KKRTC: ಕೆಕೆಆರ್‌ಟಿಸಿ ಅಪ್ರೆಂಟಿಸ್ ತರಬೇತಿ, ಅರ್ಜಿ ಹಾಕಲು ಅರ್ಹತೆಗಳು
ಬಳ್ಳಾರಿ, ಫೆಬ್ರವರಿ 16: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಳ್ಳಾರಿ ವಿಭಾಗ ಅಪ್ರೆಂಟಿಸ್ ತರಬೇತಿಗೆ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಂಡು ಕಛೇರಿಗೆ ಮಾರ್ಚ್ 5ರಂದು ಬೆಳಿಗ್ಗೆ 11ಗಂಟೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅರ್ಹರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗ ವತಿಯಿಂದ ಸಿರುಗುಪ್ಪ ಮತ್ತು ಸಂಡೂರು ಘಟಕಗಳಲ್ಲಿ ವಿವಿಧ ತಾಂತ್ರಿಕ ವೃತ್ತಿಗಳಿಗೆ ಶಿಶಿಕ್ಷು ತರಬೇತಿ ನೀಡಲು ಅರ್ಹ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.

ಆಸಕ್ತ ಅಭ್ಯರ್ಥಿಗಳು www.apprenticeship.gov.in/ www.ncvtmis.com ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ನಗರದ ಸಿರುಗುಪ್ಪ ರಸ್ತೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಗೆ ಮಾರ್ಚ್ 5ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಶಿಶಿಕ್ಷು ವೃತ್ತಿ ಸಂಖ್ಯೆ: ಆಟೋ ಎಲೆಕ್ಟ್ರಿಷಿಯನ್ 2, ಡಿಸೇಲ್ ಮೆಕಾನಿಕ್ 16, ಮೋಟರ್ ಮೆಕ್ಯಾನಿಕ್ ವೆಹಿಕಲ್ 2. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಆಧಾರ್ ಕಾರ್ಡ್, ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಟಿಐ ಮೂಲ ಅಂಕಪಟ್ಟಿ, ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ನಕಲು, ಇತ್ತೀಚಿನ ಮೂರು ಭಾವಚಿತ್ರ.
ಈ ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಅರ್ಹರಾಗಿರುವುದಿಲ್ಲ. ಸಂದರ್ಶನಕ್ಕೆ ಬರುವಾರ ನೋಂದಣಿ ಮಾಡಿಕೊಂಡ ದಾಖಲೆ ತರಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಗರದ ಸಿರುಗುಪ್ಪ ರಸ್ತೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಛೇರಿಗೆ ಭೇಟಿ ನೀಡಬಹುದು.
ತರಬೇತಿಗೆ ಅರ್ಜಿ ಹಾಕಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ದಿನಾಂಕ 20/02/2025 ರಿಂದ 21/03/2025 ರವರೆಗೆ 30 ದಿನಗಳು ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ.
ತರಬೇತಿಯಲ್ಲಿ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್, ಕೋಕೋನಟ್ ಕುಕಿಸ್, ಕೋಕೋನಟ್ ಬಿಸ್ಕತ್, ಮಸಾಲ ಬಿಸ್ಕತ್, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್, ಪೀನಟ್ ಕುಕಿಸ್, ವೆನಿಲಾ ಬಟನ್, ಬನಾನಾ ಕೇಕ್, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಆರೆಂಜ್ ಕೇಕ್, ಬ್ಲಾಕ್ ಫಾರೆಸ್ಟ್ ಕೇಕ್, ಸ್ವಿಸ್ ರೋಲ್, ಜೆಲ್ ಕೇಕ್, ಬಟರ್ ಐಸಿಂಗ್, ಮಸಾಲಾ ಡೋನಟ್, ಮಿಲ್ಕ್ ಬ್ರೆಡ್, ಬ್ರೌನ್ ಬ್ರೆಡ್, ಫಿಜ್ಜಾ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುತ್ತದೆ.
ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು 9449187763, 9686555897 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ತರಬೇತಿ ಶುಲ್ಕ ರೂ. 4500 ಆಗಿರುತ್ತದೆ.












Click it and Unblock the Notifications