Government Jobs: ಗದಗ ಡಿಸಿ ಕಚೇರಿಯಲ್ಲಿ 58 ಲೋಡರ್, ಕ್ಲೀನರ್ ಹುದ್ದೆಗೆ ಅರ್ಜಿ ಆಹ್ವಾನ

ಗದಗ, ನವೆಂಬರ್ 12: ಗದಗ ಜಿಲ್ಲೆ ವ್ಯಾಪ್ತಿಯಲ್ಲಿ ಕೆಲಸ ಹುಡುಕುವವರಿಗೆ ಸುವರ್ಣ ಅವಕಾಶ ನೀಡಿರದ ಜಿಲ್ಲಾಧಿಕಾರಿಗಳ ಕಚೇರಿ. ಈ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 58ಲೋಡರ್ ಮತ್ತು ಕ್ಲೀನರ್ ಕೆಲಸಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಆಸಕ್ತರು ಅರ್ಜಿ ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಬಹುದು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಡರ್ ಮತ್ತು ಕ್ಲೀನರ್ ಹುದ್ದೆಗಳ ಕೆಲಸ ಮಾಡಲು ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮುನ್ಸಿಪಾಲಿಟಿಯಲ್ಲಿ ಈಗಾಗಲೇ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ನವೆಂಬರ್ 28 ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ.

Application invite for empty 58 loader and cleaner jobs at Gadag DC office

ವಯಸ್ಸು, ಅರ್ಹತೆ

ಗದಗ ಜಿಲ್ಲೆಯಲ್ಲಿನ ಬೆಟಗೇರಿ ಪುರಸಭೆ, ಗಜೇಂದ್ರಗಡ ಪುರಭಸೆ, ಲಕ್ಷ್ಮೇಶ್ವರ್ ಪುರಭಸೆ, ಮುಂಡರಗಿ ಮುನ್ಸಿಪಾಲಿಟಿ, ನರಗುಂದ ಪುರಭಸೆ, ರೋಣ ಮುನ್ಸಿಪಾಲಿಟಿ, ಮುಳಗುಂದ ನಗರ ಪುರಭಸೆ, ನರೆಗಲ್ ನಗರ ಪುರಭಸೆ ಹಾಗೂ ಶಿರಹಟ್ಟಿ ಟೌನ್ ಪಂಚಾಯತ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.

ಗದಗ ಜಿಲ್ಲಾಧಿಕಾರಿಗಳ ಕಚೇರಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 55 ವರ್ಷ ಇರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 17,000 ರೂ.ನಿಂದ 28.950ರೂ.ವರಗೆ ವೇತನ ಇರಲಿದೆ.

Application invite for empty 58 loader and cleaner jobs at Gadag DC office

ಅರ್ಜಿ ಸಲ್ಲಿಕೆ ವಿಧಾನ ಹೀಗಿದೆ

ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಕೊಠಡಿ ಸಂಖ್ಯೆ-123, ಮೊದಲನೇ ಮಹಡಿ ಜಿಲ್ಲಾ ನಗರಾಭಿವೃದ್ಧಿ ಘಟಕ, ಜಿಲ್ಲಾಧಿಕಾರಿಗಳ ಕಚೇರಿ, ಗದಗ ಈ ವಿಳಾಸಕ್ಕೆ ನವೆಂಬರ್ 28, 2022 ರೊಳಗೆ ಅರ್ಜಿ ಕಳುಹಿಸಬೇಕು.

ಅರ್ಜಿ ಎಲ್ಲಿ ಸಿಗುತ್ತವೆ?

ಅಭ್ಯರ್ಥಿಗಳು ಅರ್ಜಿಯನ್ನು ಕೊಠಡಿ ಸಂಖ್ಯೆ-123, ಮೊದಲನೇ ಮಹಡಿ, ಜಿಲ್ಲಾ ನಗರಾಭಿವೃದ್ಧಿ ಘಟಕ, ಜಿಲ್ಲಾಧಿಕಾರಿಗಳ ಕಚೇರಿ,ಗದಗ ಇಲ್ಲಿ ಪಡೆದುಕೊಂಡು ಅಗತ್ಯ ದಾಖಲೆಗಳ ಸಹಿತ ನಿಗದಿತ ಅವಧಿಯೊಳಗೆ ಕಳುಹಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಅಧಿಸೂಚನೆ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+