KSOU Mysuru Jobs 2023: ಬೋಧಕೇತರ ಹುದ್ದೆಗಳು ಖಾಲಿ, ವೇತನ, ವಿವರ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 03: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು (KSOU) ತನ್ನಲ್ಲಿರುವ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಆಸಕ್ತರು ಕೂಡಲೇ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು (KSOU) ಒಟ್ಟು 32 ಬೋಧಕೇತರ ಹುದ್ದೆಗಳು ಖಾಲಿ ಇವೆ. ಆಸಕ್ತರು ಸೆಪ್ಟೆಂಬರ್ 30 ರೊಳಗೆ ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ. ಅಭ್ಯರ್ಥಿಗಳು ಕೂಡಲೇ ಆಸಕ್ತರು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿದೆ.

ನೇಮಕಾತಿ ಪೂರ್ಣ ವಿವರ
ಸಂಸ್ಥೆ- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು (KSOU)
ಹುದ್ದೆ- ಬೋಧಕೇತರ ಹುದ್ದೆ
ಖಾಲಿ ಹುದ್ದೆ- 32
ವೇತನ ಮಾಸಿಕ - ರೂ.30,350ನಿಂದ 58,250 ರೂ.
ಉದ್ಯೋಗದ ಸ್ಥಳ- ಕರ್ನಾಟಕ
ಖಾಲಿ ಹುದ್ದೆಗಳ ವಿವರ
ಟೈಪಿಸ್ಟ್ & ಅಸಿಸ್ಟೆಂಟ್- 1
ವೆಹಿಕಲ್ ಡ್ರೈವರ್- 1
ಎಲೆಕ್ಟ್ರಿಷಿಯನ್-1
ಪ್ರಥಮ ದರ್ಜೆ ಸಹಾಯಕ (FDA)- 4
ಡೇಟಾ ಎಂಟ್ರಿ ಆಪರೇಟರ್ (DEO)- 5
ದ್ವಿತೀಯ ದರ್ಜೆ ಸಹಾಯಕ (SDA)- 8
ಪ್ಲಂಬರ್- 1
ಅಟೆಂಡೆಂಟ್- 2
ಹೆಲ್ಪರ್-1
ಪ್ರಥಮ ದರ್ಜೆ ಸಹಾಯಕ (FDA)- 4
ಡೇಟಾ ಎಂಟ್ರಿ ಆಪರೇಟರ್ (DEO)- 5
ದ್ವಿತೀಯ ದರ್ಜೆ ಸಹಾಯಕ (SDA)- 8
ಶೈಕ್ಷಣಿಕ ಅರ್ಹತೆ ಏನಿರಬೇಕು
ಪ್ರಥಮ ದರ್ಜೆ ಸಹಾಯಕ ಹುದ್ದೆಗೆ- ಪದವಿ ಪೂರ್ಣಗೊಳಿಸಿರಬೇಕು. ಡೇಟಾ ಎಂಟ್ರಿ ಆಪರೇಟರ್- ಪಿಯುಸಿ, ಪದವಿ, ದ್ವಿತೀಯ ದರ್ಜೆ ಸಹಾಯಕ (SDA)- ಪಿಯುಸಿ, ಪದವಿ, ಟೈಪಿಸ್ಟ್ ಮತ್ತು ಅಸಿಸ್ಟೆಂಟ್- ಪಿಯುಸಿ, ಪದವಿ, ವೆಹಿಕಲ್ ಡ್ರೈವರ್- 10ನೇ ತರಗತಿ, ಎಲೆಕ್ಟ್ರಿಷಿಯನ್- 10ನೇ ತರಗತಿ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ, ಐಟಿಐ, ಪ್ಲಂಬರ್- 7ನೇ ತರಗತಿ, ಎಸ್‌ಎಸ್‌ಎಲ್‌ಸಿ, ಅಟೆಂಡೆಂಟ್- ಎಸ್‌ಎಸ್‌ಎಲ್‌ಸಿ, ಗ್ಯಾಂಗ್ಮೆನ್-7ನೇ ತರಗತಿ, ಎಸ್‌ಎಸ್‌ಎಲ್‌ಸಿ, ಸರ್ವೆಂಟ್, ಸ್ವೀಪರ್ ಮತ್ತು ಹೆಲ್ಪರ್ ಹುದ್ದೆಗಳಿಗೆ ಏಳನೇ ತರಗತಿ ಮುಗಿಸಿರಬೇಕು ಎಂದು ತಿಳಿಸಿದೆ.
ವಯೋಮಿತಿ ಮತ್ತು ಸಡಿಲಿಕೆ
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಎಸ್‌ಸಿ ಎಸ್‌ಟಿ ಪ್ರವರ್ಗ 1, ಅಭ್ಯರ್ಥಿಗಳು- 5 ವರ್ಷ, ಹಿಂದುಳಿದ ವರ್ಗಗಳು ಅಭ್ಯರ್ಥಿಗಳು- 3 ವರ್ಷವನ್ನು ವಯೋಮಿತಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ನೇಮಕಾತಿ ಅಧಿಸೂಚನೆ ತಿಳಿಸಿದೆ.

ಅರ್ಜಿ ಶುಲ್ಕ
SC/ST/ ಪ್ರವರ್ಗ-1 ಅಭ್ಯರ್ಥಿಗಳು- 500 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 1000 ರೂ.
ಪಾವತಿಸುವ ಬಗೆ- ಆನ್ಲೈನ್
ಅನುಭವ- ಉದ್ಯೋಗ ಸ್ಥಳ
ವೆಹಿಕಲ್ ಡ್ರೈವರ್ ಹುದ್ದೆಗೆ ಕನಿಷ್ಠ 3 ವರ್ಷ ಅನುಭವ ಹೊಂದಿರಬೇಕು ಮತ್ತು ಪ್ಲಂಬರ್- ಕನಿಷ್ಠ 2 ವರ್ಷ ಅನುಭವ ಇರಬೇಕು. ಆಯ್ಕೆ ಆಗುವವರಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಈ ವಿವಿಧ ಹುದ್ದೆಗಳಿಗೆ ಪ್ರತ್ಯೇಕ ವೇತನ ನಿಯಮ ಇದ್ದು, ಕನಿಷ್ಠ 17,000 ರೂ. ದಿಂದ ಗರಿಷ್ಠ 58,250 ರೂ. ವೇತನ ಇರಲಿದೆ ಎಂದು ತಿಳಿಸಿದೆ.
ಸೂಕ್ತ ದಾಖಲೆ ಸಹಿತ ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು '' ಕುಲಪತಿಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತಗಂಗೋತ್ರಿ, ಮೈಸೂರು - 570006, ಕರ್ನಾಟಕ'' ಈ ವಿಳಾಸಕ್ಕೆ ಸೆಪ್ಟೆಂಬರ್ 30ರೊಳಗೆ ಸಲ್ಲಿಸಬೇಕು ಎಂದು ವಿಶ್ವವಿದ್ಯಾಲಯ ತಿಳಿಸಿದೆ.












Click it and Unblock the Notifications