ಕೆಪಿಎಸ್‌ಸಿ ನೇಮಕಾತಿ : ಹುದ್ದೆ, ಅರ್ಹತೆಗಳ ಸಂಪೂರ್ಣ ವಿವರ

ಬೆಂಗಳೂರು, ಜುಲೈ 06 : ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿನ ವಿವಿಧ ಇಲಾಖೆಗಳಲ್ಲಿರುವ ಸಹಾಯಕ/ಪ್ರಥಮ ದರ್ಜೆ ಸಹಾಯಕ, ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 2,464 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 1, 2015 ಕೊನೆಯ ದಿನಾಂಕವಾಗಿದೆ.

ಸಹಾಯಕ/ಪ್ರಥಮ ದರ್ಜೆ ಸಹಾಯಕ, ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಪ್ರವೇಶ ಪರೀಕ್ಷೆಗಳು 2015ರ ಅಕ್ಟೋಬರ್‌ನಲ್ಲಿ ನಡೆಯಲಿವೆ. ಸಾಮಾನ್ಯ ವರ್ಗ/ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 300 ರೂ., ಪ.ಜಾ/ಪ.ಪಂ/ಪ್ರವರ್ಗ 1/ಅಂಗವಿಕಲರು/ಮಾಜಿ ಸೈನಿಕರಿಗೆ 25 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. [ಅರ್ಜಿಗಳನ್ನು ಸಲ್ಲಿಸಲು ವಿಳಾಸ]

ಜುಲೈ 3ರಿಂದ ಅರ್ಜಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವೆಬ್‌ಸೈಟ್‌ಗೆ ಭೇಟಿ ನೀಡಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 1 ರಾತ್ರಿ 11.45. ಅರ್ಜಿ ಶುಲ್ಕಗಳನ್ನು ಪಾವತಿ ಮಾಡಲು ಕೊನೆಯ ದಿನಾಂಕ ಆಗಸ್ಟ್ 3, 2015. [ನೇಮಕಾತಿ ಆದೇಶ]

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷ. ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ/ಪ.ಪಂ/ಪ್ರ-1ರ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಹುದ್ದೆಗಳ ವಿವರಗಳು ಇಲ್ಲಿವೆ.....

ಸಹಾಯಕ/ಪ್ರಥಮ ದರ್ಜೆ ಸಹಾಯಕ ಸೇರಿ 1,162 ಹುದ್ದೆಗಳು

ಸಹಾಯಕ/ಪ್ರಥಮ ದರ್ಜೆ ಸಹಾಯಕ ಸೇರಿ 1,162 ಹುದ್ದೆಗಳು

ಇವುಗಳಲ್ಲಿ ಲೋಕಾಯುಕ್ತ 21, ಅರಣ್ಯ ಇಲಾಖೆ 162, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 52, ಹಣಕಾಸು ಮತ್ತು ಸಾಂಖ್ಯಿಕ ಇಲಾಖೆ 5, ತೋಟಗಾರಿಕಾ ಇಲಾಖೆ 40, ಅಲ್ಪ ಸಂಖ್ಯಾತರ ಇಲಾಖೆ 34, ಅಬಕಾರಿ ಇಲಾಖೆ 4, ಆಯುಷ್ ಇಲಾಖೆ 4, ಸಚಿವಾಲಯದಲ್ಲಿ 75 ಸೇರಿದಂತೆ 1,162 ಹುದ್ದೆಗಳು ಖಾಲಿ ಇವೆ.

ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ 1,237

ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ 1,237

ಇವುಗಳಲ್ಲಿ ಸಚಿವಾಲಯದಲ್ಲಿ 176, ಲೋಕಾಯುಕ್ತದಲ್ಲಿ 10, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 125, ತೋಟಗಾರಿಕಾ ಇಲಾಖೆಯಲ್ಲಿ 16, ಕಾರಾಗೃಹ ಇಲಾಖೆಯ 2 ಸೇರಿ ಒಟ್ಟು 1,237 ಹುದ್ದೆಗಳು ಖಾಲಿ ಇವೆ.

65 ಬ್ಯಾಕ್ ಲಾಕ್ ಹುದ್ದೆಗಳು

65 ಬ್ಯಾಕ್ ಲಾಕ್ ಹುದ್ದೆಗಳು

ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ 65 ಬ್ಯಾಕ್‌ಲಾಗ್ ಹುದ್ದೆಗಳು ಖಾಲಿಇವೆ.

ವಿದ್ಯಾರ್ಹತೆಗಳು ಹೀಗಿದೆ

ವಿದ್ಯಾರ್ಹತೆಗಳು ಹೀಗಿದೆ

* ಸಹಾಯಕ/ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಯಾವುದೇ ಪದವಿ ಅಂಗೀಕೃತ ವಿಶ್ವವಿದ್ಯಾಲಯದಿಂದ.
* ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಪಿಯುಸಿ

ನೆನಪಿಡಬೇಕಾದ ದಿನಾಂಕಗಳು

ನೆನಪಿಡಬೇಕಾದ ದಿನಾಂಕಗಳು

* 2015ರ ಜುಲೈ 3ರಿಂದ ಅರ್ಜಿ ಸಲ್ಲಿಕೆ ಆರಂಭ
* ಅರ್ಜಿ ಸಲ್ಲಿಸಲು ಕೊನೆಯ ದಿನ - ಆಗಸ್ಟ್ 1, 2015 ರಾತ್ರಿ 11.45.
* ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ - ಆಗಸ್ಟ್ 3, 2015.
* ಪ್ರವೇಶ ಪರೀಕ್ಷೆಗಳು 2015ರ ಅಕ್ಟೋಬರ್‌ನಲ್ಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+