ESIC Karnataka Recruitment 2023: ಮಾಸಿಕ 2 ಲಕ್ಷ ರೂ. ಉದ್ಯೋಗ, ಎಲ್ಲಿ? ಆಯ್ಕೆ ಹೇಗೆ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 12: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಮಾಡಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಇದೇ ನವೆಂಬರ್ 26ರೊಳಗೆ ಅರ್ಜಿ ಸಲ್ಲಿಸಬೇಕಿದೆ.
ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC) ದಲ್ಲಿ ಒಟ್ಟು 42 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಅಭ್ಯರ್ಥಿಗಳು ಸೆ.26ರಂದು ಬೆಳಗ್ಗೆ ನಡೆಯಲಿರುವ ಸಂದರ್ಶನಕ್ಕೂ ಮೊದಲು ಹುದ್ದೆಗಳ ಪೂರ್ಣ ವಿವರ, ವೇತನ, ಶೈಕ್ಷಣಿಕ ಅರ್ಹತೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ವಿವರ
ಸಂಸ್ಥೆ- ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ESIC)
ಹುದ್ದೆ ಹೆಸರು- ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್
ಖಾಲಿ ಹುದ್ದೆಗಳ ಸಂಖ್ಯೆ - ಒಟ್ಟು 42
ಮಾಸಿಕ ವೇತನ - 2,11,000 ರೂಪಾಯಿ
ಸಂದರ್ಶನ ದಿನಾಂಕ- ಸೆಪ್ಟೆಂಬರ್ 26
ಉದ್ಯೋಗ & ಸಂದರ್ಶನ ಸ್ಥಳ- ಕಲಬುರಗಿ
ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಏನಿರಬೇಕು
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ MSc ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ ಎಂದು ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 69 ವರ್ಷ ಒಳಗಿರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ ಎಂದು ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ಸಂಸ್ಥೆ ಹೇಳಿದೆ.

ಅರ್ಜಿ ಶುಲ್ಕದ ಮಾಹಿತಿ
ಪರಿಶಿಷ್ಠ ಜಾತಿ ಮತ್ತು ಪಂಗಡ/ಮಹಿಳೆ ಮತ್ತು ESIC ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಉಳಿದಂತೆ ಎಲ್ಲ ಇತರ ಅಭ್ಯರ್ಥಿಗಳು ರೂಪಾಯಿ 300 ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಆಯ್ಕೆ ಆಗುವವರಿಗೆ ಕಲಬುರಗಿಯಲ್ಲಿ ಪೋಸ್ಟಿಂಗ್ ನೀಡಲಾಗುವುದು.
ಮಾಸಿಕ ವೇತನದ ಮಾಹಿತಿ
ಅಸೋಸಿಯೇಟ್ ಪ್ರೊಫೆಸರ್- ತಿಂಗಳಿಗೆ ₹1,40,894
ಅಸಿಸ್ಟೆಂಟ್ ಪ್ರೊಫೆಸರ್- ತಿಂಗಳಿಗೆ ₹1,02,904 ಯಿಂದ 1,21,408 ರೂಪಾಯಿ
ಪ್ರೊಫೆಸರ್- ಹುದ್ದೆಗೆ ತಿಂಗಳಿಗೆ ₹ 2,11,878
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲು ಸ್ಕ್ರೀನಿಂಗ್ ಟೆಸ್ಟ್, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಬಳಿಕ ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನೂ ಸಂದರ್ಶನವು ಸೆಪ್ಟಂಬರ್ 26ರಂದು ಬೆಳಗ್ಗೆ 11 ಗಂಟೆಗೆ ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ-585106 ಯಲ್ಲಿ ನಡೆಯಲಿದ್ದು, ಅಭ್ಯರ್ಥಿಗಳಿಗೆ ಅಲ್ಲಿಗೆ ಹಾಜರಾಗಬೇಕು ಎಂದು ಸಂಸ್ಥೆ ತಿಳಿಸಿದೆ.












Click it and Unblock the Notifications