ವಾರಕ್ಕೆ 60 ಗಂಟೆಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ ಇಷ್ಟೆಲ್ಲಾ ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಂತೆ
ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಗಳ ಕೆಸಲದ ಅವಧಿ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರು. ಅವರು ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆ ಎಂದು ಹೇಳಿಕೆ ನೀಡಿ ಸುದ್ದಿಯಲ್ಲಿದ್ದರು. ಬಳಿಕ ಎಲ್ & ಟಿ ಕಂಪನಿ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದರು. ಈ ಬೆನ್ನಲ್ಲೇ ಇದೀಗ ಸಮೀಕ್ಷೆಯ ವರದಿಯೊಂದು ಆಘಾತಕಾರಿ ವಿಚಾರವೊಂದನ್ನ ಬಹಿರಂಗಗೊಳಿಸಿದೆ.
ಈಗಿನ ದಿನಮಾನಗಳಲ್ಲಿ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ, ಮಾನಸಿಕವಾಗಿ ಕುಗ್ಗಿ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಅದರಲ್ಲೂ ಅತಿಯಾದ ಒತ್ತಡದಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತಿದೆ. ಜೊತೆಗೆ ಕೆಲಸದ ಅವಧಿ ಹೆಚ್ಚಿಸುವ ಬಗ್ಗೆಯೂ ಕೆಲವು ಪ್ರಸಿದ್ಧ ಕಂಪನಿಯ ಮುಖ್ಯಸ್ಥರು ಮಾತನಾಡುತ್ತಿದ್ದಾರೆ. ಈ ನಡುವೆಯೇ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು ವಾರಕ್ಕೆ 60 ಗಂಟೆಗಿಂತ ಹೆಚ್ಚು ಕೆಲಸ ಮಾಡುವುದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡಬಹುದು ಎಂದು ಅಧ್ಯಯನಗಳು ಹೇಳಿದ್ದನ್ನು ಉಲ್ಲೇಖಿಸಲಾಗಿದೆ.

ಎಲ್ &ಟಿ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸುಬ್ರಹ್ಮಣ್ಯನ್ ನೌಕರರು ಭಾನುವಾರ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಆ ದಿನವೂ ಸೇರಿ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಹುತೇಕ ಮಂದಿ ಸಾಮಾಜಿಕ ಜಾಲತಾಣದ ಮೂಲಕ ಠಕ್ಕರ್ ಕೊಡುವ ಕೆಲಸವನ್ನು ಈಗಲೂ ಮುಂದುವರೆಸಿದ್ದಾರೆ. ಇನ್ನು ಇದೀಗ ಆರ್ಥಿಕ ಸಮೀಕ್ಷೆಯ ಕೆಲಸದ ಸಮಯದ ಬಗ್ಗೆ ನಿಲುವವನ್ನು ಸ್ಪಷ್ಟಪಡಿಸಿದೆ.
ಎಲ್ & ಟಿ ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ್ದ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸಲಹೆ ನೀಡಿದ್ದರು. ಆದರೆ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೆ ಹೆಂಡತಿ ಮನೆ ಬಿಟ್ಟು ಹೋಗುತ್ತಾರೆ ಎಂದು ಠಕ್ಕರ್ ಕೊಟ್ಟಿದ್ದರು.
