ಕೆಎಸ್‌ಟಿಡಿಸಿ ನೇಮಕಾತಿ; 76 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಿ
ಬೆಂಗಳೂರು, ಜನವರಿ 24 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕರ್ನಾಟಕದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸ್ತಕರು ಅರ್ಜಿಗಳನ್ನು ಸಲ್ಲಿಸಲು 3/2/2020 ಕೊನೆಯ ದಿನವಾಗಿದೆ.
ಒಟ್ಟು 76 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ ಸ್ಪೀಡ್/ರಿಜಿಸ್ಟರ್ ಪೋಸ್ಟ್/ಕೋರಿಯರ್ ಅಥವ ನೇರವಾಗಿ ಸಲ್ಲಿಕೆ ಮಾಡಬಹುದಾಗಿದೆ.
ನಿಗಮ ಯಾವುದೇ ಕಾರಣ ನೀಡದೆ ಅರ್ಜಿಯನ್ನು ಸ್ವೀಕರಿಸಲು ಅಥವ ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಕೆಎಸ್‌ಟಿಡಿಸಿಯ ಕರ್ನಾಟಕದ ಯಾವುದೇ ಘಟಕದಲ್ಲಿ ಕರ್ತವ್ಯ ನಿರ್ವಹಣೆ ಮಾಡಲು ಸಿದ್ಧರಿರಬೇಕು.
ಅಭ್ಯರ್ಥಿಗಳು ದಾಖಲಾತಿಗಳನ್ನು ಒಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ/ಪೋಸ್ಟ್ ಕವರ್‌ನ ಮೇಲೆ ನಮೂದಿಸಬೇಕು ತಪ್ಪಿದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಯಾವ-ಯಾವ ಹುದ್ದೆಗಳು
ವ್ಯವಸ್ಥಾಪಕರು (ಹೋಟೆಲ್) 4, ಸಹಾಯಕ ವ್ಯವಸ್ಥಾಪಕರು (ಹೋಟೆಲ್) 4, ಸ್ವಾಗತಗಾರರು 4, ದ್ವಿತೀಯ ದರ್ಜೆ ಸಹಾಯಕರು/ಬಿಲ್/ಕ್ಲರ್ಕ್/ಕ್ಯಾಷಿಯರ್ 7, ಹೌಸ್ ಕೀಪಿಂಗ್ ಸೂಪರ್ ವೈಸರ್ 4, ಉಗ್ರಾಣಿಕರು 4, ಅಡುಗೆಯವರು 6, ಸಹಾಯಕ ಅಡುಗೆಯವರು 6, ಅಡುಗೆ ಸಹಾಯಕರು 10, ಸಾಮಾನ್ಯ ಉಪಯೋಗಿ ಕೆಲಸಗಾರರು (ರೂಂ ಬಾಯ್/ಮಾಣಿ/ ಸ್ವೀಪರ್/ಕ್ಲೀನರ್/ ಗಾರ್ಡನರ್) 28 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ, ವೇತನದ ವಿವರ
ಎಲ್ಲಾ ಹುದ್ದೆಗಳ ವಿದ್ಯಾರ್ಹತೆ ಮತ್ತು ವೇತನದ ವಿವರಗಳನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಅರ್ಜಿಗಳನ್ನು ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಂಚೆ, ಕೋರಿಯರ್ ಅಥವ ಖುದ್ದಾಗಿ ಸಲ್ಲಿಸಬಹುದಾಗಿದೆ. ವೆಬ್ ಸೈಟ್ ವಿಳಾಸ kstdc.co/notifications/

ಅರ್ಜಿ ಸಲ್ಲಿಸಲು ವಿಳಾಸ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು. ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಲು ವಿಳಾಸ ಕೆಳಗಿನಂತಿದೆ.
ವ್ಯವಸ್ಥಾಪಕರು (ಆಡಳಿತ)
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿ.,
ಕಾರ್ಯನಿರ್ವಾಹಕ ಕಛೇರಿ,
ನೆಲಮಹಡಿ, ಯಶವಂತಪುರ ಟಿಟಿಎಂಸಿ,
ಬಿ.ಎಂ.ಟಿ.ಸಿ ಬಸ್ ನಿಲ್ದಾಣ,
ಯಶವಂತಪುರ ವೃತ್ತ,
ಬೆಂಗಳೂರು-560 022

ಅಭ್ಯರ್ಥಿಗಳಿಗೆ ಸೂಚನೆ
ಅಭ್ಯರ್ಥಿಗಳು ದಾಖಲಾತಿಗಳನ್ನೊಳಗೊಂಡ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಸ್ಪೀಡ್ ಪೋಸ್ಟ್/ರಿಜಿಸ್ಟರ್ ಪೋಸ್ಟ್/ ಕೋರಿಯರ್ ಅಥವಾ ನೇರವಾಗಿ ಬಂದು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಪದನಾಮವನ್ನು ಲಕೋಟೆ/ಪೋಸ್ಟ್ ಕವರ್ ಮೇಲೆ
ನಮೂದಿಸ ತಕ್ಕದ್ದು, ತಪ್ಪಿದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ದಿನಾಂಕ 3.2.2020ರ ನಂತರದಲ್ಲಿ ಸ್ವೀಕೃತಗೊಂಡ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ನಿಗಮವು ಯಾವುದೇ ಕಾರಣವನ್ನು ನೀಡದೆ ಅರ್ಜಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತದೆ. ನಿಗಮವು ನೀಡಿರುವ ನಮೂನೆಯಲ್ಲದೇ, ಇತರೆ ಯಾವುದೇ ನಮೂನೆಯಲ್ಲಿ ಸ್ವವಿವರವನ್ನು ಸಲ್ಲಿಸಿದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications