402 PSI Recruitment: ಪಿಎಸ್‌ಐ ನೇಮಕಾತಿ ಅಂತಿಮ ಫಲಿತಾಂಶ ಪ್ರಕಟ, ಇಲ್ಲಿ ಪರಿಶೀಲಿಸಿ
ಬೆಂಗಳೂರು, ನವೆಂಬರ್ 15: ಕರ್ನಾಟಕದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳ ಅಂತಿಮ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಡುಗಡೆಗೊಳಿಸಿದೆ. ಅಭ್ಯರ್ಥಿಗಳು ಅಂತಿಮ ಅಂಕಗಳನ್ನು ನೀವು ಕೆಇಎ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಕೆಇಎ ತಾತ್ಕಾಲಿಕ ಅಂಕಪಟ್ಟಿ ಪ್ರಕಟಿಸಿ, ಆಕ್ಷೇಪಣೆಗೆ ಆಹ್ವಾನಿಸಿತ್ತು. ಅದೆಲ್ಲ ಪ್ರಕ್ರಿಯೆ ಮುಗಿದು ಇದೀಗ ಅಂತಿಕ ಅಂಕಪಟ್ಟಿಯನ್ನು ಕೆಇಎ ವೆಬ್‌ಸೈಟ್‌ನಲ್ಲಿ ಅಪ್ಲೊಡ್ ಮಾಡಿದೆ. ಅದನ್ನು ಸಂಬಂಧಪಟ್ಟ ಸಂಸ್ಥೆಗೆ ಕಳುಹಿಸಲಾಗುವುದು. ಅವರು ಆಯ್ಕೆ ಪಟ್ಟಿಯನ್ನು ಪ್ರಕಟಿಸಲಿದ್ದಾರೆ ಎಂದು ಕೆಇಎ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, 'ದಿನಾಂಕ 03.10.2024 ರಂದು ನಡೆದ ಪಿ.ಎಸ್.ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ಅಂಕ ಪಟ್ಟಿಯನ್ನು ದಿನಾಂಕ 06.11.2024 ರಂದು ಪ್ರಕಟಿಸಿದೆ. ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 09.11.2024 ರೊಳಗೆ ಮನವಿ ಸಲ್ಲಿಸುವಂತೆ ತಿಳಿಸಲಾಗಿತ್ತು.
ನಿಗದಿತದೊಳಗೆ ಪತ್ರಿಕೆ-1ಕ್ಕೆ 313 ಹಾಗೂ ಪತ್ರಿಕೆ-2 ಕ್ಕೆ 219 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಪತ್ರಿಕೆ-1 ರ 1ನೇ ಮೌಲ್ಯಮಾಪನದ ಅಂಕಗಳು, 2 ನೇ ದಿನಾಂಕದ ಮೌಲ್ಯಮಾಪನದ ಅಂಕಗಳು ಮತ್ತು 3 ನೇ ಮೌಲ್ಯಮಾಪನದ ಅಂಕಗಳು (1ನೇ ಮತ್ತು 2ನೇ ಮೌಲ್ಯಮಾಪನ ಮಾಡಲಾಗಿದೆ) 8 ಅಥವಾ 8 ಕ್ಕಿಂತ ಹೆಚ್ಚಿನ ಅಂಕಗಳು 8 ಅಥವಾ 8 ಕ್ಕಿಂತ ಹೆಚ್ಚಿನ ಅಂಕಗಳನ್ನು ವ್ಯತ್ಯಾಸವಿದ್ದ ಪತ್ರಿಕೆಗಳಲ್ಲಿ ಕೇವಲ 3 ನೇ ಮೌಲ್ಯಮಾಪನ ಮಾಡಲಾಗಿದೆ.

ಪ್ರಾಧಿಕಾರವು ಇದೆಲ್ಲವುಗಳನ್ನು ಮತ್ತೊಮ್ಮೆ ಪರಿಶೀಲಿಸಿದೆ (ಮರು ಏಣಿಕೆ). ಈ ವಿದ್ಯಾರ್ಥಿಗಳು ಪಡೆದಿರುವುದಾಗಿ ಬಿಡುಗಡೆಗೊಳಿಸಿ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದ್ದರಿಂದ ಅವರ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶವಿಲ್ಲ ಇಲ್ಲವೆಂದು ನಿರ್ಧರಿಸಲಾಗಿದೆ.
ಪತ್ರಿಕೆ -2ರ ಒಎಂಆರ್ ಉತ್ತರ ಪತ್ರಿಕೆಯು ಅಂತಿಮ ಕೀ ಉತ್ತರಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಪಡೆದಿರುವ ಪ್ರಕಟಿಸಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬಂದಿಲ್ಲ. ಹೀಗಾಗಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶ ಇಲ್ಲ ಎಂದು ಎಂದು ತೀರ್ಮಾನಿಸಲಾಯಿತು.
ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಯಾವಾಗ?
ಇನ್ನೂ ದಿನಾಂಕ 03.10.2024 ರಂದು ನಡೆದ ಪರೀಕ್ಷೆಯಲ್ಲಿ ಪತ್ರಿಕೆ-1 ಮತ್ತು ಪತ್ರಿಕೆ-2 ರಲ್ಲಿ ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸದರಿ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಸಂಬಂಧಪಟ್ಟ ಸಂಸ್ಥೆಗೆ ಹಸ್ತಾಂತರಿಸಲಿದ್ದೇವೆ. ಆದಷ್ಟು ಶೀಘ್ರವೇ ಈ 402 ಪಿಎಸ್‌ಐ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಅಧಿಕಾರಿಗಳು ಪ್ರಕಟಿಸಲಿದ್ದಾರೆ ಎಂದು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಶೀಲನೆ ಹೇಗೆ? ವಿಧಾನ ತಿಳಿಯಿರಿ
* ಅಭ್ಯರ್ಥಿಗಳು ಮೊದಲು ಕೆಇಎ ಅಧಿಕೃತ ವೆಬ್‌ಸೈಟ್‌ಗೆ https://cetonline.karnataka.gov.in/kea/ ಭೇಟಿ ನೀಡಿ
* ನಂತರ ಪರದೆ ಮೇಲೆ ಕಾಣುವ ನೇಮಕಾತಿ ವಿಭಾಗದ ಮೇಲೆ ಕ್ಲಿಕ್ ಮಾಡಿ
* ಬಳಿಕ 'ಪಿಎಸ್‌ಐ ನೇಮಕಾತಿ 2024' ಮೇಲೆ ಕ್ಲಿಕ್ ಮಾಡಬೇಕು.
* ಇದಾದ ಮೇಲೆ ಕಾಣುವ ಆದ್ದರಿಂದ 'ಪಿಎಸ್‌ಐ 2024 (402) ಫಲಿತಾಂಶದ ಲಿಂಕ್' ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿ ಕಾಣುವ ಜಾಗದಲ್ಲಿ ನೀವು ನಿಮ್ಮ ನೋಂದಣಿ ಸಂಖ್ಯೆ, ಜನ್ಮದಿನಾಂಕ ಹಾಕಿ ಸಬ್ಮಿಟ್ ಕೊಡಬೇಕು.
* ಬಳಿಕ ಪರದೆ ಮೇಲೆ ನಿಮ್ಮ ಅಂತಿಮ ಅಂಕಪಟ್ಟಿ ಕಾಣುತ್ತದೆ. ಅದನ್ನು ಪರಿಶೀಲಿಸಿಕೊಳ್ಳಬಹುದು.












Click it and Unblock the Notifications