ಆರ್ಥಿಕ ಸಮೀಕ್ಷೆ ವರದಿ ಪ್ರಕಾರ, ಒಬ್ಬ ವ್ಯಕ್ತಿ ದೀರ್ಘಕಾಲ ಡೆಸ್ಕ್ ಮುಂದೆ ಕುಳಿತು ಕೆಲಸ ಮಾಡುವುದು ಆತನ ಮಾನಸಿಕ ಯೋಗಕ್ಷೇಮಕ್ಕೆ ಅಪಾಯಕಾರಿ. ದಿನಕ್ಕೆ 12 ಅಥವಾ ಅದಕ್ಕಿಂತ ಹೆಚ್ಚು ಕಾಲ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮುಂದೆ ಕುಳಿತು ಕೆಲಸ ಮಾಡುವ ವ್ಯಕ್ತಿಯು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಾನೆ. ಅಲ್ಲದೆ, ಅವನ ಮಾನಸಿಕ ಯೋಗಕ್ಷೇಮವು ಹದಗೆಡುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಕೆಲಸದಲ್ಲಿ ಕಳೆಯುವ ಸಮಯವನ್ನು ಅನೌಪಚಾರಿಕವಾಗಿ ಉತ್ಪಾದಕತೆಯ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಆದರೆ, ಹಿಂದಿನ ಅಧ್ಯಯನವು ವಾರಕ್ಕೆ 55-60 ಗಂಟೆಗಳನ್ನ ಮೀರಿದಾಗ ಆರೋಗ್ಯದ ಮೇಲೆ ಹೆಚ್ಚು ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಹೆಚ್ಚು ಸಮಯ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಮಾನಸಿಕ ಆರೋಗ್ಯಕ್ಕೆ ತುಂಬಾ ಹಾನಿ ಉಂಟುಮಾಡುತ್ತದೆ. 12 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಮೇಜಿನ ಬಳಿ ಕಳೆಯುವ ವ್ಯಕ್ತಿಗಳು ತುಂಬಾ ಮಾನಸಿಕ ಸಮಸ್ಯೆಗಳು ಸೇರಿ ದೈಹಿಕ ಸಮಸ್ಯೆಗಳನ್ನೂ ಎದುರಿಸುತ್ತಾರೆ ಎಂಬ ಸೇಪಿಯನ್ ಲ್ಯಾಬ್ಸ್ ಸೆಂಟರ್ ಫಾರ್ ಹ್ಯೂಮನ್ ಬ್ರೈನ್ ಅಂಡ್ ಮೈಂಡ್ ನಡೆಸಿದ ಅಧ್ಯಯನದ ಡೇಟಾವನ್ನು ಉಲ್ಲೇಖಿಸಲಾಗಿದೆ.
ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವುದು, ಕೆಲಸದ ಸ್ಥಳದ ಸಂಸ್ಕೃತಿಗಳು ಮತ್ತು ಕುಟುಂಬದವರ ಜೊತೆ ಉತ್ತಮ ಸಮಯ ಕಳೆಯುವುದರ ಜೊತೆ ತಿಂಗಳಲ್ಲಿ ಮೂರ್ನ್ಕಾಲು ದಿನ ರಜೆ ಹಾಕುವುದು ಕೂಡ ಅವಶ್ಯ ಎಂದು ಸಲಹೆ ನೀಡಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ, ಈ ಸಮೀಕ್ಷೆಯು ಜಾಗತಿಕವಾಗಿ, ಖಿನ್ನತೆ ಮತ್ತು ಆತಂಕದ ಕಾರಣದಿಂದಾಗಿ ವಾರ್ಷಿಕವಾಗಿ ಸುಮಾರು 12 ಶತಕೋಟಿ ದಿನಗಳು ಕಳೆದುಹೋಗುತ್ತವೆ ಎಂದು ಹೇಳಿದೆ. ಇದು 1 ಟ್ರಿಲಿಯನ್ USD ಆರ್ಥಿಕ ನಷ್ಟಕ್ಕೆ ಕಾರಣ ಆಗುತ್ತದೆ. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ದಿನಕ್ಕೆ ಸುಮಾರು 7,000 ರೂಪಾಯಿ ನಷ್ಟ ಆಗುತ್ತದೆ.
ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಅವರು ಹೇಳುವಂತೆ ಸಾಮಾನ್ಯವಾಗಿ, ನೌಕರರು ದಿನನಿತ್ಯ ಮತ್ತು ವಾರಕ್ಕೊಮ್ಮೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬಹುದೆಂಬುದನ್ನು ನಾವು ನಿರ್ದಿಷ್ಟಪಡಿಸುತ್ತೇವೆ. ಪ್ರತಿಯೊಂದು ದೇಶವೂ ಇಂತಹ ನಿಯಮಗಳನ್ನು ಹೊಂದಿರುತ್ತದೆ. ಆದರೆ, ಸಮಸ್ಯೆ ಎಂದರೆ, ಭಾರತದಲ್ಲಿ ವಾರದಿಂದ ವಾರಕ್ಕೆ ನಿಯಮಗಳ, ನಿಬಂಧನೆಗಳು ಬದಲಾಗುತ್ತವೆ. ಆದರೆ, ಇತರ ದೇಶಗಳು 3 ಅಥವಾ 6 ತಿಂಗಳ ದೀರ್ಘಾವಧಿಯಲ್ಲಿ ಇದನ್ನು ಸಾಧಿಸಲು ಉದ್ಯಮಗಳಿಗೆ ತಾಕೀತು ಮಾಡುತ್ತವೆ ಎಂದು ಅವರು ಹೇಳುತ್ತಾರೆ.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications