ಕೆಪಿಸಿಎಲ್ ನಲ್ಲಿ ಡ್ರೈವರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಸೆಪ್ಟೆಂಬರ್ 20: ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ನಲ್ಲಿ ಖಾಲಿ ಇರುವ ಒಟ್ಟು 29 ಚಾಲಕ (ಡ್ರೈವರ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
28 ಡ್ರೈವರ್ ಹಾಗೂ 01 ಅಸಿಸ್ಟೆಂಟ್ ಡ್ರೈವರ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸ್ತಕ ಹಾಗೂ ಆರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಅಕ್ಟೋಬರ್ 21, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

1. ಹುದ್ದೆ: ಚಾಲಕ (28)
* ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು. ಹಾಗೂ ಲೈಸನ್ಸ್ ಹೊಂದಿರಬೇಕು ಜತೆಗೆ ಭಾರಿ ವಾಹನ ಚಾಲನೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
* ವೇತನ ಶ್ರೇಣಿ: 9540 ರಿಂದ 27455 ರು. ತಿಂಗಳಿಗೆ. * ವಯೋಮಿತಿ: ಅಕ್ಟೋಬರ್ 21, 2017ಕ್ಕೆ ಅನ್ವಯವಾಗುವಂತೆ 18ರಿಂದ 35 ವರ್ಷದೊಳಗಿರಬೇಕು.
2. ಸಹಾಯ ಚಾಲಕ ಹುದ್ದೆ(1)
* ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿರಬೇಕು. ಹಾಗೂ ಲೈಸನ್ಸ್ ಹೊಂದಿರಬೇಕು ಜತೆಗೆ ಭಾರಿ ವಾಹನ ಚಾಲನೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
* ವೇತನ ಶ್ರೇಣಿ: 8390 ರಿಂದ 22845 ರು. ತಿಂಗಳಿಗೆ.
* ವಯೋಮಿತಿ: ಅಕ್ಟೋಬರ್ 21, 2017ಕ್ಕೆ ಅನ್ವಯವಾಗುವಂತೆ 18ರಿಂದ 35 ವರ್ಷದೊಳಗಿರಬೇಕು.
* ಆಯ್ಕೆ ವಿಧಾನ: ಮೇಲಿನ ಎರಡು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications