ಟೆರಿಟೋರಿಯಲ್ ಆರ್ಮಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ಭಾರತೀಯ ಸೇನೆ ನೇಮಕಾತಿ 2022: ಟೆರಿಟೋರಿಯಲ್ ಆರ್ಮಿ ಆಫೀಸರ್ ಹುದ್ದೆಗಳಿಗೆ ಹೊಸ ಹುದ್ದೆಗಳನ್ನು Jointerritorialarmy.gov.in ನಲ್ಲಿ ಪ್ರಕಟಿಸಲಾಗಿದೆ
ಭಾರತೀಯ ಸೇನೆಯಲ್ಲಿ ಟೆರಿಟೋರಿಯಲ್ ಆರ್ಮಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಪ್ರಕ್ರಿಯೆಯು ಜುಲೈ 1, 2022 ರಂದು ಪ್ರಾರಂಭವಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30, 2022. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, jointerritorialarmy.gov.in ಮೂಲಕ ಅರ್ಜಿ ಸಲ್ಲಿಸಬಹುದು.

ಇಂಡಿಯನ್ ಆರ್ಮಿ ಟೆರಿಟೋರಿಯಲ್ ಆರ್ಮಿ ಆಫೀಸರ್ ನೇಮಕಾತಿ 2022 ವಿವರ
ಹುದ್ದೆ: ಪ್ರಾದೇಶಿಕ ಸೇನಾ ಅಧಿಕಾರಿ
ಹುದ್ದೆಯ ಸಂಖ್ಯೆ: 13 (ಪುರುಷ - 12 ಮತ್ತು ಮಹಿಳೆ-01)
ವೇತನ ಶ್ರೇಣಿ: 56,100 - 1,77,500 ರುಪಾಯಿ
ಹಂತ -10
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಪಡೆದಿರಬೇಕು.

ವಯಸ್ಸಿನ ಮಿತಿ: 18 ರಿಂದ 42 ವರ್ಷಗಳು
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಲ್ಲಾ ಅಭ್ಯರ್ಥಿಗಳಿಗೆ 200 ರುಪಾಯಿ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jointerritorialarmy.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಜುಲೈ 01, 2022 ಪ್ರಾರಂಭ ದಿನಾಂಕವಾಗಿದ್ದು, ಜುಲೈ 30, 2022 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಶುಲ್ಕ ಪಾವತಿಸಲು ಜುಲೈ 30, 2022 ಕೊನೆಯ ದಿನಾಂಕವಾಗಿದೆ. ಲಿಖಿತ ಪರೀಕ್ಷೆ ಸೆಪ್ಟೆಂಬರ್ 25, 2022ರಂದು ನಡೆಯಲಿದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮಾಡುವ ಮೂಲಕ ಆಯಾ ಪ್ರಾದೇಶಿಕ ಆರ್ಮಿ ಗ್ರೂಪ್ ಹೆಡ್‌ಕ್ವಾರ್ಟರ್ಸ್‌ನಿಂದ ಪ್ರಿಲಿಮಿನರಿ ಇಂಟರ್ ವ್ಯೂ ಬೋರ್ಡ್ (ಪಿಐಬಿ) ಆಯ್ಕೆ ಮಾಡಲಾಗುತ್ತದೆ.












Click it and Unblock the Notifications