ನಿರುದ್ಯೋಗಿಗಳಿಗೆ ಸುವರ್ಣಾವಕಾಶ: ಜನವರಿ 6ರಂದು ರಾಮನಗರದಲ್ಲಿ ಉದ್ಯೋಗ ಮೇಳ

ರಾಮನಗರ, ಡಿಸೆಂಬರ್‌ 28: ಕೊರೊನಾ ಆತಂಕದ ನಡುವೆಯೂ ಜನವರಿ 6 ರಂದು ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಆಯೋಜನೆ ಮಾಡಿದೆ. ಜಿಲ್ಲೆಯ ಸಾವಿರಾರು ನಿರುದ್ಯೋಗಿ ಯುವಕ ಯುವತಿಯರಿಗೆ ಸರ್ಕಾರ ಸುವರ್ಣಾವಕಾಶ ನೀಡಲು ಮುಂದಾಗಿದೆ.

ರಾಮನಗರ ಜಾಬ್ ಪಾರ್ ಆಲ್ ಹೆಸರಿನಲ್ಲಿ ಮೆಗಾ ಜಾಬ್ ಪೇರ್ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿರುವ ರಾಜ್ಯ ಸರ್ಕಾರ, ಈ ಮೂಲಕ ಸುಮಾರು 3 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಪಡೆಯುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲೆಯ ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ಕರೆ ನೀಡಿದ್ದಾರೆ.

ಇನ್ನು ಬೃಹತ್ ಉದ್ಯೋಗ ಮೇಳವನ್ನು ರಾಮನಗರ ಹೊರ ವಲಯದಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಜಾನಪದ ಲೋಕದ ಪಕ್ಷದಲ್ಲಿರುವ ಪ್ರತಿಷ್ಠಿತ ಬಿಜಿಎಸ್ ವರ್ಲ್ಡ್ ಸ್ಕೂಲ್ ಹಾಗೂ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಜನವರಿ 6 ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Job Fair In Ramanagara On January 6th

ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಐಟಿಐ, ಬಿ.ಇ, ಡಿಪ್ಲೋಮಾ, ಬಿಎ, ಬಿಬಿಎಂ, ಬಿಕಾಮ್‌ ಸೇರಿದಂತೆ ಯಾವುದೇ ಪದವಿ ಪಡೆದವರು ಉದ್ಯೋಗ ಮೇಳದಲ್ಲಿ ಹೆಸರು ನೋಂದಯಿಸಬಹುದಾಗಿದೆ. ಉದ್ಯೋಗ ಮೇಳಕ್ಕೆ ಬರುವವರು ರೆಸ್ಯೂಮ್‌, ಆಧಾರ್ ಕಾರ್ಡ್, ಅಂಕಪಟ್ಟಿ ಮೂಲ ಮತ್ತು ನಕಲು ಪ್ರತಿ, 2 ಪಾಸ್‌ಪೋರ್ಟ್ ಸೈಜ್ ಪೋಟೋ ( ಐದು ಸೆಟ್) ತರಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 7090001125 / 7411845322 / 9964784178 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಅಥವಾ http://skillconnect.kaushalkar.com ವೆಬ್‌ಸೈಟ್‌ನಲ್ಲಿ ಆಸಕ್ತರು ನೋಂದಾಯಿಸಿಕೊಳ್ಳಲು ಉದ್ಯೋಗ ಮೇಳದ ಆಯೋಜಕರು ಆಸಕ್ತ ಉದ್ಯೋಗಾಂಕ್ಷಿಗಳಲ್ಲಿ ಮನವಿ ಮಾಡಿದ್ದಾರೆ.

Job Fair In Ramanagara On January 6th

ಇನ್ನು ಈಗಾಗಲೇ ರಾಜ್ಯದ ಮೇಲೆ ಕೊರೊನಾ ವೈರಸ್‌ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾಂಕ್ಷಿಗಳು ತಪ್ಪದೇ ಕೋವಿಡ್ 19 ನಿಯಮವಾಳಿಗಳನ್ನು ತಪ್ಪದೇ ಪಾಲಿಸುವಂತೆ ಸರ್ಕಾರ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+