Indian Navy Jobs: ನೌಕದಳದಲ್ಲಿ 224 ಹುದ್ದೆ ಖಾಲಿ ಇವೆ, ಸೇರಲು ಏನು ಮಾಡಬೇಕು? ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 13: ಭಾರತೀಯ ನೌಕಾದಳವು ತನ್ನಲ್ಲಿ ಖಾಲಿ ಇರುವ ವಿವಿಧ ನೂರಾರು ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಭಾರತೀಯ ನೌಕಾದಳ (Indian Navy Jobs) ದಲ್ಲಿ ಒಟ್ಟು 224 ಶಾರ್ಟ್ ಸರ್ವೀಸ್ ಕಮಿಷನ್ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಆಸಕ್ತರು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಇದೇ ಅಕ್ಟೋಬರ್ 29ರೊಳಗೆ ಸಲ್ಲಿಸುವಂತೆ ನೌಕಾದಳ ತಿಳಿಸಿದೆ. ಅದಕ್ಕು ಮೊದಲು ನೇಮಕಾತಿ ಪ್ರಕ್ರಿಯೆ, ವೇತನ, ವಿದ್ಯಾರ್ಹತೆ ಸೇರಿದಂತೆ ವಿವಿಧ ಮಾಹಿತಿ ಇಲ್ಲಿ ತಿಳಿದುಕೊಳ್ಳಬಹುದು.

ನೇಮಕಾತಿ ಪ್ರಕ್ರಿಯೆ ಮಾಹಿತಿ
ಸಂಸ್ಥೆ ಹೆಸರು: ಭಾರತೀಯ ನೌಕಾದಳ (Indian Navy)
ಹುದ್ದೆ ಹೆಸರು: ಶಾರ್ಟ್ ಸರ್ವೀಸ್ ಕಮಿಷನ್ ಅಧಿಕಾರಿ
ಖಾಲಿ ಹುದ್ದೆ ಎಷ್ಟು: 224
ಪೋಸ್ಟಿಂಗ್ ಎಲ್ಲಿ: ಭಾರತದ ಯಾವ ರಾಜ್ಯದಲ್ಲಾದರೂ
ಮಾಸಿಕ ವೇತನ: ₹ 56,100
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 29
ಹುದ್ದೆಯ ಇನ್ನಿತರ ಮಾಹಿತಿ ನೋಡುವುದಾದರೆ, ಜನರಲ್ ಸರ್ವೀಸ್ ಹುದ್ದೆಗಳು 40 ಖಾಲಿ ಇವೆ, ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆ 66, ನೇವಲ್ ಏರ್ ಆಪರೇಷನ್ಸ್ ಆಫೀಸರ್ 66, ಪೈಲಟ್ 66, ಲಾಜಿಸ್ಟಿಕ್ಸ್ 66, ಎಜುಕೇಶನ್ 18,
ಅದರಲ್ಲಿ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್) 30, ಇಲಿಕಲ್ ಬ್ರಾಂಚ್ (ಜನರಲ್ ಸರ್ವೀಸ್- ಜಿಎಸ್) 50 ಹಾಗೂ
ನೇವಲ್ ಕನ್ಸ್ಟ್ರಕ್ಟರ್ ಹುದ್ದೆಗಳು 20 ಸೇರಿ ಒಟ್ಟು 224 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

ಶೈಕ್ಷಣಿಕ ಅರ್ಹತೆ ಏನಿರಬೇಕು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬಿಐ/ಬಿ.ಟೆಕ್, ಬಿಇ/ ಬಿ.ಕಾಂ, ಬಿ.ಎಸ್ಸಿ, ಎಂಸಿಎ, ಎಂ.ಎಸ್‌ಸಿ, ಎಂ.ಟೆಕ್ ಪದವಿ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ. ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರವುದಿಲ್ಲ. ಮಾಸಿಕವಾಗಿ ₹ 56,100 ಸಂಬಳವ ಇರಲಿದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ದಾಖಲಾತಿ ಪರಿಶೀಲನೆ ನಡೆಯಲಿದೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ತದನಂತರ ಸಂದರ್ಶನ ಪಾಲ್ಗೊಳ್ಳಲು ಸೂಚಿಸಲಾಗುತ್ತದೆ. ಇಲ್ಲಿ ಆಯ್ಕೆ ಆದವರಿಗೆ ದೇಶದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಭಾರತೀಯ ನೌಕಾದಳದ ಅಧಿಕೃತ ವೆಬ್‌ಸೈಟ್ www.indiannavy.nic.in ಗೆ ಭೇಟಿ ನೀಡಬಹುದು ಎಂದು ನೌಕಾದಳ ನೇಮಕಾತಿ ಅಧಿಸೂಚನೆ ತಿಳಿಸಿದೆ.f












Click it and Unblock the Notifications