ಕೆಪಿಎಸ್‌ಸಿ 3376 ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿ
ಬೆಂಗಳೂರು,ಜುಲೈ 02: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಗ್ರೂಪ್ ಬಿ ಹಾಗೂ ಸಿ ವೃಂದದ ಬೋಧಕ/ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ ಮೂಲಕ ಜುಲೈ 24 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜುಲೈ 25 ಶುಲ್ಕ ಪಾವತಿಸಲು ಕೊನೆ ದಿನವಾಗಿದೆ.

ಅರ್ಜಿ ಶುಲ್ಕ
* ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 300 ರು.
* ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಅಭ್ಯರ್ಥಿಗಳಿಗೆ 150 ರು.
* ಪ.ಜಾ/ಪ.ಪಂ/ಪ್ರ-1/ಅಂಗವಿಕಲ/ಮಾ.ಸೈಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ
ಸದರಿ ಹುದ್ದೆಗಳ ನೇಮಕಾತಿಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ ಲೈನ್-ಒಎಂಆರ್ ಮಾದರಿ (Offline-OMR type) ಅಥವಾ ಗಣಕ ಯಂತ್ರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ (Computer based recruitment test-CBRT) ಮುಖಾಂತರ ನಡೆಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಆಯೋಗದ www.kpsc.kar.nic.in ವೆಬ್ ಸೈಟ್ ನಲ್ಲಿರುವ ಅಧಿಸೂಚನೆ ಗಮನಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications