KPSC Jobs: 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ಭರ್ತಿಗೆ ಅಧಿಸೂಚನೆ, ಮಾಹಿತಿ

ಬೆಂಗಳೂರು, ಫೆಬ್ರವರಿ.26: ಕರ್ನಾಟಕದ ಆರ್ಥಿಕ ಇಲಾಖೆ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಿದ್ದು, ಅಧಿಸೂಚನೆ ಹೊರಡಿಸಿದೆ. 384 ಹುದ್ದೆಗಳಲ್ಲಿ ಯಾವ ಇಲಾಖೆಗೆ ಎಷ್ಟು ಎಂದು ಸಹ ಹಂಚಿಕೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ಗೆಜೆಟೆಡ್ ಪ್ರೊಬೇಷನರ್ 2023-24ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ಅಧಿಸೂಚನೆ ಹೊರಡಿಸಿದೆ.

KPSC Jobs: 384 Gazetted Probationers Recruitment Notification

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ?

ಗ್ರೂಪ್ 'ಎ'

* ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ- ಒಟ್ಟು 40 ಹುದ್ದೆಗಳು. ಅದರಲ್ಲಿ 37 ಹುದ್ದೆ ಆರ್‌.ಸಿ.ಪಿ ವೃಂದಕ್ಕೆ, 03 ಸ್ಥಾನ ಹೈದರಾಬಾದ್ ವೃಂದಕ್ಕೆ.

*ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು. ವಾಣಿಜ್ಯ ತೆರಿಗೆ ಇಲಾಖೆ- ಒಟ್ಟು 41 ಹುದ್ದೆ, ಆರ್‌.ಸಿ.ಪಿ ವೃಂದಕ್ಕೆ 30, 11 ಸ್ಥಾನ ಹೈದರಾಬಾದ್ ವೃಂದಕ್ಕೆ.

* ಸಹಾಯಕ ನಿರ್ದೇಶಕರು. ಖಜಾನೆ ಇಲಾಖೆ- ಒಟ್ಟು 2 ಹುದ್ದೆ. ಆರ್‌.ಸಿ.ಪಿ ವೃಂದಕ್ಕೆ ಒಂದು, ಹೈದರಾಬಾದ್ ವೃಂದಕ್ಕೆ ಒಂದು ಸ್ಥಾನ.

* ಕಾರ್ಯ ನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ- ಒಟ್ಟು 40 ಹುದ್ದೆಗಳು. ಆರ್‌.ಸಿ.ಪಿ ವೃಂದಕ್ಕೆ 32 ಹುದ್ದೆ, 8 ಸಹುದ್ದೆ ಹೈದರಾಬಾದ್ ವೃಂದಕ್ಕೆ.

* ಡಿವೈಎಸ್‌ಪಿ. ಒಳಾಡಳಿತ ಇಲಾಖೆ- ಒಟ್ಟು 9 ಹುದ್ದೆಗಳಿದ್ದು, ಆರ್‌.ಸಿ.ಪಿ ವೃಂದಕ್ಕೆ 7 ಮತ್ತು ಹೈದರಾಬಾದ್ ವೃಂದಕ್ಕೆ 2 ಸ್ಥಾನ ನೀಡಲಾಗಿದೆ.

* ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ- ಆರ್‌.ಸಿ.ಪಿ ವೃಂದಕ್ಕೆ 14, ಹೈದರಾಬಾದ್ ವೃಂದಕ್ಕೆ 6 ಹುದ್ದೆಗಳಿದ್ದು ಒಟ್ಟು 20.

* ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ ಪ್ರಾಂಶುಪಾಲರು (ಪಿಇಟಿಸಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- ಆರ್‌.ಸಿ.ಪಿ ವೃಂದಕ್ಕೆ 5, ಹೈದರಾಬಾದ್ ವೃಂದಕ್ಕೆ 2 ಒಟ್ಟು 7 ಹುದ್ದೆಗಳು.

ಇನ್ನು, ಗ್ರೂಪ್ 'ಬಿ'ನಲ್ಲಿ 225 ಹುದ್ದೆಗಳಿದ್ದು ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಸಹಕಾರ ಇಲಾಖೆ, ಆರ್ಥಿಕ ಇಲಾಖೆ, ಲೆಕ್ಕ ಪರಿಶೋಧನಾ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರ್ಥಿಕ ಇಲಖೆ (ಖಜಾನೆ), ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಖಾಲಿಯಿದೆ.

KPSC Jobs: 384 Gazetted Probationers Recruitment Notification

ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 04-03-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-04-2024

ಪೂರ್ವಭಾವಿ ಪರೀಕ್ಷಾ ದಿನಾಂಕ (ತಾತ್ಕಾಲಿಕ): 05-05-2024

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆಗಳು ಎದುರಾದಲ್ಲಿ 080-30574957/30574901 ಈ ಹೆಲ್ಸ್‌ಲೈನ್ ನಂಬರ್ ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಅರ್ಜಿ ಶುಲ್ಕ:

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: 600

ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ: 300

ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

ವಯೋಮಿತಿ:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು:

1. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 38 ವರ್ಷಗಳು

2. ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 41 ವರ್ಷಗಳು

3. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 43 ವರ್ಷಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+