IBM Layoff: ಸಾವಿರಾರು ಉದ್ಯೋಗಿಗಳ ವಜಾಗೊಳಿಸಿ ಪ್ರತಿಷ್ಠಿತ ಐಬಿಎಂ ಕಂಪನಿ
ಖ್ಯಾತ ಕಂಪನಿಗಳಲ್ಲಿ ಒಂದಾಗಿರುವ ಐಬಿಎಂ (International Business Machines) ಈ ವಾರ ಸಾವಿರಾರು ಉದ್ಯೋಗಿಗಳನ್ನು ಕೆಲದಿಂದ ತೆಗೆಯಲು ನಿರ್ಧರಿಸಿದೆ. ಬಲ್ಲ ಮೂಲಗಳ ಪ್ರಕಾರ, ಗಳಿಕೆ ಮತ್ತು ಲಾಭ ನಷ್ಟದ ಆಧಾರದಲ್ಲಿ ಸಮತೋಲನ ಕಾಪಾಡಲು ನೌಕರರ ವಜಾಗೊಳಿಸುತ್ತಿದೆ ಎಂದು 'ದಿ ರಿಜಿಸ್ಟರ್' ವರದಿಯು ಬಹಿರಂಗಪಡಿಸಿದೆ.
ಐಬಿಎಂ (IBM) ಕಂಪನಿಯಲ್ಲಿ ಈ ಬಾರಿ ಗಮನಾರ್ಹ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳ ಕಡಿತ ಪ್ರಕ್ರಿಯೆ ನಡೆದಿವೆ. ಇತ್ತೀಚೆಗೆ ಐಬಿಎಂ ಕ್ಲೌಡ್ ವಿಭಾಗದ ಸಾವಿರಾರು ನೌಕರರ ಮೇಲೆ ಈ ಉದ್ಯೋಗ ವಜಾ ನಿರ್ಧಾರದ ಪರಿಣಾಮ ಬೀರಿದೆ. ಈ ಕುರಿತು ವಿಭಾಗದ ಕಾರ್ಮಿಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಅಗತ್ಯಕ್ಕೆ ತಕ್ಕಂತೆಯೇ ನೋಡಿಕೊಂಡು ಬಹಳ ವಿವೇಚನೆಯಿಂದ ವಜಾಗೊಳಿಸಲಾಗುತ್ತಿದೆ. ಉದ್ಯೋಗಿಗಳು ಇದಕ್ಕೆ ಒಪ್ಪಬೇಕಿರುವುದು ಅನಿವಾರ್ಯವಾಗಿದೆ ಎಂದು ಕಂಪನಿ ತಿಳಿಸಿದೆ.

ಯಾವುದೇ ಬಹಿರಂಗ ಉದ್ಯೋಗ ವಜಾ ಘೋಷಣೆ ಆಗಿಲ್ಲ. ಬದಲಾಗಿ ರಹಸ್ಯವಾಗಿ ಸಾವಿರಾರು ಉದ್ಯೋಗಿಗಳನ್ನು ತೆಗೆದುಹಾಖಲಾಗುತ್ತಿದೆ. ರಾಜೀನಾಮೆಗೆ ನೌಕರರು ಸಹಿ ಹಾಕುವಂತೆ ಅಗತ್ಯವಿದೆ ಕಂಪನಿ ವ್ಯವಸ್ಥಾಪಕರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ..
ತ್ರೈಮಾಸಿಕ ಗಳಿಕೆ: ಸಮತೋಲನಕ್ಕಾಗಿ ವಜಾ
IBM ಉದ್ಯೋಗಿಗಳ ಕಡಿತದಲ್ಲಿ ಮೊದಲ ತ್ರೈಮಾಸಿಕದಲ್ಲಿ ಗಳಿಕೆಯ ವರದಿ ಆಧಾರದಲ್ಲಿ ಪ್ರಮಾಣ ಇಳಿಕೆ ಮಾಡಿದೆ ಅಂತಲೂ ಹೇಳಲಾಗುತ್ತಿದೆ. ಈ ಕಂಪನಿಯು ಮೊದಲ ತ್ರೈಮಾಸಿಕ (ಜನವರಿ, ಫೆಬ್ರವರಿ ಮತ್ತು ಮಾರ್ಚ್) ಕಂಪನಿಯು $400 ಮಿಲಿಯನ್ ಡಾಲರ್ ಮೌಲ್ಯದ ಆಧಾರದಲ್ಲಿ ಕಾರ್ಮಿಕರ ಮರು ಸಮತೋಲನಕ್ಕೆ ಮುಂದಾಗಿದೆ. ನೌಕರರ ವಜಾದಿಂದ ಗಳಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಿದೆ.
ಒಂದು ಮಾಹಿತಿ ಪ್ರಕಾರ, ಐಬಿಎಂ ವರ್ಷದ ಮೊಲದ ನೌಕರರ ವಜಾಗೊಳಿಸುತ್ತಿದೆ. ಇದು ಆಗಸ್ಟ್ ತಿಂಗಳಿನಲ್ಲಿಯೇ ನಡೆದ ಪ್ರಕ್ರಿಯೆ ಆಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರು ಐಬಿಎಂ ಸುಮಾರು 7,800 ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗಿಗಳ ಬದಲಾವಣೆ ನಿರೀಕ್ಷೆ ಇದೆ ಎಂದಿದ್ದರು.
ನಿರ್ದಿಷ್ಟ ಉದ್ಯೋಗಿಗಳ ವಜಾ ಎಷ್ಟು?
ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಯಾವಾಗ ನೌಕರರ ವಜಾಗೊಳಿಸಲಾಗುತ್ತದೆ ಎಂದು ತಿಳಿದಿರಲಿಲ್ಲ. ಕಳೆದ ವರ್ಷವು ಐಬಿಎಂ ಒಂದಷ್ಟು ನೌಕರರನ್ನು ಕೆಲಸದಿಂದ ಕಿತ್ತು ಹಾಕಿತ್ತು. ಈ ಭಾರಿಯು ಅಧಿಕ ಸಂಖ್ಯೆಯಲ್ಲಿ ಐಬಿಎಂನಿಂದ ಉದ್ಯೋಗಿಗಳು ಹೊರ ನಡೆದಿರುವ ಮಾಹಿತಿ ಇದೆ. ಆದರೆ ಅಂಕಿ ಸಂಖ್ಯೆಗಳನ್ನು ಕಂಪನಿಯು ತಿಳಿಸಿಲ್ಲ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications