ಕೆಕೆಆರ್‌ಟಿಸಿ ಉದ್ಯೋಗ ಮಾಹಿತಿ; 133 ಹುದ್ದೆ, ವಿವರಗಳು

ರಾಯಚೂರು, ಡಿಸೆಂಬರ್ 29; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ರಾಯಚೂರು ವಿಭಾಗದಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 11/1/2024ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಆಟೋ ಮೆಕಾನಿಕ್, ಆಟೋ ವಿದ್ಯುತ್, ಆಟೋ ವೆಲ್ಡರ್, ಆಟೋ ಬಾಡಿ ಫಿಟರ್, ಆಟೋ ಪೆಂಟರ್, ಆಟೋ ಮೆಷನಿಷ್ಟ್‌ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಆಯಾ ವೃತ್ತಿಗೆ ನಿಗದಿ ಪಡಿಸಿದ ವಿದ್ಯಾರ್ಹತೆ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಬಹುದು.

KKRTC Raichur Depot Apprenticeship Training Walk In Interview On January 11

ಆಸಕ್ತರು ಆನ್‌ಲೈನ್ ಮೂಲಕ ರಿಜಿಸ್ಟರ್ ಮಾಡಿದ ಅರ್ಜಿ ಹಾಗೂ ಮೂಲ ದಾಖಲಾತಿ, ಒಂದು ಸೆಟ್ ಝೆರಾಕ್ಸ್ ಪ್ರತಿಯೊಂದಿಗೆ 11/1/2024ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ನೇರ ಸಂದರ್ಶನ ಕ. ಕ. ರ. ಸಾ. ನಿಗಮ, ವಿಭಾಗೀಯ ಕಛೇರಿ, ರಾಯಚೂರು ವಿಭಾಗ, ರಾಯಚೂರು ಜಿಲ್ಲೆ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಈ ಎಲ್ಲಾ ಹುದ್ದೆಗಳಿಗೆ 1 ವರ್ಷದ ತರಬೇತಿ ನೀಡಲಾಗುತ್ತದೆ.

ಹುದ್ದೆಗಳ ಮಾಹಿತಿ; ಆಟೋ ಮೆಕಾನಿಕ್ 46, ಆಟೋ ವಿದ್ಯುತ್ 28, ಆಟೋ ವೆಲ್ಡರ್‌ 20, ಆಟೋ ಬಾಡಿ ಫೀಟ್ಟರ್ 20, ಆಟೋ ಪೇಂಟರ್ 10, ಆಟೋ ಮೆಷಿನಸ್ಟ್ 9 ಒಟ್ಟು ಸೇರಿ 133 ಹುದ್ದೆ ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳಿಗೆ 31/12/2023ಕ್ಕೆ ಅನ್ವಯವಾಗುವಂತೆ 18 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ, ಗರಿಷ್ಠ ವಯೋಮಿತಿ 40 ವರ್ಷಗಳು. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 23, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 9 ಹುದ್ದೆ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು WWW.apprenticeshipindia.org ನ Home Page ನಲ್ಲಿ Registration Candidate Registration ನಲ್ಲಿ ವಿವರವನ್ನು ಕಡ್ಡಾಯವಾಗಿ ನಮೂದಿಸುವುದು. ನಂತರ ಇ-ಮೇಲ್ ನಲ್ಲಿ Activation ಮಾಡಿದ ನಂತರ Email user ID & Email pass ward- login pass ward ಆಗಿರುತ್ತದೆ. ಲಾಗಿನ್ ಆದ ನಂತರ Candidate dashboard ನಲ್ಲಿ ವಿವರಗಳನ್ನು ನಮೂದಿಸುವುದು. ಪೂರ್ಣ ವಿವರಗಳನ್ನು ನಮೂದಿಸಿ, ಸಂಬಂಧಿಸಿದ ದಾಖಲಾತಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಿರುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಶಿಶಿಕ್ಷುಗಳು ಆನ್‌ಲೈನ್ ನೋಂದಣಿಗೆ ಆಧಾರ್ ಕಾರ್ಡ್ ಹಾಗೂ ಎಸ್.ಎಸ್.ಎಲ್.ಸಿ ಅಂಕಪಟ್ಟಿ ವಿವರಗಳು (ಹೆಸರು, ಹುಟ್ಟಿದ ದಿನಾಂಕ, ಪೋಷಕರ ಹೆಸರು) ಒಂದಕ್ಕೊಂದು ತಾಳೆಯಾಗುವಂತಿರಬೇಕು ಇಲ್ಲವಾದಲ್ಲಿ ಆನ್‌ಲೈನ್ ನೋಂದಣಿಯಲ್ಲಿ ಆಡಚಣೆ ಉಂಟಾದರೆ ಸಂಸ್ಥೆ ಯಾವುದೇ ರೀತಿಯ ಹೊಣೆಗಾರಿಕೆ ಹೊಂದುವುದಿಲ್ಲ.

