Bank Jobs: ಬ್ಯಾಂಕ್ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚಳ

ಬೆಂಗಳೂರು, ಡಿಸೆಂಬರ್ 30: ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗ ಹಲವು ಜನರ ಕನಸಿನ ಉದ್ಯೋಗ. ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಲು ಕೋಚಿಂಗ್ ಪಡೆದು, ಕಷ್ಟಪಟ್ಟು ಓದಿ ಪರೀಕ್ಷೆ ಉತ್ತೀರ್ಣರಾಗುತ್ತಾರೆ. ಆದರೆ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಬಹಳ ಒತ್ತಡವಿದೆ ಎಂಬ ಮಾತುಗಳು ಇವೆ. ಇದಕ್ಕೆ ಪೂರಕ ಎಂಬಂತೆ ಆರ್‌ಬಿಐ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಬ್ಯಾಂಕ್ ಕೆಲಸ ತೊರೆಯುವ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದೆ.

ಹೌದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವರದಿಯೊಂದನ್ನು ಬಿಡುಗಡೆ ಮಾಡಿದೆ. ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಕೆಲಸ ಬಿಡುವ ಉದ್ಯೋಗಿಗಳ ಸಂಖ್ಯೆ ಶೇ 25ರಷ್ಟು ಹೆಚ್ಚಾಗಿದ್ದು, ಇದು ಬ್ಯಾಂಕ್‌ ಕಾರ್ಯಚಟುವಟಿಕೆಗಳ ಮೇಲೆ ಪ್ರಭಾವ ಬೀರಿದೆ ಎಂದು ತಿಳಿಸಿದೆ.

Employees Quitting Private Banks Jobs Lead Operational Risk

2023-24ರ ಭಾರತದ ಬ್ಯಾಂಕಿಂಗ್‌ನ ಪ್ರಗತಿ ಮತ್ತು ಪ್ರವೃತ್ತಿ ಎಂಬ ವರದಿಯಲ್ಲಿ ಖಾಸಗಿ ವಲಯದ ಬ್ಯಾಂಕ್ ಉದ್ಯೋಗ ತೊರೆಯುತ್ತಿರುವವರ ಬಗ್ಗೆ ಆರ್‌ಬಿಐ ಉಲ್ಲೇಖಿಸಿದೆ. ಖಾಸಗಿ ವಲಯದ ಬ್ಯಾಂಕ್ ಮಾತ್ರವಲ್ಲ ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿಯೂ ಹೆಚ್ಚಿನ ಉದ್ಯೋಗಿಗಳು ಕೆಲಸ ತೊರೆಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಬ್ಯಾಂಕ್ ಕಾರ್ಯಾಚರಣೆ ಮೇಲೆ ಪರಿಣಾಮ: ಕಳೆದ ಮೂರು ವರ್ಷಗಳಲ್ಲಿ ಖಾಸಗಿ ವಲಯದ ಬ್ಯಾಂಕ್ ಉದ್ಯೋಗ ತೊರೆಯುವವರ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. 2023-24ರಲ್ಲಿ ಖಾಸಗಿ ವಲಯದ ಬ್ಯಾಂಕ್ ಉದ್ಯೋಗಿಗಳ ಸಂಖ್ಯೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉದ್ಯೋಗಿಗಳ ಸಂಖ್ಯೆಯನ್ನು ಮೀರಿಸಿದೆ ಎಂದು ವರದಿ ತಿಳಿಸಿದೆ.

ನೇಮಕಾತಿ ಹೊಂದಿದವರು ಮಧ್ಯದಲ್ಲೇ ಬ್ಯಾಂಕ್ ಕೆಲಸ ತೊರೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದಾಗಿ ಬ್ಯಾಂಕ್‌ಗಳಿಗೆ ನೇಮಕಾತಿ ವೆಚ್ಚ ಹೆಚ್ಚಾಗುತ್ತಿದೆ. ಅಲ್ಲದೇ ಬ್ಯಾಂಕ್‌ಗಳ ಕಾರ್ಯ ನಿರ್ವಹಣೆಗೆ ಸಹ ತೊಂದರೆಯಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವರದಿ ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಲವು ಶಿಫಾರಸುಗಳನ್ನು ಮಾಡಿದೆ. ಹೊಸದಾಗಿ ನೇಮಕವಾದ ಅಭ್ಯರ್ಥಿಗಳಿಗೆ ತರಬೇತಿ, ಮಾರ್ಗದರ್ಶನ, ಉತ್ತಮ ಕೆಲಸದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದೆ. ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಉದ್ಯೋಗ ತೊರೆಯುತ್ತಿರುವವರ ಸಂಖ್ಯೆ ಸವಾಲಾಗಿದೆ ಎಂದು ಹೇಳಿದೆ.

ಬ್ಯಾಂಕ್‌ಗಳಲ್ಲಿ ಆಗುತ್ತಿರುವ ವಿವಿಧ ಅಕ್ರಮಗಳ ಕುರಿತು ಜಾಗೃತೆ ವಹಿಸುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಚಿನ್ನದ ಆಭರಣಗಳ ಮೇಲಿನ ಸಾಲ, ಟಾಪ್ ಅಪ್ ಸಾಲಗಳನ್ನು ನೀಡುವಾಗ ಜಾಗೃತರಾಗಿರಬೇಕು. ಸಾಲ ನೀಡುವ ನಿಯಮಗಳನ್ನು ಕಾಲ ಕಾಲಕ್ಕೆ ಪರಿಷ್ಕರಣೆ ಮಾಡುವ ಅಗತ್ಯವಿದೆ. ಅಕ್ರಮಗಳು ಉಂಟಾದಾಗ ಕಾಲಮಿತಿಯಲ್ಲಿ ಅವುಗಳನ್ನು ಬಗೆಹರಿಸಲು ಪ್ರಯತ್ನ ನಡೆಸಬೇಕು ಎಂದು ತಿಳಿಸಿದೆ.

ಬ್ಯಾಂಕ್ ಸೇವೆಗಳನ್ನು ಹೊರಗುತ್ತಿಗೆ ನೀಡುವಾಗ ಬಹಳ ಎಚ್ಚರವಾಗಿರಬೇಕು. ಅದರಲ್ಲೂ ಸಾಲ ಮರುಪಾವತಿಯ ಯೋಜನೆಗಳ ವಿಚಾರದಲ್ಲಿ ಬ್ಯಾಂಕ್ ಸದಾ ಕಣ್ಗಾವಲು ವಹಿಸಬೇಕು, ನಿಗದಿತ ಗುರಿ ತಲುಪಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತನ್ನ 2024ರ ವರದಿಯಲ್ಲಿ ಖಾಸಗಿ ಮತ್ತು ಸರ್ಕಾರಿ ವಲಯಗಳ ಉದ್ಯೋಗ, ಆನ್‌ಲೈನ್ ಮತ್ತು ಆಫ್‌ಲೈನ್ ಉದ್ಯೋಗ ಮೇಳಗಳ ಮಾಹಿತಿಯ ಕುರಿತು ಹೇಳಿದೆ. ಅಲ್ಲದೇ ಬ್ಯಾಂಕ್ ಉದ್ಯೋಗ ಪಡೆಯಲು ಕೌಶಲ್ಯ/ ತರಬೇತಿ ಕಾರ್ಯಕ್ರಮಗಳನ್ನು ನಡೆಸುವಾಗ ಹೆಚ್ಚಿನ ಯುವ ಜನರ ನೋಂದಣಿಯಾಗುತ್ತಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+