗು ಜಿಲ್ಲಾಡಳಿತ, ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಜಿಲ್ಲೆಯ ಮೂರು ಕಡೆ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ.

ಹಲವಾರು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಕೊಡಗು ಜಿಲ್ಲೆಯ ನಿರುದ್ಯೋಗಿ ಯುವಕ/ ಯುವತಿಯರು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾಡಳಿತ ಹೇಳಿದೆ.

Mega Job Fair In Kodagu On December 13, 16 And 20

ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಯಾವುದೇ ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.

ಎಲ್‌ ಅಂಡ್ ಟಿ, ಥಿಯೋರಾಮ್, ಕಾಫಿ ಕ್ಯೂರಿಂಗ್, ಮಾಂಡೋವಿ ಮೋಟಾರ್ಸ್, ಸಾಯಿ ಗಾರ್ಮೆಂಟ್ಸ್, ಪ್ಯಾಲೇಸ್ ಟೊಯೋಟಾ, ಟ್ರಿಟೆಂಟ್ ಅಟೋ ಮೊಬೈಲ್, ಭಾರತ್ ಸುಜುಕಿ, ಟಾಟಾ ಸ್ಟ್ರೈಲಿ, ಪ್ರೇರಣಾ ಮೋಟಾರ್ಸ್, ಓರಿಯಂಟಲ್ ಬೆಲ್ ಮುಂತಾದ ಕಂಪನಿಗಳು ಪಾಲ್ಗೊಳ್ಳಲಿವೆ.

ಕೊಡಗು ಜಿಲ್ಲಾಧಿಕಾರಿ ಡಾ. ಬಿ. ಸಿ. ಸತೀಶ ಮಾತನಾಡಿ, "ಕೊಡಗು ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶ. ಮಡಿಕೇರಿಯಲ್ಲಿ ಒಂದು ಕಡೆ ಉದ್ಯೋಗ ಮೇಳ ಮಾಡಿದರೆ ಗಡಿಭಾಗದ ಅಭ್ಯರ್ಥಿಗಳಿಗೆ ಬರಲು ಕಷ್ಟವಾಗಲಿದೆ. ಆದ್ದರಿಂದ ಜಿಲ್ಲೆಯ ಮೂರು ಕಡೆ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ" ಎಂದರು.

ಉದ್ಯೋಗ ಮೇಳ ನಡೆಯುವ ಸ್ಥಳ

* ಡಿಸೆಂಬರ್ 13, ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು

* ಡಿಸೆಂಬರ್ 16, ಮಡಿಕೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ

* ಡಿಸೆಂಬರ್ 20, ಗೋಣಿಕೊಪ್ಪಲು ಕಾವೇರಿ ಪ್ರಥಮ ದರ್ಜೆ ಕಾಲೇಜು

'ಸರ್ವರಿಗೂ ಉದ್ಯೋಗ' ಪರಿಕಲ್ಪನೆಯಡಿ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದು ವೇಳೆ ನೋಂದಣಿ ಮಾಡಿಕೊಳ್ಳದಿದ್ದರೂ ನೇರವಾಗಿ ಆಗಮಿಸಿ ಪಾಲ್ಗೊಳ್ಳಬಹುದು. ಉದ್ಯೋಗ ಮೇಳ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ನಡೆಯಲಿದೆ.

ನಿರುದ್ಯೋಗಿಗಳಿಗೆ ಸಹಾಯಕವಾಗಲು ವೆಬ್‌ಸೈಟ್ (https://skillconnect.kaushalkar.com/) ಆರಂಭಿಸಲಾಗಿದೆ. ಎಲ್ಲರೂ ಕೌಶಲ ತರಬೇತಿ ಪಡೆದುಕೊಂಡರೆ ಉದ್ಯೋಗಗಳಿಸುವುದು ಸುಲಭ. ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+