ಶಿಶಿಕ್ಷು ಕಾಯಿದೆ 1961 ರನ್ವಯ ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು (ಯಾವುದೇ ವಿಭಾಗದಲ್ಲಿ) ಅರ್ಜಿ ಸಲ್ಲಿಸಲು ಅರ್ಹರಲ್ಲ. ಒಂದು ವೇಳೆ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಪೋಲಿಸ್ ಮೊಕದ್ದಮೆ ದಾಖಸಲಾಗುವುದು. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಮುಗಿದ ನಂತರ ನಿಗಮದಲ್ಲಿ ಕೆಲಸ ಒದಗಿಸುವ ಬಗ್ಗೆ ಯಾವುದೇ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ.

ತರಬೇತಿ ಪಡೆಯಲು ಆಯ್ಕೆಯಾದವರು ಶಿಶಿಕ್ಷು ಕಾಯಿದೆ 1961 ರ ನಿಯಮಗಳು ಹಾಗೂ ತದನಂತರದ ತಿದ್ದುಪಡಿಗಳ ಷರತ್ತು ಹಾಗೂ ನಿಬಂಧನೆಗಳಿಗೆ ಒಳಪಡುತ್ತಾರೆ. ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಶಿಫಾರಸ್ಸು ಅಥವಾ ಒತ್ತಡಗಳಿಗೆ ಆಸ್ಪದ ಇರುವುದಿಲ್ಲ. ಆಯ್ಕೆ ಸಂಬಂಧ ಪ್ರಾಧಿಕಾರಸ್ಥರ/ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ ತೀರ್ಮಾನ. ಈ ಬಗ್ಗೆ ಪತ್ರ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.

ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಬರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಶಿಶಿಕ್ಷು ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ರಾಯಚೂರು ವಿಭಾಗದ ರಾಯಚೂರು ಘಟಕ-2, ರಾಯಚೂರು ಘಟಕ-3/ ಅಂಗಸ್ಥರು ಘಟಕ/ ಸಿಂಧನೂರು ಘಟಕ/ ಮಾನವಿ ಘಟಕ/ ದೇವದುರ್ಗ ಘಟಕ ಮಸ್ತಿ ಘಟಕ/ ವಿಭಾಗೀಯಾ ಕಾರ್ಯಾಗಾರಗಳಗೆ ನಿಯೋಜಿಸಿದ ಯಾವುದೇ ಸ್ಥಳದಲ್ಲಿ ತರಬೇತಿ ಪಡೆಯಲು ಸಿದ್ದರಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ಹೊಂದಿರುವುದು, ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಅಂಕ್ ಮಾಡಿಸಿರಬೇಕು, ಆಧಾರ್ ಕಾರ್ಡ್ ಸಂಖ್ಯೆಯನ್ನು ಖಾತೆಗೆ ಅಂಕ್ ಮಾಡಿರುವ ಬಗ್ಗೆ ಮಾಹಿತಿ ನೀಡುವುದು. ಹಾಗೂ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಿರುವ ಅರ್ಜಿಯ ಜೊತೆ ಅರ್ಜಿಯ ನಮೂನೆಯನ್ನು ಅಭ್ಯರ್ಥಿಗಳು ತಮ್ಮ ಸ್ವಂತ ಕೈ ಬರಹ ಅಥವಾ ಬೆರಳಚ್ಚುಗೊಳಿಸಿ ಭರ್ತಿ ಮಾಡಿ, ಸದರಿ ಅರ್ಜಿಯೊಂದಿಗೆ ಜನ್ಮ ದಿನಾಂಕ, ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಅಭ್ಯರ್ಥಿಗಳು ಜಾತಿ/ ಆದಾಯ ಪ್ರಮಾಣ ಪತ್ರಗಳ ನಕಲು ಪತ್ರಿಗಳನ್ನು ಹಾಗೂ ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+