ಇನ್ಫೋಸಿಸ್ ಸಂಸ್ಥೆಯಲ್ಲಿ 50 ಸಾವಿರ ಹೊಸ ನೇಮಕಾತಿ!
ಬೆಂಗಳೂರು, ಜುಲೈ 25: ಬೆಂಗಳೂರು ಮೂಲದ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ದೇಶದ ಎರಡನೇ ಅತಿ ದೊಡ್ಡ ಐಟಿ ಸಂಸ್ಥೆ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ನೇಮಕಾತಿ ಕುರಿತ ಮಾಹಿತಿ ಹಂಚಿಕೊಂಡಿದೆ.
ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಶೇ 3.ರಷ್ಟು ಏರಿಕೆ ಕಂಡು 5,360 ಕೋಟಿ ರು ದಾಖಲಿಸಿದೆ. ಕಳೆದ ವರ್ಷ ಜೂನ್ ತ್ರೈಮಾಸಿಕದಲ್ಲಿ 5,195 ಕೋಟಿ ರು ಗಳಿಸಿತ್ತು. ವರ್ಷದಿಂದ ವರ್ಷಕ್ಕೆ ಆದಾಯ ಶೇ 21.4ರಷ್ಟು ಏರಿಕೆ ಕಂಡಿದ್ದರೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 5.5ರಷ್ಟು ಏರಿಕೆಯಾಗಿದೆ.
ಆದರೆ, ಐಟಿ ಉದ್ಯಮದಲ್ಲಿನ ಇತರೆ ಸ್ಪರ್ಧೆಗಳಂತೆ, ಇನ್ಫೋಸಿಸ್‌ಗೆ ಕ್ಷೀಣಿಸುವಿಕೆ(attrition) ದೊಡ್ಡ ತಲೆನೋವಾಗಿದೆ. ಏಕೆಂದರೆ ಜೂನ್ ತ್ರೈಮಾಸಿಕದಲ್ಲಿ ಶೇಕಡಾ 28.4ಕ್ಕೆ ಜಿಗಿದಿದ್ದು, ಹಿಂದಿನ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 27.7 ರಷ್ಟಿತ್ತು.

ನೇಮಕಾತಿ ವಿವರ: ಕಳೆದ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್ ಸಂಸ್ಥೆ 85,000 ಫ್ರೆಶರ್ಸ್ ನೇಮಿಸಿಕೊಂದಿದ್ದು, ಕಳೆದ ಎರಡು ವರ್ಷಗಳಲ್ಲಿ ನೇಮಕಾತಿ ಪ್ರಮಾಣ ದ್ವಿಗುಣವಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 50,000ಕ್ಕೂ ಅಧಿಕ ಹೊಸ ನೇಮಕಾತಿಯನ್ನು ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಉದ್ಯೋಗಿಗಳಿಗೆ ಶೇ 12 ರಿಂದ 13ರಷ್ಟು ಸಂಬಳ ಏರಿಕೆ ಹಾಗೂ ಟಾಪ್ ಕಾರ್ಯಕ್ಷಮತೆ ತೋರಿದ ಸಿಬ್ಬಂದಿಗಳಿಗೆ ಶೇ 20 ರಿಂದ 23ರಷ್ಟು ಸಂಬಳ, ಭತ್ಯೆ ಹೆಚ್ಚಳ ಸಿಗುವ ಸಾಧ್ಯತೆಯಿದೆ.
ಇನ್ಫೋಸಿಸ್‌ನ ಅಟ್ರಿಷನ್ ದರ ಕೆಲವು ತ್ರೈಮಾಸಿಕಗಳಲ್ಲಿ ಹೆಚ್ಚಾಗಿದೆ - Q3FY21 ರಲ್ಲಿ ಶೇಕಡಾ 25.5 , Q2FY22 ರಲ್ಲಿ 20.1 , ಮತ್ತು Q1FY22 ರಲ್ಲಿ ಶೇಕಡಾ 13.9 ರಷ್ಟಿತ್ತು.
