ಸಿಆರ್ ಪಿಎಫ್ ನಲ್ಲಿ 39 ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ
ನವದೆಹಲಿ, ಫೆಬ್ರವರಿ 27: ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್(CRPF) ತನ್ನ ಅಧಿಕೃತ ವೆಬ್ ತಾಣದಲ್ಲಿ 39 ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿದ ನಂತರ ಅರ್ಜಿಯನ್ನು ಪೋಸ್ಟ್ ಮೂಲಕ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 31,2019 ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: Central Reserve Police Force
ಹುದ್ದೆ ಹೆಸರು: ಕಮಾಂಡೆಂಟ್, ಡೆಪ್ಯುಟಿ ಕಮಾಂಡೆಂಟ್ಸ್ ಮತ್ತು ಅಸಿಸ್ಟೆಂಟ್ ಕಮಾಂಡೆಂಟ್ಸ್
ಒಟ್ಟು ಹುದ್ದೆ : 39
ಉದ್ಯೋಗ ಸ್ಥಳ : ಗುವಾಹಟಿ, ಜಮ್ಮು, ಹೈದರಾಬಾದ್, ಕೊಲ್ಕತ್ತಾ ಹಾಗೂ ಇತರೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 31, 2019

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದಿರುವುದರ ಜೊತೆಗೆ ಸಿವಿಲ್ ಕ್ಷೇತ್ರದಲ್ಲಿ 5 ರಿಂದ 10 ವರ್ಷಗಳ ಅನುಭವವನ್ನು ಹೊಂದಿರಬೇಕು.
ಸಂಬಳ ನಿರೀಕ್ಷೆ : ಕಮಾಂಡೆಂಟ್ - 1,23,100/-ರಿಂದ 2,15,900/-,
* ಡೆಪ್ಯುಟಿ ಕಮಾಂಡೆಂಟ್ (ಇಂಜಿನಿಯರ್) -67,7000 /- ರಿಂದ 2,08,700/- ,
* ಅಸಿಸ್ಟೆಂಟ್ ಕಮಾಂಡೆಂಟ್ (ಇಂಜಿನಿಯರ್)- 56,100/-ರಿಂದ 1,77,500ರೂ
ನೇಮಕಾತಿ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ, ಕಾರ್ಯಕ್ಷಮತೆ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ರೀತಿಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ತಮ್ಮ ಸಹಿಯೊಂದಿಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.
ವಿಳಾಸ:
ಡೆಪ್ಯುಟಿ ಇನ್‌ಸ್ಟೆಕ್ಟರ್ ಜನರಲ್,
ಡೈರೆಕ್ಟರ್ ಜನರಲ್,
ಸಿಆರ್‌ಪಿಎಫ್, ಸಿಜಿಓ ಕಾಂಪ್ಲೆಕ್ಸ್, ಬ್ಲಾಕ್ ನಂ.1,
ಲೋಧಿ ರೋಡ್, ನವದೆಹಲಿ-110003
ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications