Mamcos Recruitment: ಮ್ಯಾಮ್ಕೋಸ್ ನೇಮಕಾತಿ, ವಿವಿಧ ಹುದ್ದೆಗಳು ಭರ್ತಿ

ಶಿವವಮೊಗ್ಗ, ಆಗಸ್ಟ್ 09: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿ., ಶಿವಮೊಗ್ಗ (ಮ್ಯಾಮ್ಕೋಸ್) ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ, ಅರ್ಹರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಯನ್ನು 20/8/2024ರ ತನಕ ಸಲ್ಲಿಸಬಹುದು.

ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ, ಶಿವಮೊಗ್ಗ ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರ ಆಹ್ವಾನಿಸಲಾಗಿದೆ.

Mamcos Recruitment Shivamogga Apply For Various Posts

ಅರ್ಹ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ, ಇತ್ಯಾದಿ ವಿವರಗಳನ್ನು ಸಂಸ್ಥೆಯ ವೆಬ್‌ಸೈಟ್ www.mamcos.info ನಲ್ಲಿ ಪ್ರಕಟಿಸಲಾಗಿದೆ.

ಹುದ್ದೆಗಳ ವಿವರ: ಉಪ ಪ್ರಧಾನ ವ್ಯವಸ್ಥಾಪಕರು 2, ಸ್ಟಾಫ್ಟ್‌ವೇರ್ ಇಂಜಿನಿಯರ್ 1, ವ್ಯವಸ್ಥಾಪಕರು 6, ಹಿರಿಯ ಸಹಾಯಕರು 4, ಕಿರಿಯ ಸಹಾಯಕರು 7, ವಾಹನ ಚಾಲಕರು 1 ಸೇರಿ ಒಟ್ಟು 21 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಸಕ್ತ, ಅರ್ಹ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಲ್ಲಿಸಲು ಸಂಸ್ಥೆಯ ಅಧಿಕೃತ ವೆಬ್‌ ಸೈಟ್‌ಗೆ ಭೇಟಿ ನೀಡಿ www.mamcos.info "MAMCOS Recruitment 2024 ಅನ್ನು ಕ್ಲಿಕ್ ಮಾಡುವುದರ ಮೂಲಕ ಅರ್ಜಿ ಭರ್ತಿ ಮಾಡತಕ್ಕದ್ದು.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ 05-08-2024, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-08-2024 ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ 20-08-2024 ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಹುದ್ದೆಯ ವೇತನ ವಿವರ: ಉಪ ಪ್ರಧಾನ ವ್ಯವಸ್ಥಾಪಕರು 40,900-78,200. ಪರೀಕ್ಷಾರ್ಥ ಅವಧಿಯಲ್ಲಿ ಪಾವತಿಸುವ ಕ್ರೋಡೀಕೃತ ವೇತನ 38,000 ರೂ.ಗಳು.

ಸ್ಟಾಫ್ಟ್‌ವೇರ್ ಇಂಜಿನಿಯರ್ 37,900-70,850 ರೂ.ಗಳು. ಪರೀಕ್ಷಾರ್ಥ ಅವಧಿಯಲ್ಲಿ ಪಾವತಿಸುವ ಕ್ರೋಡೀಕೃತ ವೇತನ 37,000 ರೂ.ಗಳು ಎಂದು ಅಧಿಸೂಚನೆ ತಿಳಿಸಿದೆ.

ವ್ಯವಸ್ಥಾಪಕರು (ಕಾನೂನು ವಿಭಾಗ, 1 ಹುದ್ದೆ). ವೇತನ 30,350-58,250 ರೂ.ಗಳು. ಪರೀಕ್ಷಾರ್ಥ ಅವಧಿಯಲ್ಲಿ ಪಾವತಿಸುವ ಕ್ರೋಡೀಕೃತ ವೇತನ 30,000 ರೂ.ಗಳು.

ಹಿರಿಯ ಸಹಾಯಕರು 27,650-52,650 ರೂ.ಗಳು. ಪರೀಕ್ಷಾರ್ಥ ಅವಧಿಯಲ್ಲಿ ಪಾವತಿಸುವ ಕ್ರೋಡೀಕೃತ ವೇತನ 27,000 ರೂ.ಗಳು ಎಂದು ತಿಳಿಸಿದೆ.

ಕಿರಿಯ ಸಹಾಯಕರು 21,400-42,000 ರೂ.ಗಳು. ಪರೀಕ್ಷಾರ್ಥ ಅವಧಿಯಲ್ಲಿ ಪಾವತಿಸುವ ಕ್ರೋಡೀಕೃತ ವೇತನ 21,000 ರೂ.ಗಳು.

ವಾಹನ ಚಾಲಕ ಹುದ್ದೆಗೆ ವೇತನ 19,950-37,900. ಪರೀಕ್ಷಾರ್ಥ ಅವಧಿಯಲ್ಲಿ ಪಾವತಿಸುವ ಕ್ರೋಡೀಕೃತ ವೇತನ 18,000 ರೂ.ಗಳು.

* ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರ ಮಾತ್ರವೇ ಸಲ್ಲಿಸತಕ್ಕದ್ದು ನೀಡಿರುವ ಸೂಚನೆಗಳನ್ವಯ ಭರ್ತಿ ಮಾಡತಕ್ಕದ್ದು. ಅರ್ಜಿಯನ್ನು ಅಪೂರ್ಣವಾಗಿ ಹಾಗೂ ಸೂಕ್ತವಲ್ಲದ/ ಅಸ್ಪಷ್ಟ ದಾಖಲೆಗಳೊಂದಿಗೆ ಅಥವಾ ತಪ್ಪು/ ಅಪೂರ್ಣ ಮಾಹಿತಿಗಳೊಂದಿಗೆ ಸಲ್ಲಿಸಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

* ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತ್ತು ಇತರೆ ಸಹಕಾರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು.

* ಅಭ್ಯರ್ಥಿಯು ಸಂಬಂಧಪಟ್ಟ ವಿದ್ಯಾರ್ಹತೆಯ ಎಲ್ಲಾ ಅಂಕಪಟ್ಟಿ, ವಿಶ್ವವಿದ್ಯಾನಿಲಯಗಳು ಅಭ್ಯರ್ಥಿಗಳಿಗೆ ಪ್ರದಾನ ಮಾಡುವ ಪದವಿ ಕುರಿತ ಘಟಿಕೋತ್ಸವ ಪ್ರಮಾಣ ಪತ್ರವನ್ನು ಮತ್ತು ಇತರೆ ಎಲ್ಲಾ ದಾಖಲಾತಿಗಳ ಮೂಲ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡತಕ್ಕದ್ದು, ಅಪ್‌ಲೋಡ್ ಮಾಡುವಾಗ ಒಂದೊಂದು ವಿದ್ಯಾರ್ಹತೆ/ ಕೋರ್ಸ್‌ನ ಎಲ್ಲಾ ಅಂಕಪಟ್ಟಿಗಳನ್ನು ಒಂದು ಫೈಲ್ ಆಗಿ ಅಪ್‌ಲೋಡ್ ಮಾಡತಕ್ಕದ್ದು. (ಎಸ್‌.ಎಸ್.ಎಲ್.ಸಿ, ಪಿ.ಯು.ಸಿ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ಆಯಾ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡತಕ್ಕದ್ದು) ಮೂಲ ದಾಖಲಾತಿಗಳನ್ನು ನಂತರದಲ್ಲಿ ಸಂಘವು ಕೇಳಿದಾಗ ಅಥವಾ ಮೌಖಿಕ ಸಂದರ್ಶನದ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

* ಕಂಪ್ಯೂಟರ್ ವಿದ್ಯಾಭ್ಯಾಸ/ ಆಪರೇಶನ್ಸ್/ ಅಪ್ಲಿಕೇಷನ್ಸ್ ಕುರಿತು ಮಾನ್ಯತೆ ಪಡೆದ ಸಂಸ್ಥೆಯಿಂದ ಪರೀಕ್ಷೆ ತೇರ್ಗಡೆಯಾದ ಬಗ್ಗೆ ಪಡೆದಿರುವ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡತಕ್ಕದ್ದು.

* ವಾಹನ ಚಾಲಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಅಂಗ ವೈಕಲ್ಯ ಮತ್ತು ದೈಹಿಕ ನ್ಯೂನತೆ ಹೊಂದಿರದ ಕುರಿತು ಸರ್ಕಾರದ ಅಸಿಸ್ಟಂಟ್ ಸರ್ಜನ್ ಹುದ್ದೆಗಿಂತ ಕಡಿಮೆ ಇಲ್ಲದ ದರ್ಜೆಯ ವೈದ್ಯರಿಂದ ಪ್ರಮಾಣ ಪತ್ರವನ್ನು ಪಡೆದು ಹಾಜರುಪಡಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+