ತ್ರೈಮಾಸಿಕದಲ್ಲಿ ಹೊಸ ಸಿಬ್ಬಂದಿ ಸೇರ್ಪಡೆ: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) 14,136 ನಿವ್ವಳ ಸಿಬ್ಬಂದಿ ಸೇರ್ಪಡೆಯನ್ನು ಕಂಡಿದೆ. ಎಚ್ ಸಿಎಲ್ 2,089 ಮತ್ತು ವಿಪ್ರೋ 15,446 ಹೊಸ ನೇಮಕಾತಿಗಳನ್ನು ಹೊಂದಿದೆ. TCS ಮತ್ತು HCL ಟೆಕ್ ಎರಡೂ Q4FY22 ಗೆ ಹೋಲಿಸಿದರೆ Q1 ನಲ್ಲಿ ಗಣನೀಯವಾಗಿ ಕಡಿಮೆ ಸೇರ್ಪಡೆಗಳನ್ನು ಕಂಡಿವೆ. ವಿಪ್ರೋ ಈ ಪ್ರವೃತ್ತಿಯನ್ನು ಬೆಂಬಲಿಸಿದರೆ, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಇನ್ಫೋಸಿಸ್ ತನ್ನ ನೇಮಕಾತಿ ಅಂಕಿಅಂಶವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎನ್ನಬಹುದು.
ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಡಿಜಿಟಲ್ ಕೌಶಲ್ಯ ಮತ್ತು ಪ್ರತಿಭೆಯ ಬೇಡಿಕೆ ಹೆಚ್ಚಾಗಿದೆ. ಐಟಿ ಕಂಪನಿಗಳು ನೇಮಕಾತಿ ಕಳೆದ ವರ್ಷ ಸಾಕಷ್ಟು ನೇಮಕಾತಿಯನ್ನು ಮಾಡಿಕೊಂಡಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್, ಕಾಂಗ್ನಿಝೆಂಟ್ ಹಾಗೂ ಕ್ಯಾಪ್‌ಜೆಮಿನಿ ಸೇರಿದಂತೆ ಪ್ರಮುಖ ಐಟಿ ಕಂಪನಿಗಳು ತಮ್ಮ ನೇಮಕಾತಿ ಗುರಿಗಳನ್ನು ಹೊಂದಿದ್ದು, ಈ ಹಣಕಾಸು ವರ್ಷದಲ್ಲಿ ಸುಮಾರು 3 ಲಕ್ಷ ಜನರನ್ನು ತಮ್ಮ ಉದ್ಯೋಗಿಗಳಿಗೆ ಸೇರಿಸಿಕೊಳ್ಳಲು ಬಯಸುತ್ತಿವೆ.
ಭಾರತೀಯ ಐಟಿ ಪ್ರಮುಖ ಸಂಸ್ಥೆ ವಿಪ್ರೋ ತನ್ನ ನೇಮಕಾತಿಯನ್ನು ಕಳೆದ ಆರ್ಥಿಕ ವರ್ಷದಲ್ಲಿ 17,500 ರಿಂದ 2023 ರಲ್ಲಿ 30,000 ಕ್ಕೆ ಹೆಚ್ಚಿಸಲಿದೆ. ಎಚ್‌ಸಿಎಲ್ ಕಳೆದ ವರ್ಷದ 22,000 ನೇಮಕಾತಿ ಮಾಡಿಕೊಂಡಿದ್ದು, ಈ ವರ್ಷ 40,000 ರಿಂದ 45,000 ಕ್ಕೆ ತನ್ನ ನೇಮಕಾತಿ ಗುರಿಯನ್ನು ದ್ವಿಗುಣಗೊಳಿಸಿದೆ. ಫ್ರೆಂಚ್ ಐಟಿ ದೈತ್ಯ ಕ್ಯಾಪ್‌ಜೆಮಿನಿ, ಭಾರತದಲ್ಲಿ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ಹೊಂದಿದೆ. ಈ ವರ್ಷ 60,000 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ.
ಕಳೆದ ವರ್ಷ 33,000 ಫ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿದ್ದ ಕಾಗ್ನಿಜೆಂಟ್ ಕಳೆದ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ 50,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.












Click it and Unblock the Notifications