ಕರ್ನಾಟಕ ಪೊಲೀಸ್ ನೇಮಕಾತಿ; ನ.25ರ ತನಕ ಅರ್ಜಿ ಹಾಕಿ
ಬೆಂಗಳೂರು, ಅಕ್ಟೋಬರ್ 29 : ಕರ್ನಾಟಕ ಪೊಲೀಸ್ ಇಲಾಖೆಯು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 25/11/2020ರ ಸಂಜೆ 6 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಸಹಾಯಕರು (ಪೋಟೋಗ್ರಫಿ), ಇ. ಇ. ಜಿ. ತಂತ್ರಜ್ಞರು, ಪ್ರಯೋಗಾಲಯ ಸೇವಕರ ಕಲ್ಯಾಣ-ಕಲ್ಯಾಣೇತರ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಖುದ್ದಾರಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 27ರಿಂದ ನವೆಂಬರ್ 25ರ ಸಂಜೆ 6 ಗಂಟೆಯ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕಗಳನ್ನು ಪಾವತಿ ಮಾಡಲು 27/11/2020 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ
ಕರ್ನಾಟಕ ಪೊಲೀಸ್ ಇಲಾಖೆ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) 1, ಇ.ಇ.ಜಿ. ತಂತ್ರಜ್ಞರು 6, ಪ್ರಯೋಗಾಲಯ ಸೇವಕರು 30 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅರ್ಜಿ ಸಲ್ಲಿಸಲು www.ksp.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ವಿದ್ಯಾರ್ಹತೆ ವಿವರಗಳು
ಇ.ಇ.ಜಿ. ತಂತ್ರಜ್ಞರ ಹುದ್ದೆಗೆ ವಿಜ್ಞಾನ ಪದವಿ/ ಇ.ಇ.ಜಿ. ತಾಂತ್ರಿಕ ಕೋರ್ಸ್/ ಮೆಡಿಕಲ್ ಲ್ಯಾಬ್‌ರೇಟರಿ ಟೆಕ್ ಕೋರ್ಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು ಅಥವ ಯಾವುದೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) ಹುದ್ದೆಗೆ ಸಿನಿಮಾಟೋಗ್ರಫಿಯಲ್ಲಿ ಅಥವ ಫೋಟೋಗ್ರಫಿಯಲ್ಲಿ ಡಿಪ್ಲೊಮಾ ಪಡೆದಿರಬೇಕು ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕರದಿಂದ ಮಾನ್ಯತೆ ಹೊಂದಿರುವಂತೆ ಸಂಸ್ಥೆಗಳಿಂದ ಪಡೆದಿರಬೇಕು. ಒಂದು ವರ್ಷದ ಪ್ರಾಯೋಗಿಕ ಅನುಭವನ್ನು ಅನಾಲಾಗ್ ಮತ್ತು ಡಿಜಿಟಲ್ ಪೋಟೋಗ್ರಫಿ ಉಪಕರಣಗಳ ನಿರ್ವಹಣೆಯನ್ನು ವಿಡಿಯೋಗ್ರಫಿ ಸಮೇತ ಹೊಂದಿರಬೇಕು.

ವಯೋಮಿತಿ ವಿವರ
ಅರ್ಜಿ ಸಲ್ಲಿಸುವ ಸಾಮಾನ್ಯವ ವರ್ಗದ ಅಭ್ಯರ್ಥಿಗಳಿಗೆ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.
Recommended Video

ಅರ್ಜಿ ಶುಲ್ಕದ ವಿವರಗಳು
ಅರ್ಜಿಯನ್ನು ಸಲ್ಲಿಸುವ ಸಾಮಾನ್ಯ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 250 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ. ಶುಲ್ಕವಿದೆ.
ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಅಂಚೆ ಕಚೇರಿ ಅಥವ ಹೆಚ್. ಡಿ. ಎಫ್. ಸಿ ಬ್ಯಾಂಕ್‌ನಲ್ಲಿ ಪಾವತಿ ಮಾಡದಿ ಚಲನ್ ಅನ್ನು ಅಭ್ಯರ್ಥಿಗಳು ಇಟ್ಟುಕೊಳ್ಳಬೇಕು.












Click it and Unblock the Notifications