Railway Recruitment: 1,104 ಖಾಲಿ ಹುದ್ದೆಗಳ ನೇಮಕಾತಿ, SSLC ಪಾಸಾದವರು ಅರ್ಜಿ ಹಾಕಿ
ಬೆಂಗಳೂರು, ನವೆಂಬರ್ 03: ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ರೈಲ್ವೆ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಉತ್ತಮ ಅವಕಾಶ ದೊರೆತಿದೆ. ಲಿಖಿತ ಪರೀಕ್ಷೆ ಇಲ್ಲದೆಯೇ ನೀವು ಈ ಖಾಲಿ ಹುದ್ದೆಗಳಿಗೆ ನಿಯೋಜನೆಗೊಳ್ಳುವ ಅವಕಾಶ ಇದೆ. ಇದೇ ನವೆಂಬರ್ 15 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೇಮಕಾತಿ, ಆಯ್ಕೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಪೂರ್ಣ ವಿವರ ಇಲ್ಲಿದೆ.
ರೈಲ್ವೆ ಇಲಾಖೆ ವ್ಯಾಪ್ತಿಯ ಈಶಾನ್ಯ ರೈಲ್ವೆಯಲ್ಲಿ ಒಟ್ಟು 1,104 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಇತ್ತೀಚೆಗೆಇ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ ner.indianrailways.gov.in ಮೂಲಕ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ರೈಲ್ವೆ ಇಲಾಖೆ
ಹುದ್ದೆಗಳೂ: ಅಪ್ರೆಂಟಿಸ್‌ಶಿಪ್
ಒಟ್ಟು ಹುದ್ದೆಗಳು: 1,104
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 15
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ
ರೈಲ್ವೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಕೂಡಲೇ ಅಪ್ರೆಂಟಿಸ್‌ಶಿಪ್ ಯೋಜನೆಯಡಿ ಕರೆಯಲಾದ ಈ ಹುದ್ದೆಗಳೀಗೆ ಅರ್ಜಿ ಸಲ್ಲಿಸಬಹುದು. ಕಳೆದ ತಿಂಗಳು ಅಕ್ಟೋಬರ್ 16 ರಿಂದಲೇ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ನಡೆದಿದೆ.
ವಿದ್ಯಾರ್ಹತೆ
ರೈಲ್ವೆ ಇಲಾಖೆಯ ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆಯ ಶೈಕ್ಷಣಿಕ ಸಂಸ್ಥೆ/ ಮಂಡಳಿಯಿಂದ 10 ನೇ ತರಗತಿಯ ಪಾಸಾಗಿರಬೇಕು. ಕನಿಷ್ಠ 50ರಷ್ಟು ಅಂಕ ಪಡೆದಿರುವುದು ಕಡ್ಡಾಯ. ಅಲ್ಲದೇ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ ವಿವರ
ಆಸಕ್ತ ಅಭ್ಯರ್ಥಿಗಳಿಗೆ ಕಳೆದ ತಿಂಗಳು ಅಕ್ಟೋಬರ್ 16ರ ಹೊತ್ತಿಗೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ತುಂಬಿರಬೇಕು. ಜಾತಿ ಮೀಸಲಾತಿ ಆಧಾರದಲ್ಲಿ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 5 ವರ್ಷ ಮತ್ತು ಅಂಗವಿಕಲರಿಗೆ 10 ವರ್ಷ ವಯೋ ಸಡಿಲಿಕೆ ಸಿಗುತ್ತದೆ.
ಅರ್ಜಿ ಶುಲ್ಕದ ಮಾಹಿತಿ
ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಒಟ್ಟು 100 ರೂ. ಸಂಸ್ಕರಣಾ ಶುಲ್ಕ ನಿಗದಿ ಆಗಿದೆ. ಎಸ್‌ಸಿ, ಎಸ್‌ಟಿ, ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಂಸ್ಕರಣಾ ಶುಲ್ಕ ಇರುವುದಿಲ್ಲ. ಅವರಿಗೆ ಶುಲ್ಕ ವಿನಾಯಿತಿ ಇದೆ. ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಲಿಖಿತ ಪರೀಕ್ಷೆ ಇಲ್ಲ: ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಕನಿಷ್ಠ 50ರಷ್ಟು ಅಂಕ ಸಹಿತ ಹಾಗೂ ಐಟಿಐ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಸರಾಸರಿ ಮಾಡಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಬಳಿಕ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ಸಂಪರ್ಕಿಸಬೇಕು.












Click it and Unblock the Notifications